ಹೋರಾಟಕ್ಕೆ ದಲಿತ ಪರ ಸಂಘಟನೆಗಳ ಒಕ್ಕೂಟ ಬೆಂಬಲ Protest

Protest ಬೈರಮಂಗಲ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ರಿಪಬ್ಲಿಕ್ ಪಾರ್ಟಿ ಆ್ ಇಂಡಿಯಾ ಹಾಗೂ ದಲಿತ ಪರ ಸಂಘಟನೆಗಳು ಬೆಂಬಲ ಸೂಚಿಸಿ ಪಾದಯಾತ್ರೆ ನಡೆಸಿದ್ದರು.
Protest ಬೈರಮಂಗಲ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ರಿಪಬ್ಲಿಕ್ ಪಾರ್ಟಿ ಆ್ ಇಂಡಿಯಾ ಹಾಗೂ ದಲಿತ ಪರ ಸಂಘಟನೆಗಳು ಬೆಂಬಲ ಸೂಚಿಸಿ ಪಾದಯಾತ್ರೆ ನಡೆಸಿದ್ದರು.
Published on
ಬಿಡದಿ: ಬೈರಮಂಗಲ ಗ್ರಾಮದಲ್ಲಿ ಸಮಗ್ರ ಉಪನಗರ ಯೋಜನೆ ಕೈ Protest ಬಿಡುವಂತೆ ರೈತರು ನಡೆಸುತ್ತಿರುವ ನಿರಂತರ ಪ್ರತಿಭಟನೆಗೆ ರಿಪಬ್ಲಿಕ್ ಪಾರ್ಟಿ ಆ್ ಇಂಡಿಯಾ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟ ಮಂಗಳವಾರ ಬೆಂಬಲ ಸೂಚಿಸಿತ್ತು.
ರಿಪಬ್ಲಿಕ್ ಪಾರ್ಟಿ ಆ್ ಇಂಡಿಯಾ ಅಧ್ಯಕ್ಷ ವೆಂಕಟಸ್ವಾಮಿ ನೇತೃತ್ವದಲ್ಲಿ ನೂರಾರು ಮಂದಿ ಕಾರ್ಯಕರ್ತರು ಹಾಗೂ ದಲಿತ ಸಂಘಟನೆಗಳ ಮುಖಂಡರು ಬೈರಮಂಗಲ ಗ್ರಾಮದ ಹೆಬ್ಬಾಗಿಲಿನಿಂದ ಪ್ರತಿಭಟನಾ ಸ್ಥಳಕ್ಕೆ ಪಾದಯಾತ್ರೆ ಮೂಲಕ ಅಗಮಿಸಿದ್ದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವೆಂಕಟಸ್ವಾಮಿ ಮಾತನಾಡಿ, ಕ್ಷೇತ್ರದವರು ಮುಖ್ಯಮಂತ್ರಿಯಾಗಿದ್ದು ಇಲ್ಲಿನ ರೈತರ ಹಿತ ಕಾಯುವುದನ್ನು ಬಿಟ್ಟು ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಈ ಯೋಜನೆಗೆ ಒಳಪಡುವ ಗ್ರಾಮಗಳ ರೈತರೆಲ್ಲ ಜಮೀನು ಕೊಡಲು ಒಪ್ಪಿಕೊಂಡಿದ್ದಾರೆ ಎಂದು ಸುಳ್ಳು ಹೇಳುವುದು ಮುಖ್ಯಮಂತ್ರಿಗಳು ಬಿಡಬೇಕು. ರೈತರ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡು ಹಣ ನೀಡಿದರೆ ರೈತರು ಉದ್ದಾರ ಆಗುವುದಿಲ್ಲ. ರೈತರು ಉದ್ದಾರವಾಗಲು ಸಕಾಲದಲ್ಲಿ ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜ ಕೊಟ್ಟರೆ ಸಾಕು ಎಂದರು. ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net