ನೂತನ ಸಚಿವ ಕಾಶಪ್ಪನವರ ಕುರಿತು ಅವಹೇಳನ, ಸಹ ಶಿಕ್ಷಕ ಆನಂದ ಕೆಂಭಾವಿ ಅಮಾನತ್ತು
ನೂತನ ಸಚಿವ ಕಾಶಪ್ಪನವರ-ಅಮಾನತ್ತಾದ ಶಿಕ್ಷಕ ಆನಂದ ಕೆಂಭಾವಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರಮಾಣ ವಚನದ ಫೋಟೊ ಅಪ್‌ಲೋಡ್
ಸಚಿವರಿಗೆ ಕನ್ನಡ ಬರುವುದಿಲ್ಲವೆಂಬ ಸಂದೇಶ
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್
ಕ್ರಮಕ್ಕೆ ಮನವಿ ಮಾಡಿದ್ದ ಗ್ರಾಮಸ್ಥರು
ವಿಜಯಪುರ: ‘ಕರ್ನಾಟಕ ರಾಜ್ಯ ಸರ್ಕಾರದ ನೂತನ ಸಚಿವ ಶ್ರೀ ವಿ.ಎಸ್. ಕಾಶಪ್ಪನವರ ಅವರು ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲ’ ಎಂದು ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇರೆಗೆ ಸಹ ಶಿಕ್ಷಕನೋರ್ವನನ್ನು ಅಮಾನತ್ತಗೊಳಿಸಲಾಗಿದೆ.
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕ ಆನಂದ ಕೆಂಭಾವಿ ಅಮಾನತ್ತಾದ ಶಿಕ್ಷಕ. ಸಚಿವ ಸಂಪುಟ ರಚನೆ ಹಿನ್ನೆಲೆ ನೂತನ ಸಚಿವರಾಗಿ ವಿ.ಎಸ್. ಕಾಶಪ್ಪನವರ ಅವರು ಪ್ರಮಾಣ ವಚನ ಸ್ವೀಕರಿಸುವಾಗಿನ ಫೋಟೊ ವಾಟ್ಸಾಪ್ ಆಪ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ನಿಂದನಾತ್ಮಕ ಸಂದೇಶಗಳನ್ನು ಶಿಕ್ಷಕ ಕೆಂಭಾವಿ ಹರಿಬಿಟ್ಟಿದ್ದನು.
ಈ ಕುರಿತು ಗ್ರಾಮಸ್ಥರು ಇಂಡಿ ಬಿಇಒ ಅವರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು. ಬಿಇಒ ಅವರ ಶಿಫಾರಸ್ಸಿನ ಮೇರೆಗೆ ಶುಕ್ರವಾರ ಸಹ ಶಿಕ್ಷಕ ಆನಂದ ಕೆಂಭಾವಿ ಅವರನ್ನು ಅಮಾನತ್ತುಗೊಳಿಸಲಾಗಿದೆ ಎಂದು ಡಿಡಿಪಿಐ ಮಂಜುನಾಥ ಗುಳೇದಗುಡ್ಡ ‘ವಿಜಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.