ಚಿರತೆ ದಾಳಿಗೆ ಟಗರು ಬಲಿ ಶಂಕೆ !

ಕಕ್ಕೇರಾ ಸಮೀಪದ ತಳ್ಳೇಳ್ಳರದೊಡ್ಡಿಯಲ್ಲಿ ಮಂಗಳವಾರ ರಾತ್ರಿ ಯಂಕಪ್ಪ ತಳ್ಳಳ್ಳಿ ಎಂಬುವವರ ಟಗರನ್ನು ಚಿರತೆ ಬಲಿ ತೆಗೆದುಕೊಂಡಿದೆ ಎನ್ನಲಾದ ಸ್ಥಳಕ್ಕೆ ಅರಣ್ಯ ಇಲಾಖೆ ಅಽಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಚಿರತೆ ಸೆರೆಗೆ ಬೋನು ಅಳವಡಿಸಿರುವುದು.
ಕಕ್ಕೇರಾ ಸಮೀಪದ ತಳ್ಳೇಳ್ಳರದೊಡ್ಡಿಯಲ್ಲಿ ಮಂಗಳವಾರ ರಾತ್ರಿ ಯಂಕಪ್ಪ ತಳ್ಳಳ್ಳಿ ಎಂಬುವವರ ಟಗರನ್ನು ಚಿರತೆ ಬಲಿ ತೆಗೆದುಕೊಂಡಿದೆ ಎನ್ನಲಾದ ಸ್ಥಳಕ್ಕೆ ಅರಣ್ಯ ಇಲಾಖೆ ಅಽಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಚಿರತೆ ಸೆರೆಗೆ ಬೋನು ಅಳವಡಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಚಿರತೆ ಸೆರೆಗೆ ತಳ್ಳೇಳ್ಳರದೊಡ್ಡಿಯಲ್ಲಿ ಬೋನು ಅಳವಡಿಸಿದ ಅರಣ್ಯ ಸಿಬ್ಬಂದಿ
ಕಕ್ಕೇರಾ: ಸಮೀಪದ ಹೊಸೂರ ಗ್ರಾಮದ ಹತ್ತಿರದ ತಳ್ಳೇಳ್ಳರದೊಡ್ಡಿಯಲ್ಲಿ ಯಂಕಪ್ಪ ತಳ್ಳಳ್ಳಿ ಅವರಿಗೆ ಸೇರಿದ ಟಗರು ಮಂಗಳವಾರ ರಾತ್ರಿ ಚಿರತೆ ದಾಳಿ ಮಾಡಿ ಬಲಿ ತೆಗೆದುಕೊಂಡಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದು ಬುಧವಾರ ಬೆಳಗ್ಗೆ ಪಟ್ಟಣದ ಪುರಸಭೆ ಸದಸ್ಯರಾದ ರಾಜು ಹವಾಲ್ದಾರ್, ಅಮರೇಶ ದೊರೆ, ಪರಮಣ್ಣ ಕಮತಗಿ ಹಾಗೂ ಅರಣ್ಯ ಇಲಾಖೆ ಅಽಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಬೋನು ಅಳವಡಿಸಲಾಗಿದೆ.
ಪ್ರಾದೇಶಿಕ ವಲಯ ಸುರಪುರ ಉಪ ವಲಯ ಅರಣ್ಯಾಽಕಾರಿ ಭಾಗಪ್ಪಗೌಡ ಮಾತನಾಡಿ, ತಳ್ಳೇಳ್ಳರದೊಡ್ಡಿಯಲ್ಲಿ ಒಂದು ಟಗರು ಸತ್ತಿದ್ದು ನಿಜ. ಆದರೆ ಟಗರನ್ನು ಚಿರತೆಯೇ ದಾಳಿ ಮಾಡಿ ಬಲಿ ಪಡೆದಿದೆ ಎಂದು ನಿಖರವಾಗಿ ಯಾರೂ ಗಮನಿಸಿಲ್ಲ. ಕೇವಲ ಊಹಾಪೋಹವಾಗಿದ್ದು ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ಮಾಡಲಾಗುವುದು ಎಂದರು.
ಜನರು ಸದಾ ಜಾಗೃತಿಯಿಂದ ಇದ್ದು ತಮ್ಮ ಜನ, ಜÁನುವಾರಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ರಾತ್ರಿ ಹಾಗೂ ಹಗಲು ವೇಳೆ ಚಿರತೆ ಅಥವಾ ಯಾವುದಾದರೂ ಅಪಾಯಕಾರಿ ಪ್ರಾಣಿಗಳು ಕಂಡು ಬಂದಲ್ಲಿ ತಕ್ಷಣ ನಮ್ಮ ಗಮನಕ್ಕೆ ತರಬೇಕು ಎಂದು ಹೇಳಿದರು. ಈಗಾಗಲೇ ಜನ ಮತ್ತು ಜÁನುವಾರಗಳ ಪ್ರಾಣ ರಕ್ಷಣೆಗಾಗಿ ಚಿರತೆಯ ಜೀವಂತ ಸೆರೆಗಾಗಿ ತಳ್ಳೇಳ್ಳರದೊಡ್ಡಿಯಲ್ಲಿ ಬೋನು ಅಳವಡಿಸಲಾಗಿದೆ ಎಂದು ಹೇಳಿದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ದೊಡ್ಡಿಯ ನಿವಾಸಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net