ಚಿಂಚಣಿ ಮಠದಿಂದ ಬಡ ಮಕ್ಕಳಿಗೆ ಸೂರು

ಚಿಂಚಣಿ ಮಠದಿಂದ ಬಡ ಮಕ್ಕಳಿಗೆ ಸೂರು
ಚಿಂಚಣಿ ಮಠದಿಂದ ಬಡ ಮಕ್ಕಳಿಗೆ ಸೂರು
Published on

ಪ್ರಮುಖ ಮುಖ್ಯಾಂಶಗಳು

  • ಚಿಂಚಣಿ ಮಠದಿಂದ ಬಡ ಮಕ್ಕಳಿಗೆ ಸೂರು
  • ಕನ್ನಡದ ಮಠದಿಂದ ಮಹತ್ತರ ಕಾರ್ಯ
  • ೫೦೦ ಮಕ್ಕಳಿಗಾಗಿ ಉಚಿತ ವಸತಿ ನಿಲಯ ನಿರ್ಮಾಣ
  • ಗಡಿ ಭಾಗದ ಹೆಮ್ಮೆ ಚಿಂಚಣಿ ಮಠ
ಕನ್ನಡ ದೇಗುಲದಿಂದ ಮಹತ್ತರ ಕಾರ್ಯ | ವಸತಿನಿಲಯ
ಬಡಮಕ್ಕಳಿಗೆ ಚಿಂಚಣಿ ಮಠದ ಸೂರು
ಆನಂದ ಭಮ್ಮನ್ನವರ ಚಿಕ್ಕೋಡಿ:
ಗಡಿ ಭಾಗದಲ್ಲಿ ಕನ್ನಡದ ನಾಡು, ನುಡಿ ಸೇವೆಗೆ ಹೆಸರಾದ, ಕನ್ನಡದ ಮಠವೆಂದೇ ಪ್ರಸಿದ್ದಿ ಪಡೆದಿರುವ ತಾಲೂಕಿನ ಚಿಂಚಣಿ ಗ್ರಾಮದ ಅಲ್ಲಮಪ್ರಭು ಸಿದ್ದಸಂಸ್ಥಾನ ಮಠ ಬಡಮಕ್ಕಳಿಗಾಗಿ ಉಚಿತ ವಸತಿ ನಿಲಯ ನಿರ್ಮಾಣ ಕಾರ್ಯಕ್ಕೆ ಶ್ರೀಮಠ ಮುಂದಾಗಿದೆ.
500 ಮಕ್ಕಳ ವಸತಿ ನಿಲಯ ನಿರ್ಮಾಣ: ಬಡ ಕುಟುಂಬದ ಮಕ್ಕಳ ಆರ್ಥಿಕ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಅಲ್ಲಮಪ್ರಭು ಸಿದ್ದಸಂಸ್ಥಾನ ಮಠ 2026-27 ನೇ ಶೈಕ್ಷಣಿಕ ವರ್ಷದಿಂದ 1 ರಿಂದ 10 ನೇ ತರಗತಿಯಲ್ಲಿ ಓದುವ 500 ಬಡ ಮಕ್ಕಳಿಗೆ ಉಚಿತವಾಗಿ ವಸತಿ ನಿಲಯದಲ್ಲಿ ಆಶ್ರಯ ನೀಡಲಾಗುತ್ತದೆ. ಗ್ರಾಮದ ಹೊರವಲಯದ ಮಠದ 5 ಜಾಗದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕುಮಾರೇಶ್ವರ ಹಾಗೂ ಅಲ್ಲಮಪ್ರಭು ವಸತಿನಿಲಯ ಹೆರಸರಿನಡಿ 51 ಸುಸಜ್ಜಿತ ಕೊಠಡಿ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾರ್ಚ್ 15 ರಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ.
ಶ್ರೀಗಳಿಂದ ಜೋಳಿಗೆ: ಸರ್ಕಾರ ಹಾಗೂ ಭಕ್ತರಿಂದ ದೇಣಿಗೆ ಸಂಗ್ರಹಿಸಿದ ಮಠ-ಮಾನ್ಯ
ಬೆಳೆಸುವುದು ಸಾಮಾನ್ಯ. ಆದರೆ, ಬಡಮಕ್ಕಳ ಶಿಕ್ಷಣಕ್ಕಾಗಿ ಮಠಾಧೀಶರು ಜೋಳಿಗೆ ಹಾಕುವುದು ವಿಶೇಷ. ಮಪ್ರಭು ಮಠದ ಈಗಿನ ಪೀಠಾಧಿಪತಿ ಶಿವಪ್ರಸಾದ ದೇವರು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ 200ಕ್ಕೂ ಅಧಿಕ ಗ್ರಾಮಗಳಲ್ಲಿ ದೇಣಿಗೆ ಸಂಗ್ರಹ ಕಾರ್ಯ ಕೈಗೊಂಡಿದ್ದಾರೆ.
---
ಶ್ರೀಮಠದಿಂದ 45 ಗ್ರಂಥ ಪ್ರಕಟ
ಅಲ್ಲಮಪ್ರಭು ಕಲ್ಯಾಣ ಸಂಸ್ಥೆಯ 'ಕನ್ನಡ ಜಾಗೃತಿ ಪುಸ್ತಕ ಮಾಲೆ' ಮೂಲಕ ಆಧುನಿಕ ಕರ್ನಾಟಕ ಆತಂಕಗಳು, ಮಹಾಜನ ವರದಿ ಅವಲೋಕನ, ಕನ್ನಡ ಕೋಟೆ ಕೆಎಲ್‌ಇ ಸೇರಿದಂತೆ 45ಕ್ಕೂ ಅಧಿಕ ಮೌಲ್ಯದ ಗ್ರಂಥಗಳನ್ನು ಪ್ರಕಟಿಸುವ ಮೂಲಕ ಶ್ರೀಮಠ ಸಾಹಿತ್ಯ ಲೋಕದಲ್ಲೂ ಪ್ರಸಿದ್ದಿ ಪಡೆದಿದೆ.
ಭಾಕ್ಸ್
ಅಲ್ಲಮಪ್ರಭು ಸ್ವಾಮೀಜಿ ಕನಸಿನಂತೆ ಬಡಮಕ್ಕಳು
ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ 500 ಬಡಮಕ್ಕಳಿಗೆ ಉಚಿತ ವಸತಿನಿಲಯ ನಿರ್ಮಿಸಲಾಗುತ್ತಿದೆ. ಭಕ್ತರು ಸ್ವಯಂಪ್ರೀತರಾಗಿ ದೇಣಿಗೆ ನೀಡುತ್ತಿದ್ದಾರೆ.
| ಶಿವಪ್ರಸಾದ ದೇವರು ಪೀಠಾಧಿಪತಿ, ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠ ಚಿಂಚಣಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net