ನಾಟಿ ಕೋಳಿ ಸಾರು, ಇಡ್ಲಿ! ಡಿಕೆಶಿ ಮನೆಯಲ್ಲಿ ಉಪಾಹಾರ ಸವಿದ ಸಿದ್ದರಾಮಯ್ಯ.. ಕುತೂಹಲ ಕೆರಳಿಸಿದ 2ನೇ ಬ್ರೇಕ್ ಫಾಸ್ಟ್ ಮೀಟಿಂಗ್.. cm siddaramaiah

siddaramaiah
siddaramaiah
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ದರಾಮಯ್ಯಗೆ 'ನಾಟಿ ಕೋಳಿ ಸಾರು' ಬಡಿಸಿದ ಡಿ ಕೆ ಶಿವಕುಮಾರ್
  • ಸಿಎಂ ಸಿದ್ದರಾಮಯ್ಯ ಸ್ವಾಗತಿಸಿ ಡಿಕೆ ಬ್ರದರ್ಸ್
  • ಕುತೂಹಲ ಕೆರಳಿಸಿದ 2ನೇ ಬ್ರೇಕ್ ಫಾಸ್ಟ್ ಮೀಟಿಂಗ್
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಕಳೆದ ಶನಿವಾರ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನು ಉಪಾಹಾರಕ್ಕೆ ಆಹ್ವಾನಿಸಿದ್ದರು. ಇದೀಗ ಡಿಕೆಶಿ ಅವರ ಮನೆಗೆ ಸಿಎಂ ಸಿದ್ದರಾಮಯ್ಯ ಅವರು ಬಂದಿದ್ದಾರೆ. ಈ ಮೂಲಕ ವಾರದೊಳಗೆ ಉಭಯ ನಾಯಕರ ಎರಡನೇ ಉಪಾಹಾರ ಮೀಟಿಂಗ್ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಸೂಚನೆ ಮೇರೆಗೆ ಡಿಸಿಎಂ ಡಿಕೆ ಶಿವಕುಮಾರ್​​​​ಗೆ ತಮ್ಮ ನಿವಾಸದಲ್ಲಿ ಬ್ರೇಕ್​ಫಾಸ್ಟ್ ಮೀಟಿಂಗ್ ಆಯೋಜಿಸಿದರು. ಇಡ್ಲಿ ವಡೆ, ಕೇಸರಿ ಬಾತ್, ಉಪ್ಪಿಟ್ಟು ಸವಿದು ಒಟ್ಟಿಗೆ ಫೋಟೋಗೆ ಫೋಸ್ ಕೊಟ್ಟಿದ್ದರು. ತಿಂಡಿ ಬಳಿಕ ಚರ್ಚಿಸಿ ಹೊರಗೆ ಬಂದವರೇ, ನಮ್ಮಲ್ಲಿ ಗೊಂದಲ ಇಲ್ಲ ಎಂದು ಒಗ್ಗಟ್ಟು ಪ್ರದರ್ಶನ ಮಾಡಿದ್ದರು.
ಇದೀಗ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಸಿಎಂಗಾಗಿ ಬೆಳಗ್ಗೆ 9:30ಕ್ಕೆ ಬ್ರೇಕ್​ಫಾಸ್ಟ್ ಆಯೋಜಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ವಿಶೇಷವಾಗಿ ಮಾಂಸಹಾರ ಸಿದ್ಧಪಡಿಸಲಾಗಿದೆ. ಡಿ ಕೆ ಶಿವಕುಮಾರ್ ಮತ್ತು ಅವರ ಸೋದರ ಮಾಜಿ ಸಂಸದ ಡಿ ಕೆ ಸುರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆದರದಿಂದ ಸ್ವಾಗತಿಸಿದರು.

ನಾಟಿ ಕೋಳಿ ಸಾರು ಮತ್ತು ಇಡ್ಲಿ:

ಉಪಾಹಾರದಲ್ಲಿ ಇಡ್ಲಿ, ವಡೆ, ಸಾಂಬಾರ್, ದೋಸೆ, ಚಟ್ನಿ ಮತ್ತು ಕೇಸರಿ ಬಾತ್ ಇದ್ದರೆ, ಡಿ ಕೆ ಶಿವಕುಮಾರ್ ತಮ್ಮ ಹುಟ್ಟೂರು ಕನಕಪುರದ ನಾಟಿ ಕೋಳಿ ಮತ್ತು ಇಡ್ಲಿಯನ್ನು ಸಿದ್ದರಾಮಯ್ಯನವರಿಗೆ ಬಡಿಸಿದ್ದಾರೆ. ಅವರ ಬೆಂಗಳೂರಿನ ಸದಾಶಿವನಗರ ಮನೆಯಲ್ಲಿ ಈಗಾಗಲೇ ಅಡುಗೆ ಸವಿದಿದ್ದಾರೆ.
ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಏನು ಚರ್ಚಿಸಲಿದ್ದಾರೆ? ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಏನು ಮಾತನಾಡಲಿದ್ದಾರೆ? ಎಂಬ ಕುರಿತು ಕುತೂಹಲ ಮೂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net