

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಅಖಿಲ ಭಾರತವೀರಶೈವ ಶಿವಾಚಾರ್ಯ ಸಂಸ್ಥೆಯವತಿಯಿಂದ ನೂತನ ಮುಖ್ಯಮಂತ್ರಿಡಿ.ಕೆ.ಶಿವಕುಮಾರಅವರಿಗೆ ಸನ್ಮಾನಿಸಲಾಯಿತು.ಶನಿವಾರ ಸಿಎಂನಿವಾಸಕ್ಕೆ ಆಗಮಿಸಿದ ಶಿವಾಚಾರ್ಯಸಂಸ್ಥೆ ಅಧ್ಯಕ್ಷ ಸಿಂದಗಿ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮಿಗಳುಉಪಾಧ್ಯಕ್ಷ ಮಹಾರಾಷ್ಟ್ರದನಾಗಣಸೂರು ಮಠದ ಶ್ರೀಕಂಠ ಶಿವಾಚಾರ್ಯಸ್ವಾಮಿಗಳು,ಕಾರ್ಯದರ್ಶಿಶಿವಗಂಗೆಯ ಡಾ.ಮಲಯ ಶಾಂತಮುನಿಶಿವಾಚಾರ್ಯ ಸ್ವಾಮಿಗಳು,ವಕ್ತಾರರಾದಬೆಂಗಳೂರು ವಿಭೂತಿಪುರ ಮಠದ ಡಾ.ಮಹಾಂತಲಿಂಗಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿರಾಜ್ಯ ಮತ್ತು ಹೊರರಾಜ್ಯದ 25ಕ್ಕೂಹೆಚ್ಚು ಶಿವಾಚಾರ್ಯರುಮುಖ್ಯಮಂತ್ರಿಗಳನ್ನು ಸನ್ಮಾನಿಸಿಆಶೀರ್ವದಿಸಿದರು.
ಈಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯಉಪಾಧ್ಯಕ್ಷರಾದ ಹುಕ್ಕೇರಿ ಹಿರೇಮಠದಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು,ದೇಶದಲ್ಲೇ ಮೊದಲಬಾರಿಗೆ ಪಂಚಪೀಠದ ಜಗದ್ಗುರುಗಳೊಬ್ಬರಭಾವಚಿತ್ರವನ್ನು ವೇದಿಕೆಯಲ್ಲಿರಿಸಿ,ಮುಖ್ಯಮಂತ್ರಿಗಳುಪ್ರಮಾಣ ವಚನ ಸ್ವೀಕರಿಸಿದ್ದಾರೆ.ಅವರ ಅಭಿಮಾನದಂತೆಅಜ್ಜಯ್ಯ ಅವರಿಗೆ ಇನ್ನಷ್ಟುಶಕ್ತಿ ನೀಡಲಿ.ಶೀಘ್ರದಲ್ಲಿಅಖಿಲ ಭಾರತ ವೀರಶೈವ ಶಿವಾಚಾರ್ಯಸಂಸ್ಥೆ ವತಿಯಿಂದ ಮುಖ್ಯಮಂತ್ರಿಗಳಅಭಿನಂದನಾ ಸಮಾರಂಭ ಹಮ್ಮಿಕೊಳ್ಳುವುದಾಗಿತಿಳಿಸಿದರು.
ಈ ವೇಳೆನೂತನವಾಗಿ ಸಚಿವರಾಗಿರುವ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆಯರಾಷ್ಟ್ರೀಯ ಅಧ್ಯಕ್ಷ ಈಶ್ವರಖಂಡ್ರೆ, ವೀರಶೈವಲಿಂಗಾಯತ ಅಭಿವೃದ್ಧಿ ನಿಗಮದಅಧ್ಯಕ್ಷ ಹಾಗೂ ಶಾಸಕ ವಿಜಯಾನಂದಕಾಶಪ್ಪನವರ ಮತ್ತಿತರರುಉಪಸ್ಥಿತರಿದ್ದರು.