ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆ ಬೆಟ್ಟದಲ್ಲಿ ಶನಿವಾರ ಸಿಸ್ಕೋ ಕಂಪನಿ ಹಾಗೂ ಜಾಗೃತಿ ಟ್ರಸ್ಟ್ಸ್ವಯಂಸೇವಕರು ಟ್ರಕ್ಕಿಂಗ್ ಅಂಡ್ ಪ್ಲಾಕಿಂಗ್ನಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು.
Published on:
Copied
Follow Us
ದಾಬಸ್ಪೇಟೆ : ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಶಿವಗಂಗೆ ಬೆಟ್ಟದಲ್ಲಿ ಶನಿವಾರ ಸ್ವಚ್ಛತಾ ಅಭಿಯಾನ ನಡೆಸಿದರು. ಸಿಸ್ಕೋ ಕಂಪನಿ ಹಾಗೂ ಜಾಗೃತಿ ಟ್ರಸ್ಟ್ಸ್ವಯಂಸೇವಕರು ಶಿವಗಂಗೆಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡು ತಪ್ಪಲಿನಲ್ಲಿ ಬಿದ್ದ ತ್ಯಾಜ್ಯಗಳನ್ನು ಹೆಕ್ಕಿ ತೆಗೆದರು.
ಕಾರ್ಪೊರೇಟ್ ಸಂಸ್ಥೆಯೊಂದು ಸಾಮಾಜಿಕ ಹೊಣೆಗಾರಿಕೆ ಮತ್ತು ಸಮುದಾಯದ ಸಹಭಾಗಿತ್ವದ ಉದಾಹರಣೆಯಾಗ್ಚಿ ಸಿಸ್ಕೋ ಹಾಗೂ ಜಾಗೃತಿ ಟ್ರಸ್ಟ್ನ 130ಕ್ಕೂ ಹೆಚುಸ್ವಯಂ ಸೇವಕರು ಸ್ಥಳಿಯ ಪ್ರತಿನಿಧಿಗಳೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು. ಪ್ರತಿವರ್ಷ ಲಾಂತರ ಯಾತ್ರಿಕರು ಭೇಟಿ ನೀಡುವ ಪುಣ್ಯಕ್ಷೇತ್ರ ಶಿವಗಂಗೆ ಬೆಟ್ಟವನ್ನು ಸ್ವಚ್ಛಗೊಳಿಸಿದರು.
ಟ್ರೆಕ್ಕಿಂಗ್ ಅಂಡ್ ಪ್ಲಾಕಿಂಗ್ ಎಂಬ ಹೆಸರಿನಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟ್ರೆಕ್ಕಿಂಗ್ ವೇಳೆ ಕಣ್ಣಿಗೆ ಬಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಮಾಡಿದರು. ಸ್ವಯಂಸೇವಕರು ಕಠಿಣ ಮೆಟ್ಟಿಲುಗಳು, ಕಲ್ಲುಗಳ ನಡುವಿನ ದಾರಿಯಲ್ಲಿ ಸಾಗಿ ಬೆಟ್ಟದ ಶಿಖರ ತಲುಪಿದರು. ದೀರ್ಕಾಲದಿಂದ ಪ್ರಕೃತಿ ಸೌಂದರ್ಯ ಹಾಳು ಮಾಡುತ್ತಿದ್ದ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು ಮತ್ತು ಕಾಗದದ ತುಂಡುಗಳನ್ನು ಸಂಗ್ರಹಿಸಿದರು.
120 ಚೀಲಗಳಲ್ಲಿ ಅಂದಾಜು 1,500 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದರು. ಕಸದಿಂದ ಕೂಡಿದ್ದ ಉದ್ಯಾನವನವನ್ನು ಸ್ವಚ್ಛ ಮಾಡಿ ಸ್ಥಳಿಯರ ಬಳಕೆಗೆ ಮುಕ್ತಗೊಳಿಸಿದರು. ಇದೇ ವೇಳೆ ಪ್ಲಾಸ್ಟಿಕ್ ಬಳಕೆತಡೆಯಲು 10 ಜಾಗೃತಿ ಪೋಸ್ಟರ್ಗಳನ್ನು ಪ್ರದರ್ಶಿಸಿದರು. ಬೆಟ್ಟದ ಕೆಳಗೆ, ಮೇಲೆ ಅಂಗಡಿಗಳನ್ನು ಇಟ್ಟುಕೊಂಡಿರುವವರು ಹಾಗೂ ಇಲ್ಲಿಗೆ ಬರುವ ಪ್ರವಾಸಿಗರು ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುವ ಕುರಿತುಜಾಗೃತಿ ಟ್ರಸ್ಟ್ನಕೆ.ಟಿ. ದೀಪಕ್ ಮಾಹಿತಿ ನೀಡಿದರು.
ನಿತ್ಯ ಜಾಗೃತಿ : ಸ್ವಚ್ಛತೆ ಕಾರ್ಯ ಒಂದು ದಿನಕ್ಕೆ ಸೀಮಿತವಾದುದಲ್ಲ. ಶಾಶ್ವತ ತ್ಯಾಜ್ಯ ನಿರ್ವಹಣಾ ಕ್ರಮಗಳನ್ನು ಪ್ರೇರೇಪಿಸುವ ಕುರಿತುಸದಾ ಜಾಗೃತಿ ಮೂಡಿಸಲಾಗುವುದು ಎಂದು ಜಾಗೃತಿ ಟ್ರಸ್ಟ್ನ ಕ್ರಿಸ್ಟಿ ರಾಜ್
ಅನೇಕ ಸ್ವಯಂಸೇವಕರಿಗೆ ಇದು ಮೊದಲ ಟ್ರಕ್ಕಿಂಗ್ ಮತ್ತು ಸ್ವಚ್ಛತಾ ಕಾರ್ಯ. ಈ ಕೆಲಸ ಕಷ್ಟವಾಗಿದ್ದರೂ, ಅತ್ಯಂತ ತೃಪ್ತಿದಾಯಕ ಪ್ರಯಾಣವಾಗಿತ್ತು. ಐತಿಹಾಸಿಕ ಸ್ಥಳಗಳನ್ನು ರಸಲು ಮತ್ತು ಸಮುದಾಯಗಳನ್ನು ಪ್ರೇರೇಪಿಸಲು ಈ ರೀತಿಯ ಕಾರ್ಯಗಳು ಮುಖ್ಯ.