ಗಲಾಟೆ ಮಾಡಿದ ಮೂವರ ವಿರುದ್ಧ ದೂರು ದಾಖಲು

Complaint filed against three people for creating a disturbance.
Complaint filed against three people for creating a disturbance.
Published on
ಮುಳಬಾಗಿಲು: ಹಾಲು ಪರೀಕ್ಷೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಮುಳಬಾಗಿಲು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉರುಕುಂಟೆ ಮಿಟ್ಟೂರು ಗ್ರಾಮದ ನಿವಾಸಿ ಶ್ರೀನಿವಾಸ (44) ನೀಡಿದ ದೂರಿನ ಮೆರೆಗೆ, ಜು.5ರಂದು ಸಂಜೆ 6ರ ಸುಮಾರಿಗೆ ಗ್ರಾಮದ ಹಾಲು ಡೈರಿಯಲ್ಲಿ ಹಾಲು ಪರೀಕ್ಷೆ ಮಾಡುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಚಿತ್ತೇರಿ ಗ್ರಾಮದ ಮಂಜುನಾಥ್​, ನಿಖಿಲ್​, ನಾಗೇಶ್​ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಮುಳಬಾಗಿಲು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net