ನಂತರ ಪೊಲೀಸ್ ಇಲಾಖೆ ಇಆರ್‌ಎಸ್‌ಎಸ್‌ವಾಹನಗಳ ಬಗ್ಗೆ ಹಾಗೂ ಸಂಚಾರ ನಿಯಮಗಳು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸಲು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಹಾಗೂ ಅಪರಾಧ ತಡೆಗಟ್ಟಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ವಿವರಿಸಿದರು. ದಲಿತ ಮುಖಂಡರಾದ ಅಮೀನ್ ಶಿವಲಿಂಗಯ್ಯ, ಕಾಡುಕೊತ್ತನಹಳ್ಳಿ ಚಿದಂಬರ ಮೂರ್ತಿ, ಚಿಕ್ಕರಸಿನಕೆರೆ ಮೂರ್ತಿ, ಟಿ.ಬಿ.ಹಳ್ಳಿ ಸಂತೋಷ್, ಗುಡಿಗೆರೆ ಪ್ರಸಾದ್, ಬಸವರಾಜು, ಸತೀಶ್, ಪೂಜಾರಿ ಸಿದ್ದರಾಜು, ಗ್ರಾಪಂ ಸದಸ್ಯರಾದ ಮಾದರಹಳ್ಳಿ ದೇವಿರಮ್ಮ, ಪ್ರಸಾದ್ ಇತರರಿದ್ದರು.