ದೊಡ್ಡಬೆಳವಂಗಲ ಹೋರಾಟಕ್ಕೆ ಸಿಐಟಿಯು ಬೆಂಬಲ / DODABALLAPUR

ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯ್ಲಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್​ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಎಲ್​.ಸಿ.ಸುಮಾ, ಅನಿಲ್​ ಗುಪ್ತ, ಪಿ.ಕೆ.ವೆಂಕಟೇಶ್​, ಸಂಚಾಲನ ಸಮಿತಿಯ ತ್ರಿವೇಣಿ, ನಿರ್ಮಲಾ, ಮೋಹನ್​ ರಾಜು, ನರೇಶ್​ ಕುಮಾರ್​, ಮನೀಶ್​ ಶಮಾರ್, ಬೀರೇಂದ್ರ ಗುಪ್ತ ಇದ್ದರು.

Published on
ದೊಡ್ಡಬಳ್ಳಾಪುರ : ತಾಲೂಕಿನ ದೊಡ್ಡಬೆಳವಂಗಲ ಸುತ್ತಮುತ್ತ ಫಲವತ್ತಾದ 2,100 ಎಕರೆ ಕೃಷಿ ಭೂಮಿ ಸ್ವಾಧಿನದ ವಿರುದ್ಧ ಸ್ಥಳಿಯ ರೈತರು ದೊಡ್ಡಬೆಳವಂಗಲದ ಹಳೇ ನಾಡಕಚೇರಿ ಮುಂದೆ ನಡೆಸುತ್ತಿರುವ ಅರ್ನಿದಿಷ್ಟಾವಧಿ ಧರಣಿ ಐದನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಕ್ಕೆ ಸಿಐಟಿಯು ಬೆಂಬಲ ಸೂಚಿಸಿ ಧರಣಿಯಲ್ಲಿ ಭಾಗವಹಿಸಲಾಗುವುದು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್​ ಹೇಳಿದರು.
ನಗರದ ಸಿಐಟಿಯು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಅಭಿಪ್ರಾಯ ಪಡೆಯದೆ, ಸ್ಥಳಿಯ ಪಂಚಾಯಿತಿಗಳನ್ನು ಲೆಕ್ಕಿಸದೆ, ಪರಿಸರ ಮತ್ತು ಜೀವವೈವಿಧ್ಯದ ಸಮತೋಲನ ಪರಿಗಣಿಸದೆ ಕೃಷಿ ಜಮೀನಿಗೆ ಲಗ್ಗೆ ಹಾಕುವುದು, ಭೂಸ್ವಾಧಿನಕ್ಕೆ ನೋಟಿಸ್​ ನೀಡಿಲ್ಲ. ಕೈಗಾರಿಕಾ ಸ್ಥಾಪನೆಯ ಹೆಸರಿನಲ್ಲಿ ಈಗಾಗಲೇ ವಶಪಡಿಸಿಕೊಂಡಿರುವ ಭೂಮಿ ಇನ್ನೂ ಖಾಲಿ ಬಿದ್ದಿದ್ದು, ಅಲ್ಲೆಲ್ಲ ಕೈಗಾರಿಕೆಗಳು ಸ್ಥಾಪನೆಯಾಗಬೇಕಿದೆ ಎಂದರು.
ಸಿಐಟಿಯು ತಾಲೂಕು ಸಂಚಾಲನ ಸಮಿತಿ ಸಂಚಾಲಕ ರೇಣುಕಾ ಆರಾಧ್ಯ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net