ನನ್ನೂರಿನ ಮೈಲಾರಿಯ ರುಚಿ ಈಗ ಬೆಂಗಳೂರಿನಲ್ಲಿ: ಉಪಾಹಾರ ಸವಿದು ಖುಷಿ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ! CM Siddaramaiah

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Published on

ಪ್ರಮುಖ ಮುಖ್ಯಾಂಶಗಳು

  • ಸದಾ ರಾಜಕೀಯ ಚಟುವಟಿಕೆಯಲ್ಲಿ ಬಿಜಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
  • ಜಂಟಿ ಅಧಿವೇಶನದ ನಡುವೆಯೂ ಸ್ವಲ್ಪ ಬಿಡುವು ಮಾಡಿಕೊಂಡು ಹೋಟೆಲ್ ಉದ್ಘಾಟಿಸಿದ ಸಿಎಂ
  • "ಓಲ್ಡ್ ಒರಿಜಿನಲ್ ವಿನಾಯಕ‌ ಮೈಲಾರಿ ಹೋಟೆಲ್" ಉದ್ಘಾಟನೆ ಮಾಡಿದ ಸಿದ್ದರಾಮಯ್ಯ
  • ನನ್ನೂರಿನ ಮೈಲಾರಿಯ ರುಚಿಕರ ತಿಂಡಿ ಸವಿಯುವ ಅವಕಾಶ ಬೆಂಗಳೂರಿಗರಿಗೆ ಸಿಕ್ಕಿದ್ದು ಖುಷಿ ಎಂದ ಸಿಎಂ
ಬೆಂಗಳೂರು: ಸದಾ ರಾಜಕೀಯ ಚಟುವಟಿಕೆಯಲ್ಲಿ ಬಿಜಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah ), ಜಂಟಿ ಅಧಿವೇಶನದ ನಡುವೆಯೂ ಸ್ವಲ್ಪ ಬಿಡುವು ಮಾಡಿಕೊಂಡು ಇಂದು ಹೋಟೆಲ್ ಉದ್ಘಾಟನೆ ಸಮಾರಂಭದಲ್ಲಿ ಕಾಣಿಸಿಕೊಂಡರು.
ಬೆಂಗಳೂರಿನ ಇಂದಿರಾ ನಗರದ ಹಳೇ ತಿಪ್ಪಸಂದ್ರದಲ್ಲಿ ನೂತನವಾಗಿ ಆರಂಭಿಸಲಾದ "ಓಲ್ಡ್ ಒರಿಜಿನಲ್ ವಿನಾಯಕ‌ ಮೈಲಾರಿ ಹೋಟೆಲ್" ಅನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಅಲ್ಲದೆ, ಹೋಟೆಲ್​ನಲ್ಲಿ ಬೆಳಗಿನ ಉಪಹಾರ ಸೇವಿಸಿ, ಸಂತಸ ಹಂಚಿಕೊಂಡಿದ್ದಾರೆ.
1938ರಲ್ಲಿ ಮೈಸೂರಿನಲ್ಲಿ ಆರಂಭವಾದ ಮೈಲಾರಿ ಹೋಟೆಲ್ ತನ್ನ ರುಚಿ ಹಾಗೂ ಗುಣಮಟ್ಟದ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ನನ್ನ ಕಾಲೇಜು ದಿನಗಳಲ್ಲಿ ಆಗಾಗ್ಗೆ ಈ ಹೋಟೆಲ್‌ಗೆ ಹೋಗುತ್ತಿದ್ದೆ, ಈಗಲೂ ಮೈಸೂರಿಗೆ ಹೋದ ವೇಳೆ ಬಿಡುವಾದಾಗ ಭೇಟಿ ನೀಡುತ್ತೇನೆ.
ನನ್ನೂರಿನ ಮೈಲಾರಿಯ ರುಚಿಕರ ತಿಂಡಿ ಸವಿಯುವ ಅವಕಾಶ ಬೆಂಗಳೂರಿನ ಜನರಿಗೆ ಈಗ ಸಿಗುತ್ತಿರುವುದು ಖುಷಿಯ ವಿಚಾರ. ಶುಭವಾಗಲಿ ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಉಪಾಹಾರ ಸವಿಯುತ್ತಿರುವ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.‌
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net