ಶುದ್ಧ ನೀರಿನ ಟಕಗಳಿಗೆ ಕೊನೆಗೂ ರಿಪೇರಿ ಭಾಗ್ಯ / NANDAGUDI

ಹೊಸಕೋಟೆ ತಾಲೂಕು ನಂದಗುಡಿಯಲ್ಲಿ ಶುದ್ಧ ನೀರಿನ ಟಕ ಸರಿಪಡಿಸಲಾಯಿತು.
ಹೊಸಕೋಟೆ ತಾಲೂಕು ನಂದಗುಡಿಯಲ್ಲಿ ಶುದ್ಧ ನೀರಿನ ಟಕ ಸರಿಪಡಿಸಲಾಯಿತು.
Published on
ನಂದಗುಡಿ : ಹೊಸಕೋಟೆ ತಾಲೂಕು ನಂದಗುಡಿಯಲ್ಲಿ ಕೆಟ್ಟು ಮೂಲೆ ಸೇರಿದ್ದ ಶುದ್ಧ ನೀರಿನ ಎರಡು ಘಟಕಗಳನ್ನು ಗ್ರಾಮ ಪಂಚಾಯಿತಿಯಿಂದ ಸರಿಪಡಿಸಲಾಗಿದ್ದು, ಜನ ನೀರಿಗೆ ಅಲೆದಾಡುವುದು ತಪ್ಪಿದೆ. "ಕೆಟ್ಟು ಮೂಲೆ ಸೇರಿದ ನೀರಿನ ಟಕಗಳು' ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ಸಮಗ್ರ ವರದಿ ಪ್ರಕಟಿಸಿದ ಬಳಿಕ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಎರಡೂ ನೀರಿನ ಟಕಗಳನ್ನು ಸರಿಪಡಿಸಿ ಶುದ್ಧ ನೀರು ದೊರೆಯುವಂತೆ ಮಾಡಿದ್ದಾರೆ.
ನಂದಗುಡಿ ಬಸ್​ಸ್ಟಾ$ಂಡ್​ನಲ್ಲಿರುವ ಶುದ್ಧ ನೀರಿನ ಘಟಕವನ್ನು ಖಾಸಗಿಯವರಿಗೆ ಒಂದು ವರ್ಷಕ್ಕೆ ಉಸ್ತುವಾರಿ ನೀಡಿತ್ತು. ಅವರ ಅವಧಿ ಮುಗಿದಿತ್ತು. ಮತ್ತೊಂದು ಘಟಕ ಪಂಚಾಯಿತಿ ಅಧೀನದಲ್ಲಿದ್ದು, ಅದೂ ಬಳಕೆಗೆ ಬಾರದಾಗಿತ್ತು. ಸುಮಾರು 3 ತಿಂಗಳಿಂದ ನೀರಿನ ಘಟಕಗಳು ಕೆಟ್ಟು ನಿಂತಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಭಾಗದಲ್ಲಿ ಫ್ಲೋರೈಡ್​ ಅಂಶ ಅಧಿಕವಾಗಿದ್ದು, ಜನರು ಅನಿವಾರ್ಯವಾಗಿ ಲವಣಾಂಶ ತುಂಬಿರುವ ಬೋರ್​ವೆಲ್​ ನೀರು ಕುಡಿದು ಹಲವು ಕಾಯಿಲೆಗಳ ಆತಂಕದಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net