ಶೇ.75ಕ್ಕೆ ಮೀಸಲು ಹೆಚ್ಚಳ: ರಾಜ್ಯ ಸರ್ಕಾರ ಉತ್ಸುಕ ಎಂದ ಸಿಎಂ ಸಿದ್ದರಾಮಯ್ಯ

CM Siddaramaiah
CM Siddaramaiah
Published on
ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಆರ್ಥಿಕ, ಸಾಮಾಜಿಕ, ಶೈಣಿಕ ಸಮೀಕ್ಷೆ ವರದಿ ಜಾರಿ ಜತೆಯಲ್ಲೇ ಈಗಿರುವ ಶೇ.50 ಮೀಸಲಾತಿ ಪ್ರಮಾಣವನ್ನು ಶೇ.70 &75ಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರ ಆಸಕ್ತಿ ಹೊಂದಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಎಲ್​.ಜಿ. ಹಾವನೂರು ವರದಿಯ ಸುವರ್ಣ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್​ ವರಿಷ್ಠ ರಾಹುಲ್​ ಗಾಂಧಿಗೆ ಸೈದ್ಧಾಂತಿಕ ಬದ್ಧತೆ ಇದ್ದಿದ್ದರಿಂದಲೇ ಜಾತಿ ಗಣತಿಗೆ ಒತ್ತಡ ಹೇರಿದರು. ಅವರು ಮೊನ್ನೆ ಜಾತಿ ಜನಗಣತಿ ಏನಾಯಿತೆಂದು ನನಗೆ ಕೇಳಿದರು. ಅವರಿಗೆ ಸ್ಪಷ್ಟತೆ ಇರುವುದರಿಂದಲೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಜಾತಿ ಗಣತಿ ನಡೆಯುವಂತೆ ಮಾಡಿದ್ದಾರೆ. ನಮ್ಮ ಸರ್ಕಾರ ಕೂಡ ಈ ಗಣತಿ ಒಪ್ಪಿಕೊಂಡು ಜಾರಿಗೆ ಬದ್ಧವಾಗಿದೆ ಎಂದರು. ದೇವರು, ಧರ್ಮದ ಹೆಸರಲ್ಲಿ ಸಾಯುತ್ತಾ ಇರುವವರೆಲ್ಲರೂ ಹಿಂದುಳಿದವರೇ ಆಗಿದ್ದಾರೆ. ಸ್ವಾರ್ಥಕ್ಕಾಗಿ ಬಿಜೆಪಿ & ಆರ್​ಎಸ್​ಎಸ್​ ಸೇರಿ ಹೆಡ್ಗೇವಾರ್​ ರೀತಿ ಮಾತಾಡ್ತಾರೆ ಎಂದು ವ್ಯಂಗ್ಯವಾಡಿದರು. ಹಿಂದುಳಿದವರು&ದಲಿತರು ತಮ್ಮ ವಿರೋಧಿಗಳಾದ ಆರ್​ಎಸ್​ಎಸ್​& ಬಿಜೆಪಿಗೆ ಸೇರುತ್ತಿದ್ದಾರಲ್ಲ, ಇವರಿಗೆ ಏನು ಹೇಳುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯದ ಪರ: ನನ್ನ ಕೊನೆಯುಸಿರು ಇರುವ ತನಕ ಹಾಗೂ ರಾಜಕಾರಣದಲ್ಲಿ ಇರುವವರೆಗೂ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ. ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂಬ ಕಾರಣದಿಂದಲೇ ಸಮೀೆ ನಡೆಸಲಾಗುತ್ತಿದೆ . ಹಾವನೂರು ವರದಿಯನ್ನು ದೇವರಾಜ ಅರಸರು "ಹಿಂದುಳಿದವರ ಬೈಬಲ್​' ಎಂದು ಕರೆದಿದ್ದರು. ಸುಪ್ರೀಂ ಕೋರ್ಟ್​ ಕೂಡ ಹಾವನೂರು ವರದಿಯನ್ನು ಅಪಾರವಾಗಿ ಮೆಚ್ಚಿಕೊಂಡಿದೆ ಎನ್ನುವುದನ್ನು ಸಿಎಂ ವಿವರಿಸಿದರು.
ಕಾಂಗ್ರೆಸ್​ಗೆ ಪಾಠ ಕಲಿಸಬೇಕಾಗುತ್ತದೆ: ಬೇರೆ ಪಕ್ಷಗಳಿಗೆ ಹೋಲಿಸಿಕೊಂಡರೆ ಕಾಂಗ್ರೆಸ್​ ಸಾಮಾಜಿಕ ನ್ಯಾಯದ ಪರವಾಗಿದೆ ಎಂದುಕೊಂಡಿದ್ದೇವೆ. ಆದರೆ, ಹೇಳಿಕೆ ಮಾತುಗಳನ್ನು ಕೇಳಿ, ಹಿಂದುಳಿದ ಜಾತಿಗಳ ಅಭಿವೃದ್ಧಿಗೆ ಹಿಂದೆ&ಮುಂದೆ ನೋಡುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರ ಎಚ್ಚರಿಕೆ ನೀಡಿದರು. ಅಭಿವೃದ್ಧಿ ನಿಗಮದ ಅನುದಾನ ಬಿಡುಗಡೆಯಲ್ಲಿ ಹಿಂದುಳಿದ ವರ್ಗಗಳಿಗೊಂದು, ಮುಂದುವರಿದ ಜಾತಿಗಳಿಗೊಂದು ಅನುದಾನ ಬಿಡುಗಡೆ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು. ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಜ ತಂಗಡಗಿ, ಬೈರತಿ ಸುರೇಶ್​, ಗ್ಯಾರಂಟಿ ಯೋಜನೆ ಪ್ರಾಧಿಕಾರ ಅಧ್ಯಕ್ಷ ಎಚ್​.ಎಂ. ರೇವಣ್ಣ, ಶಾಸಕ ಶ್ರೀನಿವಾಸ್​ ಸೇರಿ ಹಲವರು ಉಪಸ್ಥಿತರಿದ್ದರು.

17ನೇ ಬಜೆಟ್​ ಮಂಡಿಸುತ್ತೇನೆ

ನಾನು ಹಣಕಾಸು ಮಂತ್ರಿಯಾದಾಗ, ಈ ಸಿದ್ದರಾಮಯ್ಯಗೆ ನೂರು ಕುರಿ ಎಣಿಸೋಕೆ ಬರಲ್ಲ, ಬಜೆಟ್​ ಮಂಡಿಸ್ತಾರಾ ಎಂದು ಪತ್ರಿಕೆಯೊಂದರಲ್ಲಿ ಬರೆದಿದ್ದರು. ಇದನ್ನು ನಾನು ಸವಾಲಾಗಿ ಸ್ವೀಕರಿ ಸಿದೆ. 16 ಬಜೆಟ್​ ಮಂಡಿಸಿದೆ. 17ನೇ ಬಜೆಟನ್ನೂ ಮಂಡಿಸುತ್ತೇನೆ ಎಂದು ಸಿಎಂ ತಿಳಿಸಿದರು.

ಕಾನೂನು ವಿವಿಗೆ ಹಾವನೂರು ಹೆಸರು?

ಕರ್ನಾಟಕ ಕಾನೂನು ವಿಶ್ವವಿದ್ಯಾಲಯಕ್ಕೆ ಎಲ್​.ಜಿ. ಹಾವನೂರು ಹೆಸರಿಡಲು ಪರಿಶೀಲಿಸಿ ಕ್ರಮ ವಹಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಇದಕ್ಕೂ ಮೊದಲು ಮಾತನಾಡಿದ ಮಾಜಿ ಅಡ್ವೋಕೇಟ್​ ಜನರಲ್​ ಪ್ರೊ. ರವಿವರ್ಮ ಕುಮಾರ್​, ಹಾವನೂರು ಸಂವಿಧಾನವನ್ನು ಚೆನ್ನಾಗಿ ಅರಿತಿದ್ದರು. ಅವರ ವರದಿಯನ್ನು ಸುಪ್ರೀಂಕೋರ್ಟ್​ ಕೂಡ ಒಪ್ಪಿದೆ. ದಣ ಆಫ್ರಿಕಾ ಸಂವಿಧಾನ ರಚನೆಯಲ್ಲಿಯೂ ಹಾವನೂರು ಪಾತ್ರವಿದೆ. ಹೀಗಾಗಿ, ಕಾನೂನು ವಿವಿಗೆ ಹಾವನೂರು ಹೆಸರಿಡಬೇಕೆಂದು ಒತ್ತಾಯಿಸಿದರು. ಹಾಗೆಯೇ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗದವರಿಗಾಗಿ "ಹಾವನೂರು ಭವನ' ನಿರ್ಮಾಣ ಮಾಡಬೇಕು. ತಲಾ 25 ಕೋಟಿ ರೂ. ಬಿಡುಗಡೆ ಮಾಡಬೇಕು. ಮೀಸಲಾತಿ ಪಡೆದು ಆಗಿರುವ ಅನುಕೂಲತೆಗಳನ್ನು ತಿಳಿಯಲು ಪ್ರತಿ ವಿಶ್ವವಿದ್ಯಾಲಯದಲ್ಲಿ ಹಾವನೂರು ಅಧ್ಯಯನ ಪೀಠವನ್ನು ಆರಂಭಿಸುವಂತೆ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net