ಫುಟ್​ಪಾತ್​ ಒತ್ತುವರಿ ತೆರವು

Clearance of footpath encroachment
Clearance of footpath encroachment
Published on
ಶಿರಾ: ನಗರದ ಪ್ರವಾಸಿ ಮಂದಿರದ ವೃತದಿಂದ ದರ್ಗಾ ಸರ್ಕಲ್​ ಹಾಗೂ ಅಮರಪುರ ರಸ್ತೆಯ ಫುಟ್​ಪಾತ್​ ಒತ್ತುವರಿಯನ್ನು ಮಂಗಳವಾರ ತೆರವು ಮಾಡಿ ವಾಹನ ಹಾಗೂ ಪಾದಚಾರಿ ಸಂಚಾರವನ್ನು ಸುಗಮ ಗೊಳಿಸಲಾಯಿತು.
ರಸ್ತೆಯಲ್ಲಿ ಪ್ರತಿನಿತ್ಯ ಬೀದಿ ಬದಿ ವ್ಯಾಪಾರಿಗಳ ಹಾವಳಿಯಿಂದಾಗಿ ವಾಹನ ಸಂಚಾರಕ್ಕೆ ಅಡೆತಡೆ ಹಾಗೂ ಪಾದಾಚಾರಿಗಳ ಸಂಚಾರಕ್ಕೆ ತೊಂದರೆಯಾಗುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಆರಕ್ಷಕ ನಿರೀಕ್ಷಕ ಪ್ರವಿಣ್​ ಕುಮಾರ್​ ಹಾಗೂ ಆರಕ್ಷಕ ಉಪ ನಿರೀಕ್ಷಕ ರೇಣುಕಾ ಯಾದವ್​ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬೀದಿಬದಿ ವ್ಯಾಪಾರಸ್ಥರನ್ನು ತೆರವು ಗೊಳಿಸಿ ಪಕ್ಕದ ಜಾಗಕ್ಕೆ ಸ್ಥಳಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರವಿಣ್​ ಕುಮಾರ್​ ಬೀದಿಬದಿ ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಫುಟ್​ಬಾತ್​ನಲ್ಲಿ ನಿಂತು ಹಣ್ಣು, ತರಕಾರಿ ಇತರ ಸಾಮಗ್ರಿಗಳ ವ್ಯಾಪಾರ ಮಾಡಿ ಪಾದಾಚಾರಿಗಳಿಗೆ ಹಾಗೂ ವಾಹನ ಸಂಚಾರರಿಗೆ ತೊಂದರೆ ಮಾಡಬಾರದು. ಈ ದಿನ ನಾವು ನಿಮಗೆ ಅರಿವು ಮೂಡಿಸಿದ್ದೇವೆ, ಇದನ್ನೇ ಮುಂದುವರಿಸಿದರೆ ಶಿರಾ ನಗರಸಭೆ ಹಾಗೂ ಪೊಲೀಸ್​ ಇಲಾಖೆ ಜಂಟಿ ಕಾರ್ಯಚರಣೆ ನಡೆಸಿ ಸಂಚಾರಕ್ಕೆ ಅಡ್ಡಿಪಡಿಸುವ ವ್ಯಾಪಾರಸ್ಥರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net