

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ನ್ಯಾಷನಲ್ ಕ್ರೈಮ್ರಿಪೋರ್ಟ್ ಬ್ಯೂರೊ (ಎನ್‌ಸಿಆರ್‌ಬಿ)ವರದಿ ಪ್ರಕಾರನ್ಯಾಯಾಲಯಗಳಲ್ಲಿ ದಾಖಲಾಗುವಪ್ರಕರಣಗಳ ಶಿಕ್ಷೆ ಪ್ರಮಾಣದರದಲ್ಲಿಕರ್ನಾಟಕವು 22ನೇಸ್ಥಾನದಲ್ಲಿದ್ದು ಶೇ.52ರಷ್ಟುಪ್ರಕರಣಗಳ ಶಿಕ್ಷೆ ಪ್ರಮಾಣ ಮಾತ್ರಘೋಷಣೆಯಾಗುತ್ತಿದೆ. ಈ ಪ್ರಮಾಣಹೆಚ್ಚಾಗಿ ತ್ವರಿತಗತಿಯಲ್ಲಿಪ್ರಕರಣಗಳು ಇತ್ಯರ್ಥಗೊಳ್ಳಲುಅಭಿಯೋಜಕರು ಪ್ರಯತ್ನಿಸಬೇಕುಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕೆಇಬಿಇಂಜಿನಿಯರ್ಸ್ ಅಸೋಸಿಯೇಷನ್ರಜತ ಮಹೋತ್ಸವ ಭವನದಲ್ಲಿ ಅಭಿಯೋಗಮತ್ತು ಸರ್ಕಾರಿ ವ್ಯಾಜ್ಯಗಳಇಲಾಖೆ ಮತ್ತು ಕರ್ನಾಟಕ ರಾಜ್ಯಅಭಿಯೋಜನಾಧಿಕಾರಿಗಳ ಸಂಘದಆಶ್ರಯದಲ್ಲಿ ಹಮ್ಮಿಕೊಂಡಿದ್ದತರಬೇತಿ ಕಾರ್ಯಾಗಾರ ಹಾಗೂ 17ನೇರಾಜ್ಯಮಟ್ಟದ ಸಮ್ಮೇಳನವನ್ನುಉದ್ಘಾಟಿಸಿ ಮಾತನಾಡಿದರು.
ಶಾಸಕಾಂಗ,ಕಾರ್ಯಾಂಗ ಮತ್ತುನ್ಯಾಯಾಂಗಗಳು ಸಮನ್ವಯದಿಂದ ಕೆಲಸಮಾಡಿದಾಗ ಸಮೃದ್ಧ ರಾಜ್ಯ ಸ್ಥಾಪನೆಸಾಧ್ಯ. ಎಲ್ಲರೂಇರುವುದು ಜನರ ಹಿತವನ್ನುಕಾಪಾಡುವುದಕ್ಕಾಗಿ.ಅಪರಾಧಿ ಕಾನೂನಿನಿಂದತಪ್ಪಿಸಿಕೊಂಡರೂ ನಿರಪರಾಧಿಗೆಶಿಕ್ಷೆಯಾಗಬಾರದು ಎಂಬ ಮಾತಿನಂತೆ,ಶ್ರೀಮಂತರುತಮಗೆ ಬೇಕಾದ ವಕೀಲರನ್ನುನೇಮಿಸಿಕೊಳ್ಳಬಹುದು.ಆದರೆ ಸರ್ಕಾರಿಅಭಿಯೋಜಕರು ಬಡವರು,ದುರ್ಬಲರ ಪರವಾಗಿನಿಂತು ನ್ಯಾಯವನ್ನು ಕೊಡಿಸಬೇಕು.ಪ್ರಕರಣಗಳುವಿಳಂಬವಾಗುತ್ತಿರುವುದಕ್ಕೆಸಾಕ್ಷಿ ಕೊರತೆ,ತನಿಖೆಯ ಹಂತಇತ್ಯಾದಿ ಕಾರಣಗಳಿದ್ದರೂ ಆ ಎಲ್ಲದೋಷಗಳ ನಡುವೆಯೂ ಶೀಘ್ರ ಇತ್ಯರ್ಥಕ್ಕೆಅಭಿಯೋಜಕರು ಪ್ರಯತ್ನಿಸಬೇಕುಎಂದು ವಿವರಿಸಿದರು.
