ಸ್ವಗ್ರಾಮದಲ್ಲಿ ಮಹಾದ್ವಾರ ನಿರ್ಮಿಸಲು ಬದ್ಧ highway

ಸ್ವಗ್ರಾಮದಲ್ಲಿ ಮಹಾದ್ವಾರ ನಿರ್ಮಿಸಲು ಬದ್ಧ highway
ಸ್ವಗ್ರಾಮದಲ್ಲಿ ಮಹಾದ್ವಾರ ನಿರ್ಮಿಸಲು ಬದ್ಧ highway
Published on

ಪ್ರಮುಖ ಮುಖ್ಯಾಂಶಗಳು

  • ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್​ ಹೇಳಿಕೆ
  • ಭಿನ್ನಾಭಿಪ್ರಾಯಗಳು ಚುನಾವಣೆಗೆ ಸೀಮಿತವಾಗಿರಲಿ
ಶ್ರೀನಿವಾಸಪುರ: ಗ್ರಾಮದಲ್ಲಿ ಯುವಕರು ಸಮಯ ವ್ಯರ್ಥ ಮಾಡದೆ ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ಕ್ರೀಯಾಶೀಲವಾಗಿ ಕಾರ್ಯತತ್ಪರರಾಗಬೇಕು ಗ್ರಾಮಕ್ಕೆ ಮಹಾದ್ವಾರ ನಿರ್ಮಿಸಲು ನಾನು ಬದ್ಧನಾಗಿದ್ದೇನೆ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್​ ತಿಳಿಸಿದರು. highway
ತಾಲೂಕಿನ ಕಸಬಾ ಹೋಬಳಿಯ ತವರೂರು ಕುಪ್ಪಹಳ್ಳಿಯಲ್ಲಿ ಶುಕ್ರವಾರ ವೈಯಕ್ತಿಕವಾಗಿ 2 ಹೈಮಾಸ್ಟ್​ ದೀಪಗಳನ್ನು ಅಳವಡಿಸಿ ಚಾಲನೆ ನೀಡಿ ಮಾತನಾಡಿದರು. ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಇದಕ್ಕೆ ಗ್ರಾಮಸ್ಥರ ಹೊಂದಾಣಿಕೆ ಬಹಳ ಮುಖ್ಯ. ಭಿನ್ನಾಭಿಪ್ರಾಯಗಳನ್ನು ರಾಜಕೀಯ ಚುನಾವಣೆಗೆ ಮಾತ್ರ ಸೀಮಿತ ಮಾಡಿ ಉಳಿದ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.
ಹೈಮಾಸ್ಟ್​ ದೀಪ ಅಳವಡಿಸಲು ಗ್ರಾಮಸ್ಥರು ಉದಾರವಾಗಿ ಸ್ಥಳಾವಕಾಶ ನೀಡದಿರುವುದು ಬೇಸರ ತರಿಸಿದೆ. ಗ್ರಾಮದ ಮುಂಭಾಗ ಮಹಾದ್ವಾರ ನಿರ್ಮಿಸಬೇಕೆಂಬುದು ನನ್ನ ಆಶಯ. ಯಾವುದೇ ಕ್ಷೇತ್ರದಲ್ಲಿ ನಾನು ಪ್ರತಿನಿಧಿಸುತ್ತಿದ್ದರೂ ತವರೂರನ್ನು ಮರೆಯುವುದಿಲ್ಲ. ಗ್ರಾಮಸ್ಥರು ಹೊಂದಾಣಿಕೆಯಿಂದ ಸಹಕರಿಸಿದಾಗ ಗ್ರಾಮದ ಅಭಿವೃದ್ಧಿಗೆ ನಾನು ಒತ್ತು ನೀಡಲು ಸದಾ ಸಿದ್ಧನಿರುವೆ ಎಂದರು.
ಮೈಕ್ರೋ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಉಳ್ಳನಾಚೇಗೌಡ ಮಾತನಾಡಿ, ಗ್ರಾಮದಲ್ಲಿ ಸೂಕ್ತ ಚರಂಡಿ, ರಸ್ತೆಗಳು ಅಭಿವೃದ್ಧಿಯಾಗಬೇಕಾಗಿದೆ. ಗ್ರಾಮಸ್ಥರಲ್ಲಿ ಸ್ವಯಂಪ್ರೇರಿತವಾಗಿ ಸೇವಾ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಿ ಬರಬೇಕು. ಶಿವನ ದೇವಾಲಯ ನಿಮಾರ್ಣ ಅಭಿವೃದ್ಧಿ ಕೆಲಸಗಳು ಶೇ.20 ಬಾಕಿ ಉಳಿದಿದೆ. ಇದಕ್ಕೆ ಗ್ರಾಮಸ್ಥರು ಕೈ ಜೋಡಿಸಬೇಕು. ಜತೆಗೆ ಶಾಸಕರು ಹೆಚ್ಚು ಜವಾಬ್ದಾರಿ ತೆಗೆದುಕೊಂಡು ದೇವಸ್ಥಾನ ಪ್ರಾರಂಭೋತ್ಸವ ಮಾಡಿಕೊಡಬೇಕು ಎಂದು ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು.
ಉಳ್ಳನಾಚೇಗೌಡ, ತಾಪಂ ಮಾಜಿ ಸದಸ್ಯ ಕಾಡುದೇವಂಡಹಳ್ಳಿ ಕೆ.ಪಿ. ನಾಗೇಶ್​, ಮಾಸ್ತೇನಹಳ್ಳಿ ಗ್ರಾಪಂ ಉಪಾಧ್ಯಕ್ಷ ಎಂ.ಆರ್​. ರಾಜಣ್ಣ, ಸದಸ್ಯ ನಾಗರಾಜ್​, ಗ್ರಾಮಸ್ಥರಾದ ನಾರಾಯಣಸ್ವಾಮಿ, ಮುನಿರೆಡ್ಡಿ, ಮನೋಹರ್​, ನಿವೃತ್ತ ಮುಖ್ಯಶಿಕ್ಷಕ ಗೋಪಾಲಗೌಡ, ಪಿಳ್ಳಾರೆಡ್ಡಿ, ರಾಮೇಗೌಡ, ರಾಜಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net