ಹೊಸ ಆವಿಷ್ಕಾರಗಳಿಗೆ ಕಾಲೇಜು ಶಿಕ್ಷಣ ನಾಂದಿ / HOSAKOTE

ಹೊಸಕೋಟೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೀರೇಂದ್ರ ಸಿಂಗ್​, ಸದಸ್ಯರಾದ ಎಂ.ವಾಸುದೇವಯ್ಯ, ಎಚ್​.ಟಿ.ಕೃಷ್ಣಪ್ಪ, ಆರತಿ ರಾಜ್​, ಟಿ.ಕೃಷ್ಣಪ್ಪ, ಪ್ರಾಂಶುಪಾಲ ಸತೀಶ್​ ಇತರರು ಇದ್ದರು.
ಹೊಸಕೋಟೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೀರೇಂದ್ರ ಸಿಂಗ್​, ಸದಸ್ಯರಾದ ಎಂ.ವಾಸುದೇವಯ್ಯ, ಎಚ್​.ಟಿ.ಕೃಷ್ಣಪ್ಪ, ಆರತಿ ರಾಜ್​, ಟಿ.ಕೃಷ್ಣಪ್ಪ, ಪ್ರಾಂಶುಪಾಲ ಸತೀಶ್​ ಇತರರು ಇದ್ದರು.
Published on
ಹೊಸಕೋಟೆ : ವಿದ್ಯೆ ಕದಿಯಲಾಗದ ಸಂಪತ್ತು. ಕಾಲೇಜು ಜೀವನ ಹೊಸ ಅನುಭವ ನೀಡಲಿದೆ. ಹೊಸ ಹೊಸ ವಿಚಾರಗಳ ಆವಿಷ್ಕಾರಗಳಿಗೆ ನಾಂದಿಯಾಗಲಿದ್ದು, ಉತ್ತಮ ಗುರಿ ಇಟ್ಟುಕೊಂಡು ಗುರು ಹಿರಿಯರ ಮಾರ್ಗದರ್ಶನದಿಂದ ಸಾಧನೆಯತ್ತ ಸಾಗಬೇಕು ಎಂದು ಹೊಸಕೋಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್​ ಮೂರ್ತಿ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸತಿಯನ್ನು ಗೌರವಿಸಬೇಕಾದದ್ದು, ಪ್ರತಿಯೊಬ್ಬರ ಕರ್ತವ್ಯ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೀರೇಂದ್ರ ಸಿಂಗ್​ ಮಾತನಾಡಿ, ಸಮಾಜದ ಗಣ್ಯವ್ಯಕ್ತಿಗಳ ಆದರ್ಶ ಪಾಲನೆಯಿಂದ ಹಾಗೂ ನಮ್ಮ ಸನ್ನಡತೆ, ಸಾಧನೆಯಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ವಿಷಯವಾರು ಶೇ.100ರಷ್ಟು ಅಂಕ ಪಡೆದ 12 ವಿದ್ಯಾರ್ಥಿಗಳಿಗೆ ಉಪನ್ಯಾಸಕರು ವೈಯಕ್ತಿಕವಾಗಿ ತಲಾ 10 ಸಾವಿರ ರೂ. ನಗದು ಬಹುಮಾನ ವಿತರಿಸಿದರು. ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಟಾಪರ್​ ಹಾಗೂ ರಾಜ್ಯಕ್ಕೆ 11ನೇ ಸ್ಥಾನ ಪಡೆದ ಆರ್​.ದಿವ್ಯಾ, ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಆರ್​.ನಾಗಶ್ರೀ ಹಾಗೂ ವಿಜ್ಞಾನ ವಿಭಾಗದಲ್ಲಿ ಕಾಲೇಜಿನ ಟಾಪರ್​ ಆದ ಜಿ.ಮಾನಸಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಅನಿತಾ ಕುಮಾರ್​, ಧನಂಜಯ್​, ಸುಬ್ರಹ್ಮಣ್ಯ ಗಣಪತಿ ಹೆಗ್ಗಡೆ, ಮಂಜುನಾಥ್​, ಮೂರ್ತಿ, ಜಗದೀಶ್​, ಪ್ರೇಮಾ, ನಟರಾಜ್​, ಮುಖಂಡರು ಇದ್ದರು.

ವಿದ್ಯಾರ್ಥಿಗಳು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಹಾಗೆ ಮನಸ್ಸು ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಆರೋಗ್ಯಕರ ಪರಿಸರ ನಿಮಾರ್ಣ ಸಾಧ್ಯ. ರಸ್ತೆಗಳಲ್ಲಿ ಕಸವನ್ನು ಎಸೆಯಬೇಡಿ. ಕಸ ಸಂಗ್ರಹ ವಾಹನ ಬಾರದಿದ್ದರೆ ಕರೆ ಮಾಡಿ, ಕಸವನ್ನು ವಾಹನಕ್ಕೆ ನೀಡಿ.

— > ನೀಲಾ ಲೋಚನ ಪ್ರಭು ನಗರಸಭೆ ಆಯುಕ್ತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net