ಬೆಂಗಳೂರಿಗರೇ ಎಚ್ಚರ; ನಿಮ್ಮ ಮನೆಯ ಕಸ ವಿಂಗಡನೇ ಮಾಡದಿದ್ದರೇ ಬೀಳುತ್ತೆ ಭಾರಿ ದಂಡ; ಎಂದಿನಿಂದ, ಎಷ್ಟು ಫೈನ್​ ಕಟ್ಟಬೇಕು?..Bengaluru Waste Segregation Fine

Bengaluru Waste Segregation Fine(AI Image))
Bengaluru Waste Segregation Fine(AI Image))
Published on

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್ 1 ರಿಂದ ಕಸ ವಿಂಗಡಣೆ ಮಾಡದವರಿಗೆ 1,000 ದಂಡ ವಿಧಿಸಲು ನಿರ್ಧಾರ
  • ಹಸಿ, ಒಣ ಮತ್ತು ಸ್ಯಾನಿಟರಿ ಕಸವನ್ನು ವಿಂಗಡನೆ ಮಾಡುವುದು ಇನ್ಮುಂದೆ ಕಡ್ಡಾಯ
  • ನಗರದಾದ್ಯಂತ ಕಸ ವಿಲೇವಾರಿ ಮೇಲ್ವಿಚಾರಣೆಗೆ ಜಿಬಿಎಯಿಂದ ವಿಶೇಷ ತಂಡಗಳ ನಿಯೋಜನೆ
Bengaluru Waste Segregation Fine: ಬೆಂಗಳೂರಿನಲ್ಲಿ ಅತಿ ದೊಡ್ಡ‌ ಸಮಸ್ಯೆ ಎಂದರೆ ಅದು ಕಸ ಮತ್ತು ಟ್ರಾಫಿಕ್. ರಸ್ತೆ ಬದಿಗಳಲ್ಲಿ ರಾಶಿಗಟ್ಟಲೇ ಕಸ ಸುರಿಯೋದು ಸಿಲಿಕಾನ್​ ಸಿಟಿಯ ಅಂದವನ್ನು ಕೆಡಿಸುತ್ತಿದೆ. ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಉದ್ಯಮಿ ಕಿರಣ್ ಮಜುಂದಾರ್ ಶಾ ನಡುವೆ ಮಾತಿನ ಜಟಾಪಟಿಯೂ ನಡೆದಿತ್ತು.
ರಸ್ತೆ ಬದಿ ಕಸ ಸುರಿಯೋದು ಒಂದಾದರೇ, ಮತ್ತೊಂದು ಕಸವನ್ನು ಸ್ಯಾನಿಟರಿ, ಹಸಿ ಕಸ, ಒಣ ಕಸ ಎಂದು ವಿಂಗಡನೆ ಮಾಡದೆ ಆಟೋ ಟಿಪ್ಪರ್​ಗಳಿಗೆ ನೀಡುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ. ಸದ್ಯ ಈ ತಲೆನೋವಿಗೆ ಮದ್ದು ನೀಡಲು Bengaluru Solid Waste Management Limited (BSWML) ಮುಂದಾಗಿದೆ.
ಹೌದು, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್ (ಬಿಎಸ್​ಡಬ್ಲ್ಯೂಎಂಎಲ್) ಇನ್ಮುಂದೆ ಅಂದರೆ ಇಂದು ಏಪ್ರಿಲ್ 1ರಿಂದ ಜಾರಿಗೆ (April 1 Waste Fine Bengaluru)ಬರುವಂತೆ, ಮನೆಯಲ್ಲೇ ಕಸ ವಿಂಗಡಣೆ ಮಾಡದ ಸಾರ್ವಜನಿಕರಿಗೆ ಭಾರೀ ದಂಡ ವಿಧಿಸಲು ನಿರ್ಧರಿಸಲಾಗಿದೆ.

ಎಷ್ಟು ದಂಡ ಬೀಳುತ್ತೆ?

