ಮುಳಬಾಗಿಲು ತಾಲೂಕು ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ತಹಸೀಲ್ದಾರ್ ವಿ.ಗೀತಾ ,ನಿವೃತ್ತ ಪಿಎಸ್ಐ ವಿ.ಸೀತಪ್ಪ, ಬೆಸ್ತ ಗಂಗಾಮತ ಸಂಘದ ತಾಲೂಕು ಅಧ್ಯಕ್ಷ ಕೆ.ನಾಗರಾಜ್, ಕಾರ್ಯದರ್ಶಿ ಬಿ.ಸಿ.ಆನಂದ್, ಖಜಾಂಚಿ ಎಂ. ನಾಗರಾಜ್ ಇದ್ದರು. Jayanti
ಮುಳಬಾಗಿಲು: ನಿಜಶರಣ ಅಂಬಿಗರ ಚೌಡಯ್ಯ ಅವರು ಬಸವಣ್ಣ ಅವರ ಸಮಕಾಲೀನರಾಗಿದ್ದರು. Jayanti ಅವರು ವಚನಗಳ ಮೂಲಕ ಜಾತಿ ಪದ್ಧತಿ ಖಂಡಿಸಿ, ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿದರು. ಇಂತಹ ಪುಣ್ಯ ಪುರುಷರ ಆದರ್ಶಗಳು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ವಿ.ಗೀತಾ ಹೇಳಿದರು.
ತಾಲೂಕು ಕಚೇರಿ ಮುಂಭಾಗದಲ್ಲಿ ರಾಜ್ಯ ಬೆಸ್ತರ (ಗಂಗಾಮತ) ಸಂಘ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್ನಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ 906ನೇ ಜಯಂತಿಯಲ್ಲಿ ಮಾತನಾಡಿ, ಅಂಬಿಗರ ಚೌಡಯ್ಯ ಅವರ ವಚನಗಳು ಅವರ ಸಮಾಜ ಸುಧಾರಣೆಯ ದೃಷ್ಟಿಕೋನ ತೋರಿಸುತ್ತವೆ ಎಂದರು.
ಬೆಸ್ತ ಗಂಗಾಮತ ಸಂಘದ ತಾಲೂಕು ಅಧ್ಯಕ್ಷ ಕೆ. ನಾಗರಾಜ್ ಮಾತನಾಡಿ, ನಮ್ಮ ಸಮುದಾಯ ಅತ್ಯಂತ ಹಿಂದುಳಿದಿದ್ದು, ಆದುದರಿಂದ ತಾಲೂಕು ಆಡಳಿತ ಸಮುದಾಯದ ಅಭಿವೃದ್ಧಿಗೆ ಶೈಕ್ಷಣಿಕ ಸಂಸತಿಕ ಚಟುವಟಿಕೆಗಳನ್ನು ಆಯೋಜಿಸಲು 2 ಎಕರೆ ಜಮೀನು ಮಂಜೂರು ಮಾಡಿ ಸರ್ಕಾರದಿಂದ ವಿದ್ಯಾರ್ಥಿನಿಲಯ ನಿಮಾರ್ಣಕ್ಕೆ ಅನುದಾನ ನೀಡಬೇಕು. ಬೆಸ್ತ ಕುಲಸ್ಥರಿಗೆ ಮೀನುಗಾರಿಕೆ ಇಲಾಖೆಯು ಕನಿಷ್ಠ 50 ಆಶ್ರಯ ಮನೆಗಳನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಬಡ್ತಿ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಎಂ. ಶಿವಣ್ಣ ನಿಜಶರಣ ಅಂಬಿಗರ ಚೌಡಯ್ಯ ಜೀವನ ಚರಿತ್ರೆ ತಿಳಿಸಿದರು.
ನಿವೃತ್ತ ಪಿಎಸ್ಐ ವಿ.ಸೀತಪ್ಪ, ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಪಿ.ಸೋಮೇಶ್, ಉಪ ತಹಸೀಲ್ದಾರ್ ಆರ್.ಕೊಂಡಪ್ಪ, ಸಿ.ಸುಬ್ರಮಣಿ ಇದ್ದರು.