

ಪ್ರಮುಖ ಮುಖ್ಯಾಂಶಗಳು
ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದ್ದ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘವನ್ನು ಉತ್ತಮವಾಗಿ ನಿರ್ವಹಿಸಿ ಸದೃಢ ಸಂಘವನ್ನಾಗಿ ಬೆಳೆಸಲಾಗುತ್ತದೆ. ಸ್ವಂತ ಕಟ್ಟಡ ನಿರ್ಮಿಸಿಕೊಂಡು 25 ವರ್ಷಗಳಿಂದ ಲಾಭದಾಯಕವಾಗಿ ನಡೆಸುತ್ತಿದ್ದೇವೆ. ಸಂಘದ ಕೆಲ ನಿರ್ದೇಶಕರು, ಶಾಸಕ ಸುಬ್ಬಾರೆಡ್ಡಿ ಅವರು ಈಗಾಗಲೇ ನನಗೆ ಬೆಂಬಲ ನೀಡಿರುವುದರಿಂದ ಈ ಬಾರಿಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಪ್ರಾಮಾಣಿಕ ಸೇವೆಗೆ ಜಯ ಸಿಗಲಿದೆ.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಎಸ್.ರಮೇಶ್ಬಾಬು, ಗೂಳೂರು ಸೊಸೈಟಿ ಅಧ್ಯಕ್ಷ ಸಿ.ಎನ್.ಬಾಬುರೆಡ್ಡಿ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ. ನಮ್ಮ ಮುಖಂಡರಿಗೆ ಶಾಸಕ ಸುಬ್ಬಾರೆಡ್ಡಿ ಅಶೀರ್ವಾದ ನೀಡಿರುವುದರಿಂದ ಈ ಬಾರಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇವೆ.