ನಗರದ ಬಸವೇಶ್ವರ ವೃತ್ತದಲ್ಲಿ ಸಿಂದಗಿ ಹಾಗೂ ಆಲಮೇಲ ತಾಲೂಕು ಕುರುಬರ ಸಂಘ ಮತ್ತು ಅಹಿಂದ ಕಾರ್ಯಕರ್ತರು ಗುರುವಾರ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಖಂಡಿಸಿ ಕಪ್ಪು ಪಟ್ಟಿ ಕಟ್ಟಿಕೊಂಡು, ಟೈರ್ ಸುಟ್ಟು ಪ್ರತಿಭಟಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ನಾಯಕನಿಗೆ ಅನ್ಯಾಯವಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತತ್ವದಲ್ಲಿ ಪಕ್ಷದ 130 ಕ್ಕೂ ಅಧಿಕ ಶಾಸಕರು ಚುನಾಯಿತರಾಗಿದ್ದಾರೆ. ಸಿದ್ದರಾಮಯ್ಯನವರ ರಾಜೀನಾಮೆ ನೀಡಿದರೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕುರುಬ ಸಮಾಜ ಸೇರಿ ಅಹಿಂದ ವರ್ಗ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸ್ಥಳೀಯ ಶಾಸಕರು ಕೂಡಾ ಚುನಾವಣೆ ವೇಳೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯನವರ ಹೆಸರು ಮುಂದಿಟ್ಟುಕೊಂಡು ಮತ ಕೇಳಿ ಅಹಿಂದ ವರ್ಗಗಳ ಮತ ಪಡೆದು ಅಧಿಕಾರ ಹಿಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಹಿಂದ ವರ್ಗಕ್ಕೆ ಸಾಕಷ್ಟು ನೋವುಂಟು ಮಾಡಿದೆ ಅಹಿಂದ ವರ್ಗಗಳ ಮತ ಪಡೆದ ಶಾಸಕ ಅಶೋಕ ಮನಗೂಳಿ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಅಗ್ರಹಿಸಿದರು.
ಸಿಂದಗಿ ತಾಲೂಕು ಕುರುಬ ಸಂಘದ ಅಧ್ಯಕ್ಷ ನಿಂಗಣ್ಣ ಬುಳ್ಳಾ, ಆಲಮೇಲ ತಾಲೂಕು ಕುರುಬ ಸಂಘದ ಅಧ್ಯಕ್ಷ ಸಿದ್ದು ಕೆರಿಗೊಂಡ, ಶಿವಾನಂದ ಗಣಿಹಾರ, ದತ್ತು ಎಡಗಿ, ಯಲ್ಲು ಬಮನಳ್ಳಿ, ಭೀಮರಾಯ ಸೀತಿಮನಿ, ಮಾಳು ಗಡೆದ, ಲಕ್ಷ್ಮಣ ಜೇವರ್ಗಿ, ಬಾಪುಗೌಡ ಪಾಟೀಲ್, ಸಿದ್ದು ತಮದೊಡ್ಡಿ, ನಿಂಗಣ್ಣ ಬಿಸಾನಾಳ, ವಿಠಲ ನಾಯಿಕೋಡಿ, ಮಡಿವಾಳಪ್ಪ ಪೂಜಾರಿ ಬಸನಗೌಡ ಪಾಟೀಲ, ಸಿದ್ದರಾಮಯ್ಯ ಅಭಿಮಾನಿಗಳಿದ್ದರು.