ಸಮಾರಂಭದಲ್ಲಿಗೃಹ ಸಚಿವ ಜಿ.ಪರಮೇಶ್ವರ,ಕಾನೂನು ಮತ್ತುಸಂಸದೀಯ ಸಚಿವ ಎಚ್.ಕೆ.ಪಾಟೀಲ್,ನ್ಯಾಯಮೂರ್ತಿಎಚ್.ಪಿ.ಸಂದೇಶ್,ಸರ್ಕಾರದ ಅಪರಕಾರ್ಯದರ್ಶಿ ತುಷಾರ್ ಗಿರಿನಾಥ್,ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ,ನಿರ್ದೇಶಕಿಅಂಜಲಿದೇವಿ,ಅಭಿಯೋಜಕರ ಸಂಘದಅಧ್ಯಕ್ಷ ಅಶ್ವತ್ಥನಾರಾಯಣಮತ್ತಿತರರು ಪಾಲ್ಗೊಂಡಿದ್ದರು.
ಅಪರಾಧದವಿಧಾನಗಳು ದಿನೇ ದಿನೇ ಬದಲಾಗುತ್ತಿದ್ದು,ಸೈಬರ್ ಕ್ರೈಮ್ಅಡಿಯಲ್ಲಿ ಆರ್ಥಿಕ ಅಪರಾಧ,ತಾಂತ್ರಿಕಅಪರಾಧಗಳು ಹೆಚ್ಚಾಗುತ್ತಿದ್ದು,ಇವುಗಳ ಬಗ್ಗೆವಾದ ಮಂಡಿಸಲು ಅಭಿಯೋಜಕರಿಗೆತರಬೇತಿಯ ಅವಶ್ಯಕತೆ ಇದೆ ಎಂದುಸಿಎಂ ಸಿದ್ದರಾಮಯ್ಯ ಅಭಿಪ್ರಾಯಿಸಿದರು.ಪ್ರತಿವರ್ಷಇಂತಹ ತರಬೇತಿ ಕಾರ್ಯಾಗಾರದಅಗತ್ಯವಿದ್ದು,ಸಂಘದ ಬೇಡಿಕೆಯಂತೆಅಭಿಯೋಜಕರ ಅಕಾಡೆಮಿ ಸ್ಥಾಪಿಸಿಅಗತ್ಯ ಅನುದಾನ ನೀಡುವ ಭರವಸೆಯನ್ನುನೀಡಿದರು.
ಸಣ್ಣಪುಟ್ಟ ಪ್ರಕರಣಗಳಲ್ಲಿ ಸಿಲುಕಿದವರು ವರ್ಷಗಟ್ಟಲೆ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ದೇಶದ ಸಂಪತ್ತನ್ನು ಕೊಳ್ಳೆ ಹೊಡೆದ ದೊಡ್ಡ ಮನುಷ್ಯರು ವಿದೇಶಗಳಲ್ಲಿ ಕುಳಿತು ಮಜಾ ಮಾಡುತ್ತಿದ್ದಾರೆ. ಅವರಿಗೂ ಶಿಕ್ಷೆಯೂ ಆಗುತ್ತಿಲ್ಲ ಅವರ ಆಸ್ತಿ ಮುಟ್ಟುಗೋಲು ಕೂಡಾ ಆಗುತ್ತಿಲ್ಲ. ಶಿಕ್ಷೆ ಪ್ರಮಾಣ ದರ ಕುಸಿತಕ್ಕೆ ಇದೂ ಒಂದು ಕಾರಣ. ನಮ್ಮ ಸರ್ಕಾರ ರಿಕವರಿ ಆಯೋಗ ರಚನೆಗೆ ಮುಂದಾಗಿದೆ.
ದೇಶ ಎಲ್ಲದರಲ್ಲೂ ಮುಂದುವರೆದಿದೆ ಎಂದು ಹೇಳಲಾಗುತ್ತದೆ. ಆದರೆ ನ್ಯಾಯಾಂಗ ಕ್ಷೇತ್ರದಲ್ಲಿ ಆ ಬೆಳವಣಿಗೆ ಆಗಿದೆಯೇ ಎಂಬುದು ಪ್ರಶ್ನೆ. ಹೈಕೋಟ್‌ನಲ್ಲಿ 3 ಲಕ್ಷ, ಕೆಳಗಿನ ಕೋರ್ಟ್‌ಗಳಲ್ಲಿ 15 ರಿಂದ 17 ಲಕ್ಷ ಪ್ರಕರಣಗಳು ಬಾಕಿ ಇವೆ. ಇವುಗಳು ತ್ವರಿತವಾಗಿ ಇತ್ಯರ್ಥಗೊಂಡು ಕಕ್ಷಿದಾರರಿಗೆ ಬೇಗೆ ನ್ಯಾಯ ಸಿಗುವಂತಾಗಬೇಕು.