

ಪ್ರಮುಖ ಮುಖ್ಯಾಂಶಗಳು
ಗ್ರಾಮಗಳ ಸ್ವಚ್ಛತೆಗೆ ಅನುದಾನ ಕೊರತೆ ಇದೆ. ಸರ್ಕಾರದಿಂದ ಬಂದ ನಂತರ ಸ್ವಚ್ಛತೆ ಕಾರ್ಯಗಳು ಕೈಗೊಳ್ಳಲಾಗುವುದು, ಸ್ಥಳಿಯವಾಗಿ ಸಂಗ್ರಹವಾಗುವ ತೆರಿಗೆ ಗ್ರಾಮಗಳ ಜಲಗಾರರಿಗೆ ವೇತನ ನೀಡಲು ಸಾಕಾಗುತ್ತಿಲ್ಲ. ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಸರಿಪಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು.
3 ವರ್ಷಗಳ ಹಿಂದೆ ಕಪ್ಪಲಮಡಗು ಮತ್ತು ಶ್ರೀರಂಗಪುರ ಬಳಿ ಅಳವಡಿಸಿರುವ ಹೈಮಾಸ್ಟ್ ವಿದ್ಯುತ್ ದೀಪಗಳು ಕೆಟ್ಟು 6 ತಿಂಗಳಾಗಿದ್ದು, ಇವುಗಳನ್ನು ಸರಿಪಡಿಸಬೇಕೆಂದು ಪಿಡಿಒಗೆ ಪತ್ರ ಬರೆಯಲಾಗಿದೆ. ಗ್ರಾಮಗಳ ಸ್ವಚ್ಛತೆಗೂ ಅನುದಾನ ಸರ್ಕಾರ ಬಿಡುಗಡೆ ಮಾಡಬೇಕು. ಗ್ರಾಪಂ ನೂತನ ಕಟ್ಟಡ ನಿಮಾರ್ಣಕ್ಕೆ ಸ್ಥಳ ಗುರುತಿಸಿ ತಹಸೀಲ್ದಾರ್ ಕಚೇರಿಗೆ ದಾಖಲೆಗಳ ಮಾಹಿತಿ ನೀಡಿದ್ದರೂ ಇದುವರೆಗೂ ಸ್ಥಳ ಒದಗಿಸದ ಕಾರಣ ಗ್ರಾಪಂ ಕಟ್ಟಡ ನಿಮಾರ್ಣ ಸಾಧ್ಯವಾಗಿಲ್ಲ.