ಮಕ್ಕಳು, ಪೋಷಕರಿಗಾಗಿ ಅಮೆರಿಕದ ಐಷಾರಾಮಿ ಜೀವನ ತೊರೆದ ಮೆಟಾ ಉದ್ಯೋಗಿ; ಬೆಂಗಳೂರಿಗೆ ವಾಪಸ್​ ಆದ ಬಗ್ಗೆ ಹೇಳಿದ್ದಿಷ್ಟು..Meta Engineer

 Meta engineer post on moving back to Bengaluru
Meta engineer post on moving back to Bengaluru
Published on

ಪ್ರಮುಖ ಮುಖ್ಯಾಂಶಗಳು

  • ವಯಸ್ಸಾಗುತ್ತಿರುವ ಪೋಷಕರ ಆರೈಕೆಗಾಗಿ ಮತ್ತು ಬೆಳೆಯುತ್ತಿರುವ ಮಕ್ಕಳ ಭವಿಷ್ಯಕ್ಕಾಗಿ ಅಮೆರಿಕ ತೊರೆದ ಟೆಕ್ಕಿ
  • ವಿಮಾನ ನಿಲ್ದಾಣದ ಟ್ರಾಲಿಯಲ್ಲಿ ಲಗೇಜ್ ಇಟ್ಟಿರುವ ಫೋಟೋ ಹಂಚಿಕೊಂಡ ಮೆಟಾ ಎಂಜಿನಿಯರಿಂಗ್
  • 18 ವರ್ಷಗಳ ಯುಎಸ್ ಜೀವನ ತೊರೆದು ಬೆಂಗಳೂರಿಗೆ ಮರಳಿದ 'ಮೆಟಾ' ಇಂಜಿನಿಯರ್ ಪೋಸ್ಟ್ ವೈರಲ್!
ಬೆಂಗಳೂರು: ಅಮೆರಿಕದಲ್ಲಿ 18 ವರ್ಷ ಜೀವನ ನಡೆಸಿದ ನಂತರ ಭಾರತಕ್ಕೆ ಮರಳಿದ ಬಗ್ಗೆ ಮೆಟಾ ಎಂಜಿನಿಯರಿಂಗ್ ಲೀಡರ್ ಬಾಲಾಜಿ ಗುರುರಾಜನ್ ಅವರು ಲಿಂಕ್​ಡಿನ್​ನಲ್ಲಿ ಹಂಚಿಕೊಂಡಿರುವ ಪೋಸ್ಟ್​ವೊಂದು ಸದ್ಯ ಸಾಕಷ್ಟು ಜನರ ಗಮನ ಸೆಳೆಯುವಂತೆ ಮಾಡಿದೆ.
ಅಮೆರಿಕದಲ್ಲಿ ಉತ್ತಮ ಜೀವನ, ಒಳ್ಳೆ ಸ್ಯಾಲರಿ ಸಿಗುತ್ತಿದ್ದರೂ ಸಹ ವಯಸ್ಸಾದ ಪೋಷಕರ ಆರೈಕೆ ಮಾಡುವುದು ಹಾಗೂ ಮಕ್ಕಳ ಭವಿಷ್ಯದ ವಿಚಾರವಾಗಿ ಭಾರತಕ್ಕೆ ವಾಪಸ್​ ಆದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಟ್ರಾಲಿಯಲ್ಲಿ ಡಜನ್‌ಗೂ ಹೆಚ್ಚು ಸೂಟ್‌ಕೇಸ್‌ಗಳನ್ನು ಜೋಡಿಸಿಟ್ಟಿರುವ ಫೋಟೋ ಒಂದನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ.

ಪೋಸ್ಟ್​ನಲ್ಲಿ ಏನಿದೆ?

ಒಂದು ತಿಂಗಳ ಹಿಂದೆ, ನನ್ನ ಕುಟುಂಬ ಮತ್ತು ನಾನು ಯುಎಸ್‌ನಲ್ಲಿ ಕಳೆದ 18 ವರ್ಷಗಳ ಬದುಕನ್ನು ಗಂಟುಮೂಟೆ ಕಟ್ಟಿ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದೇವೆ. ವಯಸ್ಸಾದ ಪೋಷಕರು, ಮಕ್ಕಳ ಮುಂದಿನ ಭವಿಷ್ಯ ಇದೆಲ್ಲವನ್ನು ದೂರದಿಂದಲೇ ನೋಡುತ್ತಾ ಕೂರುವುದು ನಮಗೆ ಇಷ್ಟವಾಗಲಿಲ್ಲ. ಹೀಗಾಗಿ ತಾಯ್ನಾಡಿಗೆ ವಾಪಸ್​ ಬರುವ ಬಗ್ಗೆ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಬೇ ಏರಿಯಾ ತಮಗೆ ವೃತ್ತಿ ಜೀವನ ನೀಡಿದ ಪ್ರದೇಶ. ಇದು ನನ್ನ ಕಷ್ಟದ ದಿನಗಳನ್ನು ಸುಲಭವಾಗಿಸಿದೆ. ನನಗೆ ಅವಕಾಶ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ

ಬೆಂಗಳೂರು ದೊಡ್ಡ ನಗರ

ಚಿಕ್ಕಂದಿನಲ್ಲಿ ಬೆಂಗಳೂರು ನೋಡಿದ್ದೆ. ಈಗ ಸಂಪೂರ್ಣ ಬದಲಾಗಿದೆ. ಇಲ್ಲಿ ಹೊಸದಾಗಿ ಜೀವನ ಆರಂಭಿಸುವುದು. ಮನೆ ಹುಡುಕುವುದು ಯಾವುದು ಸುಲಭವಲ್ಲ. ಇದೊಂದು ದೊಡ್ಡ ಪ್ರಾಜೆಕ್ಟ್​ ಎನಿಸಿತು ಎಂದು ಬರೆದುಕೊಂಡಿದ್ದಾರೆ. ಮುಂದುವರೆದು, ಅನಿವಾಸಿ ಭಾರತೀಯರಿಗೆ ವಿವಿಧ ದೇಶಗಳ ತೆರಿಗೆ ಮತ್ತು ಹಣಕಾಸು ಯೋಜನೆಗಳನ್ನು ನಿರ್ವಹಿಸಲು ಸಹಾಯ ಮಾಡುವ ಭಾವಿಟ್ಟಾ ಎನ್ನುವ ಕ್ರಾಸ್-ಬಾರ್ಡರ್ ಫೈನಾನ್ಷಿಯಲ್ ಸಿದ್ಧಪಡಿಸಿದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ನೆಟ್ಟಿಗರು ಏನಂದ್ರು

ಬಾಲಾಜಿ ಅವರಿಗೆ ಪೋಷಕರ ಮೇಲೆ ಇರುವ ಭಕ್ತಿ-ಭಾವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ನೆಟ್ಟಿಗರು, ವಿದೇಶದಲ್ಲಿ ಎಷ್ಟೇ ಹಣ ಮಾಡಿದರೂ ಸಹ ಹೆತ್ತವರ ವೃದ್ಧಾಪ್ಯದಲ್ಲಿ ಜೊತೆಗಿರಬೇಕು ಎಂದು ಬಯಸುವುದು ಇದೆಯಲ್ಲ ಅದು ನಿಜಕ್ಕೂ ಶ್ಲಾಘನೀಯ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net