

ಪ್ರಮುಖ ಮುಖ್ಯಾಂಶಗಳು
ಕೋಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ
ಮಹೇಶ್ ಶೆಟ್ಟಿ ಅವರ ಮನೆಯಲ್ಲಿ ತನ್ನನ್ನು ಜೀತದಾಳುವಿನಂತೆ ಕೂಡಿ ಹಾಕಲಾಗಿತ್ತು. ಪ್ರತಿದಿನ ಮಟ್ಟಣ್ಣವರ್ ಅವರಿಗೆ ಮಸಾಜ್ ಮಾಡಲು ಒತ್ತಾಯಿಸಲಾಗುತ್ತಿದ್ದು. ಬೆದರಿಕೆ ಹಾಕಿ ಸುಳ್ಳು ಹೇಳಿಕೆಗಳನ್ನು ವಿಡಿಯೋ ರೆಕಾರ್ಡ್ ಮಾಡಿಟ್ಟಿದ್ದರು. ಅವರು ಹೇಳಿದ ಸ್ಥಳಗಳನ್ನು ಎಸ್ಐಟಿಗೆ ತೋರಿಸುವಂತೆ ಒತ್ತಾಯಿದ್ದರು. ಈ ಬಗ್ಗೆ ತರಬೇತಿ ಕೂಡ ನೀಡಲಾಗಿತ್ತು. ಧರ್ಮಸ್ಥಳದಲ್ಲಿ ತನಿಖೆ ಅಸ್ಥಿಪಂಜರಗಳು ಸಿಗದ ಸಂದರ್ಭದಲ್ಲಿ ಕೋಪಗೊಂಡಿದ್ದ ಮಹೇಶ್ ಶೆಟ್ಟಿ ತನ್ನ ಮೇಲೆ ಹಲ್ಲೆ ಕೂಡ ಮಾಡಿ, ಕೊಲೆ ಬೆದರಿಕೆ ಕೂಡ ಹಾಕಿದ್ದರು. ಕೊನೆಗೆ ಧರ್ಮಸ್ಥಳದ ವಿರುದ್ಧ ಸುಳ್ಳು ಸಾ ಹೇಳಲು ಆತ್ಮಸಾಕ್ಷಿ ಒಪ್ಪದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ. ಆದರೆ ಅದನ್ನು ತಡೆದಿದ್ದ ಸಂಚುಕೋರರು ಪುನಃ ಹಲ್ಲೆ ನಡೆಸಿದ್ದರು. ಕೊನೆಗೆ ಪ್ರಾಣಭಯದಿಂದ ರಾತ್ರಿಯಿಡೀ ಯೋಚಿಸಿ ಎಸ್ಐಟಿ ಅಧಿಕಾರಿಗಳ ಮುಂದೆ ಸತ್ಯ ಬಿಚ್ಚಿಟ್ಟಿದ್ದೆ ಎಂದು ಚಿನ್ನಯ್ಯ ಹೇಳಿದ್ದಾರೆ.