ರಸ್ತೆ ಬದಿ ತೆಗೆದಿರುವ ತಗ್ಗು ಮುಚ್ಚಿ

ಶಹಾಬಾದ್​ನ ವಿಪಿ ಚೌಕ್​ನಿಂದ ವಿಠ್ಠಲ ಮಂದಿರ ಬಡಾವಣೆಗೆ ಹೋಗುವ ರಸ್ತೆಯಲ್ಲಿ ವಿದ್ಯುತ್​ ದೀಪಕ್ಕಾಗಿ ಅಗೆದಿರುವ ತಗ್ಗನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದು.
ಶಹಾಬಾದ್​ನ ವಿಪಿ ಚೌಕ್​ನಿಂದ ವಿಠ್ಠಲ ಮಂದಿರ ಬಡಾವಣೆಗೆ ಹೋಗುವ ರಸ್ತೆಯಲ್ಲಿ ವಿದ್ಯುತ್​ ದೀಪಕ್ಕಾಗಿ ಅಗೆದಿರುವ ತಗ್ಗನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದು.
Published on
ಶಹಾಬಾದ್​: ಭಾರತ ಚೌಕ್​ಗೆ ಹೋಗುವ ಮುಖ್ಯ ರಸ್ತೆಯಿಂದ ವಿಠ್ಠಲ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ಗಲ್ಲಿ ಬಳಿ ವಿದ್ಯುತ್​ ಕಂಬಕ್ಕಾಗಿ ತೆಗೆದ ತಗ್ಗು ಮುಚ್ಚದೆ ಹಾಗೆಯೇ ಬಿಟ್ಟಿದ್ದರಿಂದ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ನಗರೋತ್ಥಾನ ಯೋಜನೆಯಡಿ ವಿವಿಧ ಮುಖ್ಯ ರಸ್ತೆಯಲ್ಲಿ ವಿದ್ಯುತ್​ ಕಂಬ ಹಾಕುವ ಕಾರ್ಯ ನಡೆಯುತ್ತಿತ್ತು. ವಿಠ್ಠಲ್​ ಮಂದಿರಕ್ಕೆ ಹೋಗುವ ರಸ್ತೆಯ ಡಾ.ಜಿಂಗಾಡೆ ಆಸ್ಪತ್ರೆಯ ಬಳಿ ಕಂಬಕ್ಕಾಗಿ ಗುತ್ತಿಗೆದಾರರು ನೆಲ ಅಗೆದಿದ್ದು, ಅಲ್ಲಿ ನೀರಿನ ಪೈಪ್​ಲೈನ್​ ಹಾದುಹೋಗಿರುವುದು ಗಮನಕ್ಕೆ ಬಂದಿರಲಿಲ್ಲ. ಕಾಮಗಾರಿ ವೇಳೆ ಒಡೆದು ಹೋಗಿದ್ದ ಪೈಪ್​ಲೈನ್​ ಸರಿಪಡಿಸಿದ್ದು, ತಗ್ಗು ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ತೆಗ್ಗಿನಲ್ಲಿ ನೀರು ತುಂಬಿದ್ದು, ರಸ್ತೆ ಹಾಗೂ ತಗ್ಗು ಕಾಣದಂತಾಗಿದೆ. ಕೆಲವರು ಕೆಳಗೆ ಬಿದ್ದು ಗಾಯವೂ ಮಾಡಿಕೊಂಡಿದ್ದಾರೆ. ಕೂಡಲೇ ವಿದ್ಯುತ್​ ಕಂಬಗಳನ್ನು ಅಳವಡಿಸುತ್ತಿರುವ ಗುತ್ತಿಗೆದಾರರು ತೆಗ್ಗನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net