ರವೀಂದ್ರ ಕಲಾಕ್ಷೇತ್ರದಲ್ಲಿ ಮಕ್ಕಳ ರಂಗ ಹಬ್ಬ; ಜನಮನ ಸೆಳೆದ ಚಿಣ್ಣರ ಪ್ರತಿಭೆ

ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಮಕ್ಕಳ ರಂಗ ಹಬ್ಬದಲ್ಲಿ ವಿವಿಧ ಪ್ರಾಂತ್ಯದ ಮಕ್ಕಳು ಪಾಲ್ಗೊಂಡಿದ್ದರು. ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ.ಬಿ.ಎಸ್.ಮಂಜುನಾಥ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಮಕ್ಕಳ ರಂಗ ಹಬ್ಬದಲ್ಲಿ ವಿವಿಧ ಪ್ರಾಂತ್ಯದ ಮಕ್ಕಳು ಪಾಲ್ಗೊಂಡಿದ್ದರು. ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ.ಬಿ.ಎಸ್.ಮಂಜುನಾಥ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರವೀಂದ್ರ ಕಲಾಕ್ಷೇತ್ರದಲ್ಲಿ ಮಕ್ಕಳ ರಂಗ ಹಬ್ಬ
  • ಜನಮನ ಸೆಳೆದ ಚಿಣ್ಣರ ರಂಗ ಪ್ರತಿಭೆ
  • 10 ನಾಟಕಗಳನ್ನು ಪ್ರದರ್ಶನ ಮಾಡಿದ ಬಾಲ ಪ್ರತಿಭೆಗಳು

ಬೆಂಗಳೂರು:ಮಕ್ಕಳ ರಂಗಭೂಮಿಗೆಹೆಚ್ಚಿನ ಪ್ರೋತ್ಸಾಹ ನೀಡುವದೃಷ್ಟಿಯಿಂದ ಕರ್ನಾಟಕ ನಾಟಕಅಕಾಡೆಮಿಯು ಕಳೆದ ವರ್ಷದಿಂದ ಮೇತಿಂಗಳಲ್ಲಿ ಆಯೋಜಿಸುವ ಮಕ್ಕಳರಂಗ ಹಬ್ಬವು ಶುಕ್ರವಾರ ರವೀಂದ್ರಕಲಾಕ್ಷೇತ್ರದಲ್ಲಿ ನಡೆಯಿತು.ಚಿಕ್ಕ ಮಕ್ಕಳಪ್ರತಿಭೆಯು ವೇದಿಕೆಯ ಮೇಲೆಅನಾವರಣಗೊಳ್ಳುವ ಮೂಲಕ ನೆರೆದಿದ್ದಜನರ ಗಮನ ಸೆಳೆಯಿತು.

ಕಾರ್ಯಕ್ರಮವನ್ನುಕನ್ನಡ ಮತ್ತು ಸಂಸ್ಕೃತಿ ಇಲಾಖೆಯನಿರ್ದೇಶಕ ಡಾ.ಬಿ.ಎಸ್.ಮಂಜುನಾಥಸ್ವಾಮಿಉದ್ಘಾಟಿಸಿದರು.ಕರ್ನಾಟಕ ನಾಟಕಅಕಾಡೆಮಿಯ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಗೀತನೃತ್ಯ ಅಕಾಡೆಮಿಯ ಅಧ್ಯಕ್ಷೆ ಶುಭಧನಂಜಯ, ಕರ್ನಾಟಕಕೊಂಕಣಿ ಸಾಹಿತ್ಯ ಅಕಾಡೆಮಿಅಧ್ಯಕ್ಷ ಜೋಕಿಂ ಸ್ಟ್ಯಾನಿಆಲ್ವಾರಿಸ್ ಮತ್ತಿತರರು ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.ಸಮಾರಂಭದಲ್ಲಿಹಿರಿಯ ರಂಗಕರ್ಮಿಗಳಾದ ಶೋಭಾವೆಂಕಟೇಶ್ ಮತ್ತು ಎನ್.ಮಂಗಳರಂಗಾಯಣ ಅವರಿಗೆ ರಂಗ ಗೌರವವನ್ನುಸಲ್ಲಿಸಲಾಯಿತು.

ಶುಕ್ರವಾರಬೆಳಗ್ಗಿನಿಂದ ರಾತ್ರಿಯವರೆಗೆನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದವಿವಿಧ ಭಾಗಗಳ 10ನಾಟಕಗಳನ್ನುಪ್ರದರ್ಶಿಸಲಾಯಿತು.ಉತ್ತರ ಕನ್ನಡದಸಿದ್ಧಿ ಸಮುದಾಯದ ಮಕ್ಕಳು,ಕೋಲಾರದ ಆದಿಮಸಂಸ್ಥೆಯ ಮಕ್ಕಳು,ಮಂಡ್ಯ ಜಿಲ್ಲೆಯಅಕ್ಕಿಹೆಬ್ಬಾಳು ಗ್ರಾಮೀಣ ಮಕ್ಕಳುಹಾಗೂ ಬೆಂಗಳೂರು ನಗರದಲ್ಲಿವಾಸಿಸುತ್ತಿರುವ ಗಾರ್ಮೆಂಟ್ಸ್ಕಾರ್ಮಿಕರ ಮಕ್ಕಳು ಹೀಗೆ ಹಲವಾರುವಿಶಿಷ್ಟ ಶಿಬಿರಗಳ ಮೂಲಕ ನಾಟಕಗಳಪ್ರದರ್ಶನಕ್ಕೆ ರಂಗ ಹಬ್ಬದಲ್ಲಿಅವಕಾಶ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net