ವೃತ್ತಿಗೆ ಸಂವಹನಕ್ಕೆ ಕೌಶಲ ಅಗತ್ಯ

ವಿಜಯಪುರದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಸಂಜಯ ನೀರಲಗಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ತೇಜಸ್ವಿನಿ ವಲ್ಲಭ, ಮಂಜುನಾಥ ಕೋಟೆಣ್ಣವರ, ವಿಜಯಕುಮಾರ ಕಲ್ಯಾಣಪ್ಪಗೋಳ ಮತ್ತಿತರರಿದ್ದಾರೆ.
ವಿಜಯಪುರದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಸಂಜಯ ನೀರಲಗಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ತೇಜಸ್ವಿನಿ ವಲ್ಲಭ, ಮಂಜುನಾಥ ಕೋಟೆಣ್ಣವರ, ವಿಜಯಕುಮಾರ ಕಲ್ಯಾಣಪ್ಪಗೋಳ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಸಂಜಯ ನೀರಲಗಿ ಹೇಳಿಕೆ
  • ಬಿಎಲ್‌ಡಿಇಯಲ್ಲಿ ಉಪನ್ಯಾಸ
ವಿಜಯಪುರ: ಸರಿಯಾದ ಸಂವಹನ ಕೌಶಲದಿಂದ ವೈದ್ಯಕೀಯ ಪ್ರವೃತ್ತಿಯಲ್ಲಿ ಏಳಿಗೆ ಹೊಂದಲು ಸಾಧ್ಯ ಎಂದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಸಂಜಯ ನೀರಲಗಿ ಹೇಳಿದರು.

ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾ ವಿದ್ಯಾಲಯದ ವೈದ್ಯಕೀಯ ಅಧ್ಯಯನ ವಿಭಾಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವೈದ್ಯಕೀಯ ವೃತ್ತಿಯಲ್ಲಿ ಸಂಹವನ ಕೌಶಲದ ಮಹತ್ವ ಕುರಿತು ಅವರು ಉಪನ್ಯಾಸ ನೀಡಿದರು.

ಸಕ್ರಿಯವಾಗಿ ಆಲಿಸುವುದು, ಸ್ಪಷ್ಟವಾಗಿ ಮಾತನಾಡುವುದು, ಕರುಣೆ, ಸಹಾನುಭೂತಿ ತೋರಿಸುವುದು ಇಲ್ಲಿ ಮುಖ್ಯವಾಗಿವೆ. ಅಲ್ಲದೇ, ಸರಿಯಾದ ದೇಹಭಾಷೆಯಿಂದ ರೋಗಿಗಳ ಮತ್ತು ಸಂಬಂಧಿಕರ ಆತ್ಮವಿಶ್ವಾಸ ಗೆಲ್ಲಬಹುದು. ಸರಿಯಾದ ಸಂವಹನ ಕೌಶಲದಿಂದ ತಪ್ಪು ತಿಳಿವಳಿಕೆ ಹೋಗಲಾಡಿಸಿ ಸಂಬಂಧಗಳನ್ನು ಬಲಪಡಿಸಲು ಮತ್ತು ವೈದ್ಯಕೀಯ ವೃತ್ತಿಯಲ್ಲಿ ಏಳ್ಗೆ ಹೊಂದಲು ಸಾಧ್ಯವಿದೆ ಎಂದು ಅವರು ಸಲಹೆ ನೀಡಿದರು.

ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಮಾತನಾಡಿ, ಔಷಧದಿಂದ ಗುಣಪಡಿಸಲಾಗದ ಕಾಯಿಲೆಗಳಿಗೆ ವೈದ್ಯರ ಸಹಾನುಭೂತಿಯ ಸಮಾಲೋಚನೆಯಿಂದ ರೋಗಿ ಮತ್ತು ರೋಗಿಗಳ ಸಂಬಂಧಿಕರನ್ನು ತೃಪ್ತಿ ಪಡಿಸಬಹುದು. ವೈದ್ಯೋನಾರಾಯಣೋ ಹರಿ ಎಂಬ ಉಕ್ತಿಯಂತೆ ರೋಗಿಗಳು ವೈದ್ಯರಲ್ಲಿ ವಿಶ್ವಾಸ ಹೊಂದಲು ಸಂವಹನ ಕೌಶಲ ತುಂಬಾ ಸಹಾಯಕಾರಿಯಾಗಿದೆ ಎಂದು ತಿಳಿಸಿದರು.

ಪ್ರಾಚಾರ್ಯೆ ತೇಜಸ್ವಿನಿ ವಲ್ಲಭ, ವೈದ್ಯಕೀಯ ನಿರ್ದೇಶಕ ವಿಜಯಕುಮಾರ ಕಲ್ಯಾಣಪ್ಪಗೋಳ, ಉಪಪ್ರಾಚಾರ್ಯ ಆನಂದ ಅಂಬಲಿ, ರೋಗ ನಿಧಾನಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುರೇಖಾ ಹಿಪ್ಪರಗಿ, ಪ್ರಾಧ್ಯಾಪಕರಾದ ವಿಜಯಾ ಪಾಟೀಲ, ರೇಖಾ ಬಿರಾದಾರ, ಶ್ರವಣಕುಮಾರ ಮತ್ತಿತರರಿದ್ದರು.

ಸುಮಾರು 80 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಡಾ. ಪ್ರವೀಣ ಗಂಗನಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net