ಉ.ಕ ಅಭಿವೃದ್ಧಿ ವಿಶೇಷ ಅನುದಾನ ಘೋಷಿಸಲಿ

ಉ.ಕ ವಿಶೇಷ ಅನುದಾನ ಘೋಷಣೆಗೆ ಒತ್ತಾಯ
ಉ.ಕ ವಿಶೇಷ ಅನುದಾನ ಘೋಷಣೆಗೆ ಒತ್ತಾಯ
Published on

ಪ್ರಮುಖ ಮುಖ್ಯಾಂಶಗಳು

  • ಉ.ಕ ಅಭಿವೃದ್ಧಿ ವಿಶೇಷ ಅನುದಾನ ಘೋಷಣೆಗೆ ಒತ್ತಾಯ
  • ಮುಖ್ಯಮಂತ್ರಿಗೆ ರಮೇಶ ಕತ್ತಿ ಒತ್ತಾಯ
  • ಮೈಸೂರು ಭಾಗಕ್ಕೆ ನೀಡುವ ಪ್ರಾಶಸ್ತ್ಯ ಉ.ಕ ನೀಡುವಂತೆ ಆಗ್ರಹ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಿಸಿ
ಚಿಕ್ಕೋಡಿ : ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸುತ್ತಿದ್ದಾರೆ ಡಿ.ಕೆ.ಶಿವಕುಮಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಒತ್ತಾಯಿಸಿದ್ದಾರೆ.
ಈ ಕುರಿತು ತಾಲ್ಲೂಕಿನ ಕಬ್ಬೂರ ಗ್ರಾಮದ ಪತ್ರಕರ್ತರೊಂದಿಗೆ ಅವರು ಮಾತನಾಡಿದರು, ಉತ್ತರ ಕರ್ನಾಟಕವು ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದ್ದರೂ, ಅಭಿವೃದ್ಧಿಯ ಹಲವು ಸವಾಲುಗಳನ್ನು ಎದುರಿಸುತ್ತಿದೆ, ನೀರಾವರಿ, ಕೈಗಾರಿಕೆ, ಆರೋಗ್ಯ ಶಿಕ್ಷಣ, ಉದ್ಯೋಗ ಮತ್ತು ಸೌಕರ್ಯಗಳು ಕೊರತೆಯಿಂದ ಈ ಭಾಗದ ಜನರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಕೃಷ್ಣಾ, ಮಲಪ್ರಭಾ ಮತ್ತು ಘಟಪ್ರಭಾ ನದಿಗಳು ಹರಿಯುತ್ತಿದ್ದರೂ, ನೀರಿನ ಸಮರ್ಪಕ ಬಳಕೆ ಹಾಗೂ ನೀರಾವರಿ ಯೋಜನೆಗಳ ಪೂರ್ಣ ಅನುಷ್ಠಾನ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಪರಿಣಾಮವಾಗಿ ರೈತರು ಅನೇಕ ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಬೇಕಾಗಿದೆ. ಅನಿಶ್ಚಿತ ಮಳೆ ಹಾಗೂ ಬರಗಾಲದ ಪರಿಣಾಮ ಕೃಷಿ ಉತ್ಪಾದನೆ ಕುಂಠಿತವಾಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೈಗಾರಿಕೆಗಳ ಕೊರತೆಯಿಂದ ಉದ್ಯೋಗಾವಕಾಶಗಳು ಸೀಮಿತವಾಗಿದ್ದು, ಸಾವಿರಾರು ಯುವಕರು ಉದ್ಯೋಗ ಅರಸಿ ರಾಜ್ಯದ ಇತರ ಭಾಗಗಳು ಮತ್ತು ಹೊರಹೋಗುತ್ತವೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಉನ್ನತ ಶಿಕ್ಷಣ ಮತ್ತು ತಾಂತ್ರಿಕ ತರಬೇತಿ ಸಂಸ್ಥೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳು ಇನ್ನೂ ಸಮರ್ಪಕವಾಗಿ ಲಭ್ಯವಾಗದ ಕಾರಣ, ಗಂಭೀರ ಚಿಕಿತ್ಸೆಗೆ ಜನರು ದೂರದ ನಗರಗಳು ಅವಲಂಬಿಸಬೇಕಾಗಿದೆ. ರಸ್ತೆ, ರೈಲು ಮತ್ತು ಇತರ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ,
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು, ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನದು ಹೂಡಿಕೆ ಮಾಡುವುದು ಮತ್ತು ಪ್ರಾದೇಶಿಕ ಸಮತೋಲನದ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುವ ಮೂಲಕ ಮೈಸೂರು ಕರ್ನಾಟಕದ ವಿಷಯದಲ್ಲಿ ತೋರಿಸುತ್ತದೆ ಕಾಳಜಿಯನ್ನು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಯೋಜನೆ ಘೋಷಿಸುವ ಮೂಲಕ ಈ ಭಾಗದ ಜನರು ಯೋಜನೆ ಅಭಿವೃದ್ಧಿ ನಿರೀಕ್ಷೆಗೆ ನೂತನ ಮುಖ್ಯಮಂತ್ರಿ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net