ಕಾಲಮಿತಿಯಲ್ಲಿ ಬಾಕಿ ಕೆಲಸ ಪೂರ್ಣಗೊಳಿಸಿ

Complete pending work within the deadline.
Complete pending work within the deadline.
Published on
ತಿಪಟೂರು : ರಾಜ್ಯ ಸರ್ಕಾರದ ಆದ್ಯತೆಯ ಕಾರ್ಯಕ್ರಮವಾಗಿರುವ ಇ&ಪೌತಿ ಖಾತೆ ಪ್ರಕ್ರಿಯೆಯನ್ನು ನಿಗದಿತ ಅವಧಿಯೋಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಿಪಟೂರಿನಲ್ಲಿ ಮಂಗಳವಾರ ಉಪವಿಭಾಗ ಮಟ್ಟದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇ- ಪೌತಿ ಖಾತೆ ಬಾಕಿ ಇರುವ ಎಲ್ಲ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. -ಪೌತಿ ಖಾತೆಗೆ ಸಂಬಂಧಿತ ಬಾಕಿ ಕೆಲಸಗಳನ್ನು ಸರ್ಕಾರ ನಿಗದಿಪಡಿಸಿದ ಗುರಿಯಂತೆ ಸಮಯಕ್ಕೆ ಪೂರ್ಣಗೊಳಿಸಬೇಕು, ಗ್ರಾಮ ಆಡಳಿತಾಧಿಕಾರಿಗಳು ಶನಿವಾರದೊಳಗೆ ನೀಡಲಾದ ಗುರಿಯನ್ನು ಕಡ್ಡಾಯವಾಗಿ ಸಾಧಿಸಬೇಕು ಎಂದರು.
ಸಾರ್ವಜನಿಕರಿಗೆ ತ್ವರಿತ ಹಾಗೂ ಪರಿಣಾಮಕಾರಿ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ, ಯಾವುದೇ ರೀತಿಯ ವಿಳಂಬವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಸಭೆಯಲ್ಲಿ ಐಪಿಜಿಆರ್​ಎಸ್​, ಸಿಪಿಜಿಆರ್​ಎಂಎಸ್​ ಹಾಗೂ ಜನಸಂಪರ್ಕ ಸಭೆಗಳ ಅಹವಾಲುಗಳ ವಿಲೇವಾರಿ, ಕಂದಾಯ ಸಮಾವೇಶ ಕಾರ್ಯಕ್ರಮದ ಸಿದ್ಧತೆ, ಇ-&ಪೌತಿ ಪ್ರಗತಿ, ಸರ್ಕಾರಿ ಭೂಮಿ ಗುರುತುಪಡಿಸುವಿಕೆ, ಕಂದಾಯ ಗ್ರಾಮ ಹಕ್ಕುಪತ್ರ ವಿತರಣೆ ಹಾಗೂ ಸಕಾಲ ಪ್ರಕರಣಗಳ ಪ್ರಗತಿ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಉಪವಿಭಾಗಾಧಿಕಾರಿ ಸಪ್ತಶ್ರೀ, ತಿಪಟೂರು ತಹಸೀಲ್ದಾರ್​ ಮೋಹನಕುಮಾರ್​, ಚಿಕ್ಕನಾಯಕನಹಳ್ಳಿ ತಹಸೀಲ್ದಾರ್​ ಮಮತಾ, ತುರುವೇಕೆರೆ ತಹಸೀಲ್ದಾರ್​ ಕುಂಜಿ ಅಹ್ಮದ್​, ತಿಪಟೂರು ಉಪ ವಿಭಾಗದ ಕಂದಾಯ ಅಧಿಕಾರಿಗಳು ಮತ್ತು ವಿಎಒಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net