

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:
ಭೂಸ್ವಾಧಿನ ಪರಿಹಾರ ನೀಡುವುದರಲ್ಲಿ ಸರ್ಕಾರದ ವಿಳಂಬ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಹೈಕೋರ್ಟ್, ಮಂಗಳೂರು ವಿಮಾನ ನಿಲ್ದಾಣದ ರನ್ವೇ ಟರ್ಮಿನಲ್ ಟವರ್ ನಿಮಾರ್ಣಕ್ಕಾಗಿ 1990ರಲ್ಲಿ ವಶಪಡಿಸಿಕೊಂಡಿದ್ದ ಜಮೀನಿಗೆ ಸಂಬಂಧಿಸಿದಂತೆ, ಸಂತ್ರಸ್ತ ಭೂಮಾಲೀಕರೊಬ್ಬರಿಗೆ ನೀಡಬೇಕಾದ ಪರಿಹಾರದ ಮೌಲ್ಯವನ್ನು ಪ್ರತಿ ಸೆಂಟ್ಗೆ 250 ರೂ. ನಿಂದ 2.78 ಲಕ್ಷ ರೂ. ಗೆ ಏರಿಸಿದ ಆದೇಶಿಸಿದೆ. ಆ ಮೂಲಕ ಮೂರು ದಶಕಗಳ ನಂತರ ಸಂತ್ರಸ್ತ ಭೂಮಾಲೀಕನಿಗೆ ನ್ಯಾಯ ಒದಗಿಸಿದೆ.
ℹ️
ಹಿಂದಿನ ಬೆಲೆ ನೀಡುವುದು ಹಾಸ್ಯಾಸ್ಪದ
1990ರ ದಶಕದ ಮಾರುಕಟ್ಟೆ ದರದಲ್ಲಿ ಇಷ್ಟೊಂದು ವರ್ಷಗಳ ನಂತರ ಪರಿಹಾರ ನೀಡುವುದನ್ನು ಒಪ್ಪಿದರೆ, ಅದು ಸಂವಿಧಾನ ನೀಡಿರುವ ಆಸ್ತಿಯ ಹಕ್ಕನ್ನು ಹಾಸ್ಯಸ್ಪದಗೊಳಿಸಿದಂತಾಗುತ್ತದೆ. ಹಣದ ಮೌಲ್ಯವು ಕಾಲಕ್ರಮೇಣ ಕುಸಿಯುತ್ತದೆ. 1990 ಅಥವಾ 2003ರಲ್ಲಿ ಆ ಹಣದಿಂದ ಖರೀದಿಸಬಹುದಾದ ವಸ್ತುವನ್ನು 2025&26ರಲ್ಲಿ ಖರೀದಿಸಲು ಸಾಧ್ಯವಿಲ್ಲ. ಜಮೀನನ್ನೇ ನಂಬಿ ಬದಕುವ ರೈತರು ಅಥವಾ ಸಣ್ಣ ಭೂಮಾಲೀಕರು ತಮ್ಮ ಆಸ್ತಿ ಕಳೆದುಕಂಡಾಗ ತಕ್ಷಣಕ್ಕೆ ಪರಿಹಾರ ಸಿಗದಿದ್ದರೆ ಅವರು ಬೀದಿಗೆ ಬೀಳುತ್ತಾರೆ. ಆದ್ದರಿಂದ ಶ್ರೀಘ್ರ ಪರಿಹಾರ ಪಾವತಿಸುವುದು ಸರ್ಕಾರದ ಕರ್ತವ್ಯ ಎಂದು ನ್ಯಾಯಪೀಠ ಎಚ್ಚರಿಸಿದೆ.