ನೆಲಮಂಗಲ ತಾಲೂಕಿನ ಯಲಚಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಸಂಸ್ಥೆ ವತಿಯಿಂದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ವಿತರಿಸಲಾಯಿತು. ರೋಟರಿ ನೆಲಮಂಗಲದ ಖಜಾಂಚಿ ಎಸ್.ಗಂಗರಾಜು, ನಿರ್ದೇಶಕರಾದ ರಾಜಶೇಖರ್, ರುದ್ರೇಗೌಡ , ದೊಡ್ಡನರಸಿಂಹಯ್ಯ ಇತರರು ಇದ್ದರು.
ನೆಲಮಂಗಲ : ಪ್ರತಿಯೊಬ್ಬರು ಶುದ್ಧ ಕುಡಿಯುವ ನೀರಿನ ಸೇವನೆಯಿಂದ ಉತ್ತಮ ಆರೋಗ್ಯ ಕಂಡುಕೊಳ್ಳಬೇಕು ಎಂದು ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು ತಿಳಿಸಿದರು.
ತಾಲೂಕಿನ ಯಲಚಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರೋಟರಿ ನೆಲಮಂಗಲ, ರೋಟರಿ ವಿಶ್ವನಿಡಂ ಹಾಗೂ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಶುದ್ಧ ಕುಡಿಯುವ ನೀರಿನ ಟಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ವಾಟರ್ ಫಿಲ್ಟರ್ ನೀಡಲಾಗಿದೆ. ಆರೋಗ್ಯವಂತ ಸಮಾಜ ನಿರ್ಮಿಸುವ ಗುರಿಯನ್ನು ರೋಟರಿ ಸಂಸ್ಥೆ ಹೊಂದಿದೆ. ಸ್ವಚ್ಛ ಪರಿಸರ, ಶುದ್ಧಗಾಳಿ, ನೀರು ಎಲ್ಲರಿಗೂ ಅತ್ಯವಶ್ಯ. ಶುದ್ಧಗಾಳಿ ಮತ್ತು ಶುದ್ಧ ನೀರಿನಿಂದ ಶೇ.80 ರೋಗಗಳು ಬಾರದಂತೆ ತಡೆಗಟ್ಟಬಹುದು. ಸಮಾಜಸೇವೆ ಮಾಡುವುದು ರೋಟರಿ ಕ್ಲಬ್ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದರು.
ಶಾಲಾ ಮುಖ್ಯಶಿಕ್ಷಕ ಕೆ.ಆರ್.ವನರಾಜು ಮಾತನಾಡಿ, ರೋಟರಿ ಸಂಸ್ಥೆಯು ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ, ಆ ಮೂಲಕ ಮಕ್ಕಳ ಮನೋಬಲ ವೃದ್ಧಿಸುವ ಕಾರ್ಯವನ್ನು ಸುಮಾರು ವರ್ಷಗಳಿಂದ ಮಾಡುತ್ತಿದೆ. ಶಾಲಾ ಮಕ್ಕಳಿಗೆ ಅನುಕೂಲವಾಗಲು ಶುದ್ಧ ಕುಡಿಯುವ ನೀರಿನ ಟಕ ಸ್ಥಾಪನೆ ಮಾಡಿರುವುದು ಸಂತೋಷದ ಸಂಗತಿ. ರೋಟರಿ ಸಂಸ್ಥೆಯ ಸೇವೆಗೆ ಶಾಲಾ ಆಡಳಿತ ಮಂಡಳಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ರೋಟರಿ ವಿಶ್ವನಿಡಂ ಅಧ್ಯಕ್ಷ ಚಂದ್ರಶೇಖರ್, ನಿರ್ದೇಶಕ ಶ್ರೀನಿವಾಸ್, ಅರುಣೋದಯ ಕಾರ್ಯದರ್ಶಿ ಕೇಶವಮೂರ್ತಿ, ಖಜಾಂಚಿ ಕಿರಣ್ಕುಮಾರ್, ನಿರ್ದೇಶಕರಾದ ನಟರಾಜು, ಪ್ರಸನ್ನ, ಮುಖ್ಯಶಿಕ್ಷಕ ಕೆ.ಆರ್. ವನರಾಜು, ಶಿಕ್ಷಕ ಮಹೇಶ್, ರಮೇಶ್ ರಾವ್ ಇತರರು ಇದ್ದರು.