ಬೇಸಿಗೆ ಶಿಬಿರದಲ್ಲಿ ಮಕ್ಕಳ ಕೌಶಲ ವೃದ್ಧಿ summer camp

ಬೇಸಿಗೆ ಶಿಬಿರದಲ್ಲಿ ಮಕ್ಕಳ ಕೌಶಲ ವೃದ್ಧಿ summer camp
ಬೇಸಿಗೆ ಶಿಬಿರದಲ್ಲಿ ಮಕ್ಕಳ ಕೌಶಲ ವೃದ್ಧಿ summer camp
Published on
ಚಿಂತಾಮಣಿ: ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಕೌಶಲ ಬೆಳೆಸಲು, ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ನೆರವಾಗುವ ಅತ್ಯುತ್ತಮ ವೇದಿಕೆಯಾಗಿ ಮತ್ತು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಪ್ರೋತ್ಸಾಹ ನೀಡುತ್ತವೆ ಎಂದು ಮಸ್ತೆನಹಳ್ಳಿ ಮುರಾರ್ಜಿ ವಸತಿ ಶಾಲೆ ಪ್ರಾಂಶುಪಾಲೆ ಅರುಣ ಪಲ್ಲವಿ ತಿಳಿಸಿದರು.
ತಾಲೂಕಿನ ಕೈವಾರ ಹೋಬಳಿ ಸರ್ಕಾರಿ ಶಾಲೆ ಮಕ್ಕಳಿಗಾಗಿ ಕೈವಾರ ಕೆಪಿಎಸ್​ ಶಾಲೆಯಲ್ಲಿ ಏ.16 ರಿಂದ 25 ರವರೆಗೆ 10 ದಿನಗಳ ಕಾಲ ಹಮ್ಮಿಕೊಂಡ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು. summer camp
ಕೈವಾರ ಕ್ಲಸ್ಟರ್​ ಸಿಆರ್​ಪಿ ಎಜಾಜ್​ ಬೇಗ್​ ಮಾತನಾಡಿ, ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಶುಲ್ಕ ಕಟ್ಟಿಸಿಕೊಂಡು ಬೇಸಿಗೆಯಲ್ಲಿ ಶಿಬಿರಗಳನ್ನು ನಡೆಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಖಾಸಗಿ ಶಾಲೆಗಳಿಗಿಂತ ನಾವೇನು ಕಡಿಮೆ ಇಲ್ಲ ಎನ್ನುವಂತೆ ಶಿಬಿರ ನಡೆಸುತ್ತಿರುವುದು ಹೆಮ್ಮೆಯಾಗಿದೆ.
ಮಕ್ಕಳು ಬೇಸಿಗೆ ರಜೆಯಲ್ಲಿ ನೀರಿನಲ್ಲಿ ಆಟ ಆಡಲು ಹೋಗಿ ಅನಾಹುತಗಳು ಹೆಚ್ಚಾಗುತ್ತಿವೆ. ಬೇರೆ ಚಟುವಟಿಕೆಗಲ್ಲಿ ಭಾಗವಹಿಸಿ ಸಮಯ ವ್ಯರ್ಥ ಮಾಡದೆ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಕೆಪಿಎಸ್​ ಶಾಲೆ ಮುಖ್ಯಶಿಕ್ಷಕ ರಹೀಮ್​ ಖಾನ್​ ಮಾತನಾಡಿ, ಸರ್ಕಾರ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತಂದು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಗಳು ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಯೋಗ, ಕ್ರಾಪ್ಟ್​, ಮನರಂಜನೆ ಆಟಗಳು, ಪ್ರಬಂಧ ಸ್ಪರ್ಧೆ ಇನ್ನು ಮುಂತಾದ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹಿರೇಕಟ್ಟಿಗೆನಹಳ್ಳಿ ಸಿಆರ್​ಪಿ ಶ್ರೀನಿವಾಸ್​ ಮಾತನಾಡಿದರು.ಶಿಕ್ಷಕರಾದ ಶ್ರೀಧರ್​ ಹಿರೇಮಠ್​, ಚಂದ್ರಪ್ಪ, ವಿಜಯಲಕ್ಷಿ$್ಮ, ಚೈತ್ರಾ, ಈಶ್ವರ್​ ರೆಡ್ಡಿ, ಸೂರ್ಯಕಲಾ, ರಾಧಮ್ಮ, ಶ್ರೀಧರ್​, ಸುರೇಶ್​ ಬಾಬು ಪಾಲಕರು, ಅಡುಗೆ ಸಹಾಯಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net