ತಾಯಿಯ ಮಡಿಲಲ್ಲಿದ್ದ ಕಂದಮ್ಮನ ಮೇಲೆ ತೆಂಗಿನಕಾಯಿ ಬಿದ್ದು ದುರಂತ ಸಾವು
ಶಸ್ತ್ರಚಿಕಿತ್ಸೆ ನಡೆಸಿದರೂ ಚಿಕಿತ್ಸೆ ಫಲಿಸದೆ ಗಂಡು ಮಗು ಸಾವು
ಬ್ರಹ್ಮಾವರ ತಾಲೂಕು ಚಾಂತಾರು ಹೆರಂಜಾಲು ಗ್ರಾಮದಲ್ಲಿ ನಡೆದ ದುರಂತ
ಉಡುಪಿ: ಅಮ್ಮನ ಮಡಿಲಲ್ಲಿದ್ದ ಮಗುವಿನ ಮೇಲೆ ಆಕಸ್ಮಿಕವಾಗಿ ತೆಂಗಿನ ಮರದಿಂದ ಕಾಯಿ (Udupi Coconut Fall Accident)ಬಿದ್ದು , ಒಂದುವರೆ ವರ್ಷದ ಗಂಡು ಮಗು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತೂರು ಹೆರೆಂಜಾಲು ಗ್ರಾಮದಲ್ಲಿ ನಡೆದಿದೆ.
ಪ್ರಶಾಂತ್ – ಸುಚಿತ್ರಾ ದಂಪತಿಯ ಒಂದುವರೆ ವರ್ಷದ ಎರಡನೇ ಪುತ್ರ ದಕ್ಷ ಮೃತಪಟ್ಟಿರುವ ಮಗು. ಅಮ್ಮನ ಮಡಿಲಲ್ಲಿ ಆಡುತ್ತಾ, ಅಪ್ಪನ ತೋಳಲ್ಲಿ ಇರಬೇಕಿದ್ದ ಮಗುವು ಈಗ ಅವರ ಕಣ್ಮುಂದೆಯೇ ಪ್ರಾಣ ಬಿಟ್ಟಿದೆ. ಸದ್ಯ ಚಾಂತಾರು ಹೆರಂಜಾಲು ಗ್ರಾಮದಲ್ಲಿ ಸದ್ಯ ಮೌನ ಮಡುಗಟ್ಟಿದೆ
ಏನಾಗಿತ್ತು?
ಒಂದುವರೆ ವರ್ಷದ ಕಂದಮ್ಮನ ತಲೆ ಮೇಲೆ ತೆಂಗಿನಕಾಯಿ ಬಿದ್ದು ತೀವ್ರ ಗಾಯಗೊಂಡಿತ್ತು. ಕೂಡಲೇ ಮಗುವನ್ನು ಸ್ಥಳೀಯರ ನೆರವಿನಿಂದ ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನಪ್ಪಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಒಂದುವರೆ ವರ್ಷದ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ತಾಯಿ ಸುಚಿತ್ರ ಮನೆಯ ಮುಂಭಾಗದಲ್ಲಿದ್ದರು. ಈ ವೇಳೆ ಮೇಲಿಂದ ತೆಂಗಿನಕಾಯಿ ನೇರ ಮಗುವಿನ ತಲೆ ಮೇಲೆ ಬಿದ್ದಿದ್ದೆ. ಮಗುಗೆ ಬಿದ್ದ ಹೊಡೆತಕ್ಕೆ ತೀವ್ರ ಗಾಯವಾಗಿ ರಕ್ತಸ್ರಾವವಾಗಿತ್ತು.
ಸುಚಿತ್ರಾ ಅವರು ಕೂಡಲೇ ತಮ್ಮ ಮನೆಯ ಅಕ್ಕಪಕ್ಕದಲ್ಲಿದ್ದ ಜನರ ಸಹಾಯದಿಂದ ಉಡುಪಿಯ ಪ್ರಖ್ಯಾತ ಆಸ್ಪತ್ರೆ ಮಣಿಪಾಲಕ್ಕೆ ದಾಖಲಿಸಿದರು. ವೈದ್ಯರು ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿದರೂ ಚಿಕಿತ್ಸೆ ಫಲಿಸದೆ ಗಂಡು ಮಗು ಸಾವನಪ್ಪಿದೆ. ಘಟನೆ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.