ಗ್ರಾಹಕರ ಮಾಹಿತಿ ಸಂಗ್ರಹ ಕಡ್ಡಾಯ

 Collection of customer information is mandatory.
Collection of customer information is mandatory.
Published on
ಲಾಡ್ಜ್​ ಹೋಟೆಲ್​ ಮಾಲೀಕರಿಗೆ ಪೊಲೀಸ್​ ಎಚ್ಚರಿಕೆ
ಗೌರಿಬಿದನೂರು : ಲಾಡ್ಜ್​ ಮತ್ತು ಹೋಟೆಲ್​ ಮಾಲೀಕರು ಕಡ್ಡಾಯವಾಗಿ ಕೊಠಡಿಗಳನ್ನು ಬಾಡಿಗೆ ಪಡೆಯುವವರ ಗುರುತಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಬೇಕು ಎಂದು ಸಿಪಿಐ ಅಂಜನ್​ ಕುಮಾರ್​ ತಿಳಿಸಿದರು.
ನಗರ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಲಾಡ್ಜ್​ ಮಾಲೀಕರ ಸಭೆಯಲ್ಲಿ ಮಾತನಾಡಿ, ಸುರಕ್ಷತೆ ದೃಷ್ಠಿಯಿಂದ ಪ್ರವೇಶದ್ವಾರ, ಕಾರಿಡಾರ್​ ಸೇರಿ ಪ್ರಮುಖ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಸುರಕ್ಷತೆ ಹಾಗೂ ನಿಯಮಾವಳಿಗಳನ್ನು ಉಲ್ಲಂಸಿದರೆ ಲೈಸೆನ್ಸ್​ ರದ್ದುಪಡಿಸುವುದು ಸೇರಿ ಕ್ರಮ ಎದುರಿಸಬೇಕಾಗುತ್ತದೆ ಎಂದರು.
ನಗರ ಪೊಲೀಸ್​ ಠಾಣೆ ಪಿಎಸ್​ಐ ವರಲಕ್ಷ್ಮಿ ಮಾತನಾಡಿ, ಲಾಡ್ಜ್​ಗೆ ಬರುವ ಪ್ರತಿಯೊಬ್ಬ ಗ್ರಾಹಕರಿಂದ ಆಧಾರ್​ ಕಾರ್ಡ್​ ಅಥವಾ ಇತರ ಅಧಿಕೃತ ಗುರುತಿನ ಚೀಟಿಯ ಪ್ರತಿ ಪಡೆಯಬೇಕು. ಕಾನೂನುಬಾಹಿರ ಚಟುವಟಿಕೆಗಳಿಗೆ ಕೊಠಡಿಗಳನ್ನು ಬಾಡಿಗೆಗೆ ನೀಡುವುದು ಅಪರಾಧ. ಅಪರಾಧಿಗಳು ಅಥವಾ ಶಂಕಿತ ವ್ಯಕ್ತಿಗಳು ತಂಗಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಅಪರಾಧ ವಿಭಾಗದ ಪಿಎಸ್​ಐ ಲಲಿತಮ್ಮ, ಪೇದೆಗಳಾದ ಕುಮಾರ್​ ನಾಯಕ್​, ಮಂಜು, ಸುಬ್ರಮಣಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net