ಕಾಲೇನು ಎದುರಿನ ಕಸ ತೆರವುಗೊಳಿಸಿ

ಶರಣಪ್ಪ ಮಡಿವಾಳ, ಪುರಸಭೆ ಮುಖ್ಯಾಽಕಾರಿ.
ಶರಣಪ್ಪ ಮಡಿವಾಳ, ಪುರಸಭೆ ಮುಖ್ಯಾಽಕಾರಿ.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಮಲ್ಲಿಕಾಜುರ್ನ ಹೊಸಮನಿ ಆಗ್ರಹ
  • ದೂರು ನೀಡಿದರೂ ಸ್ಪಂದಿಸದ ಪುರಸಭೆ
ಗುರುಮಠಕಲ್: ಪಟ್ಟಣದ ಗಾಂಽ ಮೈದಾನದ ಕಂಪೌAಡ್ ಆವರಣದಲ್ಲಿ ಸರ್ಕಾರಿ ಬಾಲಕೀಯರ ಪದವಿಪೂರ್ವ ಕಾಲೇಜಿನ ಎದುರು ರಾಶಿಗಟ್ಟಲೇ ಕಸ ಸುರಿಯುತ್ತಿರುವ ಕಾರಣ ವಿದ್ಯಾರ್ಥಿಗಳು ನಿತ್ಯ ಮುಜುಗರ ಅನುಭವಿಸುವತ್ತಿದ್ದಾರೆ. ಹೀಗಾಗಿ ಕೂಡಲೇ ಈ ಕಸದ ರಾಶಿ ಶೀಘ್ರ ತೆರವುಗೊಳಿಸಬೇಕು ಎಂದು ಪ್ರಾಚಾರ್ಯ ಮಲ್ಲಿಕಾರ್ಜುನ ಹೊಸಮನಿ ಒತ್ತಾಯಿಸಿದ್ದಾರೆ.
ತೆಲಂಗಾಣದ ನಾರಾಯಣಪೇಟ್ ಮುಖ್ಯರಸ್ತೆ ಬಳಿಯೇ ಪ್ಲಾಸ್ಟಿಕ್ ತ್ಯಾಜ್ಯ, ಹಸಿ ಕಸವನ್ನು ಹಾಕಲಾಗಿದೆ. ಇದರಿಂದಾಗಿ ಸುತ್ತಲಿನ ಪ್ರದೇಶ ಗಬ್ಬು ವಾಸನೆ ಬೀರುತ್ತಿದ್ದು, ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ಪ್ಲಾಸ್ಟಿಕ್ ಕಸ ಗಾಳಿಗೆ ಕಾಲೇಜಿನ ಆವರಣಕ್ಕೂ ಬಂದು ಬೀಳುತ್ತಿದೆ ಎಂದು ದೂರಿದರು.
ಈ ಕುರಿತು ನಮ್ಮ ಸಿಬ್ಬಂದಿ ಪುರಸಭೆ ಅಽಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಪುರಸಭೆ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಈ ಸ್ಥಳದಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ನಾವು ನಿತ್ಯ ಮಕ್ಕಳಿಗೆ ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಾಠ ಮಾಡುತ್ತೇವೆ. ಆದರೆ ನಮ್ಮ ಕಾಲೇಜಿನ ಮುಂಭಾಗವೇ ಇಂತಹ ಪರಿಸ್ಥಿತಿ ಇದೆ. ಕಸದಿಂದ ವಿದ್ಯಾರ್ಥಿಗಳು ಮುಜುಗರ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
"

ಗಾಂಽ ಮೈದಾನದ ಗೇಟ್ ನಮಗೆ ಸಂಭAದ ಇಲ್ಲ. ಅವರ ಇಲಾಖೆಗೆ ಸಂಭAದ ಪಟ್ಟದು. ಕಸದ ರಾಶಿ ನಮ್ಮ ವಿಲೇವಾರಿಯಿಂದ ಶೀಘ್ರ ತೆರವುಗೊಳಿಸಲಾಗುವುದು.| ಶರಣಪ್ಪ ಮಡಿವಾಳಪುರಸಭೆ ಮುಖ್ಯಾಽಕಾರಿ ಗುರುಮಠಕಲ್



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net