ಹೊಸ ನಿಯಮದ‌ಪ್ರಕಾರ, ಹಸಿ‌-ಒಣ ಮತ್ತು ಸ್ಯಾನಿಟರಿ ಕಸವನ್ನು ಪ್ರತ್ಯೇಕವಾಗಿ ವಿಂಗಡನೆ ಮಾಡದೆ ಟ್ರಕ್ ಗಳಿಗೆ ಕೊಟ್ಟರೆ, ಮೊದಲ ಬಾರಿಗೆ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಅದೇ ತಪ್ಪು ಮತ್ತೆ ಮಾಡಿದರೆ ದಂಡದ ಮೊತ್ತವನ್ನು 2,000 ರೂಪಾಯಿಗೆ ಏರಿಸಲಾಗುವುದು. ಮನೆಗಳು ಮಾತ್ರವಲ್ಲದೆ, ವಾಣಿಜ್ಯ ಸಂಸ್ಥೆ, ಕಾರ್ಖಾನೆ, ವೈದ್ಯಕೀಯ ಆಸ್ಪತ್ರೆಗಳು ಮಳಿಗೆ ಹೋಟೆಲ್​ಗಳಿಗೂ ಈ ನಿಯಮ ಅನ್ವಯವಾಗಲಿದೆ‌ ಎಂದು ಹೇಳಲಾಗಿದೆ.

ಕಸ ವಿಂಗಡನೆ ಹೇಗೆ ಮಾಡಬೇಕು?

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್​ನ ಅಧಿಕಾರಿ ಪ್ರಕಾರ, (Wet and Dry Waste Segregation) ಹಸಿ ಕಸದಲ್ಲಿ ಅಡುಗೆ ಮನೆ ತ್ಯಾಜ್ಯ, ಆಹಾರದ ಉಳಿಕೆ, ಹಣ್ಣು-ತರಕಾರಿ ಸಿಪ್ಪೆ ಇತ್ಯಾದಿ ಅಂದರೆ ಜೈವಿಕ ಆಹಾರದ ತ್ಯಾಜ್ಯವನ್ನು ವಿಂಗಡನೆ ಮಾಡಬೇಕು.
ಇನ್ನು ಒಣಕಸದಲ್ಲಿ ಪ್ಲಾಸ್ಟಿಕ್, ಪೇಪರ್, ಕಾರ್ಡ್‌ಬೋರ್ಡ್, ಗಾಜು, ಮೆಟಲ್ ಇತ್ಯಾದಿ. ಸ್ಯಾನಿಟರಿ ಮತ್ತು ವಿಶೇಷ ತ್ಯಾಜ್ಯದಲ್ಲಿ ಡೈಪರ್‌ಗಳು, ಸ್ಯಾನಿಟರಿ ನ್ಯಾಪ್ಕಿನ್‌ಗಳು ಟಿಶ್ಯೂ ಸೇರಿದಂತೆ,ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ವಿಂಗಡಿಸಿ ನೀಡಬೇಕಾಗುತ್ತದೆ.

ಕಸ ಪಡೆಯುವವರು ಹೇಗಿರ್ಬೇಕು?

ಬೆಂಗಳೂರು ನಗರದಾದ್ಯಂತೆ ನಿತ್ಯವೂ 6 ಸಾವಿರ ಟನ್​ನಷ್ಟು ಕಸ ಸಂಗ್ರಹಣೆಯಾಗುತ್ತಿದೆ. ಅದರಲ್ಲಿ, ದೊಡ್ಡ ಸಮಸ್ಯೆಯೆಂದರೆ ಕಸವಿಂಗಡನೆ. ವೈಜ್ಞಾನಿಕ ವಿಲೇವಾರಿಗೆ ಇದು ಅಡ್ಡಿಯನ್ನುಂಟು ಮಾಡುತ್ತಿದೆ. ಹೀಗಾಗಿ ಕಸ ವಿಂಗಡನೆಯ ವಿಶೇಷ ಕಾರ್ಯಾಚರಣೆ ನಡೆಸಲು ಘನತ್ಯಾಜ್ಯ ನಿರ್ವಹಣಾ ತಂಡ, ಮಾರ್ಷಲ್​ಗಳನ್ನು ನಿಯೋಜಿಸಲಾಗಿದೆ.
ಆಟೋ ಟಿಪ್ಪರ್​ ಲಾರಿ ಮತ್ತು ಪೌರ ಕಾರ್ಮಿಕರಿಗೆ ವಿಂಗಡನೆಯಾಗದ ಕಸವನ್ನು ನೀಡಬಾರದು. ಅಕಸ್ಮಾತ್​ ಕೊಟ್ಟರೆ ದಂಡ ಬೀಳೋದು ಗ್ಯಾರಂಟಿ ಇನ್ನು ಕಸ ಸಂಗ್ರಹಿಸುವವರು ಗ್ಲೌಸ್​ ಕಡ್ಡಾಯವಾಗಿ ಬಳಸಬೇಕು. ಮಾಸ್ಕ್​​ ಧರಿಸಬೇಕು. ಗಮ್​ ಬೂಟ್​ ಕಡ್ಡಾಯವಾಗಿರಬೇಕು ಎಂದು ಆದೇಶ ಹೊರಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net