ಸರ್ಜಾಪುರ ಸಮೀಪದ Anniversary ದೊಮ್ಮಸಂದ್ರ ಗ್ರಾಮದ ಧರ್ಮಸಾಗರ ಎಂ. ಮುದ್ದಣ್ಣ ಮುನ್ನಿ ಮಲ್ಲಮ್ಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯ ಅಶ್ವಥ್ ನಾರಾಯಣ ರೆಡ್ಡಿ, ಖಜಾಂಚಿ ಡಾ.ಡಿ.ವಿ ಧನರಾಜ್, ಕಾರ್ಯದರ್ಶಿ ಬಿ.ವಿ ಶಾಂತಕುಮಾರ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಆನೇಕಲ್ ತಾಲೂಕು ವಕೀಲರ ಸಂದ ಅಧ್ಯ ಪಟಾಪಟ್ ಪ್ರಕಾಶ್ ಸಲಹೆ
ಸರ್ಜಾಪುರ: ವಿದ್ಯಾರ್ಥಿಗಳು ಪರೀೆಗಾಗಿ ಮಾತ್ರ ಓದದೆ ತಮ್ಮ ಜೀವನದ ಮಾರ್ಗ ನಿರ್ಮಾಣಕ್ಕಾಗಿ Anniversary ಮತ್ತು ತಮ್ಮ ಪರಿಸ್ಥಿತಿಗಳನ್ನು ಬದಲಾಯಿಸಿ ಸಮಾಜದಲ್ಲಿ ಉತ್ತಮವಾಗಿ ಜೀವಿಸಲು ಓದಬೇಕು ಎಂದು ಆನೇಕಲ್ ತಾಲೂಕು ವಕೀಲರ ಸಂದ ಅಧ್ಯ ಪಟಾಪಟ್ ಪ್ರಕಾಶ್ ತಿಳಿಸಿದರು.
ಸರ್ಜಾಪುರ ಸಮೀಪದ ದೊಮ್ಮಸಂದ್ರ ಗ್ರಾಮದ ಧರ್ಮಸಾಗರ ವಿದ್ಯಾಸಂಸ್ಥೆಯ ಆವರಣದಲ್ಲಿ ಧರ್ಮಸಾಗರ ಎಂ. ಮುದ್ದಣ್ಣ ಮುನ್ನಿ ಮಲ್ಲಮ್ಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳ ಭವಿಷ್ಯವೇ ತಮ್ಮ ಉದ್ಧಾರವೆಂದು ಭಾವಿಸುವ ಪಾಲಕರ ಆಸೆ&ಆಕಾಂೆಗಳಿಗೆ ತಣ್ಣೀರು ಹಾಕಬಾರದು. ಶಿಣವೆಂಬುದು ಸಾಧನೆಗಳ ಬಾಗಿಲು ತೆರೆಯುವ ಕೀಲಿಕೈ ಆಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳ ಅತಿಯಾದ ಪ್ರಭಾವದಿಂದ ಮಕ್ಕಳ ಮನಸ್ಥಿತಿ ಹದಗೆಡುವ ಸಾಧ್ಯತೆ ಇರುವುದರಿಂದ ಪಾಲಕರು ಹಾಗೂ ಶಿಕರು ಎಚ್ಚರಿಕೆಯಿಂದಿರಬೇಕು. ನಟರು ಅಥವಾ ಹೊರಗಿನ ವ್ಯಕ್ತಿಗಳು ಆದರ್ಶವಾಗುವುದಕ್ಕಿಂತ, ತಮ್ಮ ಏಳಿಗೆಗಾಗಿ ತ್ಯಾಗ ಮಾಡುವ ತಂದೆಯೇ ಮಕ್ಕಳ ನಿಜವಾದ ನಾಯಕ ಎಂದು ಹೇಳಿದರು.
ಮಕ್ಕಳು ವೈಾನಿಕ ಚಿಂತನೆಗಳನ್ನು ಅಳವಡಿಸಿಕೊಂಡು ಮೂಢನಂಬಿಕೆಗಳಿಂದ ದೂರವಿರಬೇಕು. ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವ ಗುಣವೇ ನಿಜವಾದ ಧರ್ಮವಾಗಿದ್ದು, ಪ್ರೀತಿ ಮತ್ತು ಮೈತ್ರಿಯಿಂದ ಬದುಕುವ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಧರ್ಮಸಾಗರ ವಿದ್ಯಾಸಂಸ್ಥೆಯ ಖಜಾಂಚಿ ಡಾ.ಡಿ.ವಿ ಧನರಾಜ್ ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಶ್ರಮ ಮತ್ತು ಶಿಸ್ತು ಎಂಬ ಎರಡು ಸ್ತಂಭಗಳು ಅತ್ಯಂತ ಮುಖ್ಯವಾಗಿದ್ದು, ನಿಮ್ಮ ಕಲಿಕೆ ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಪಾಲಕರು ಮತ್ತು ಶಿಕರ ಮಾರ್ಗದರ್ಶನವನ್ನು ಗೌರವಿಸಿ ನಡೆಯಬೇಕಿದ್ದು, ಸಕಾರಾತ್ಮಕ ಚಿಂತನೆ ಮತ್ತು ಉತ್ತಮ ಸ್ನೇಹಿತರ ಸಹವಾಸ ನಿಮ್ಮ ಬದುಕಿಗೆ ಉತ್ತಮವಾದಂತಹ ದಾರಿ ತೋರಿಸುತ್ತದೆ ಎಂದು ತಿಳಿಸಿದರು.
ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪೋತ್ಸಾಹ ಧನ ವಿತರಿಸಲಾಯಿತು.
ಆನೇಕಲ್ ವಕೀಲರ ಸಂದ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿರುವ ವಿ.ರವೀಶ್ ಕುಮಾರ್ ಮತ್ತು ಮಾಜಿ ಅಧ್ಯ ಪಟಾಪಟ್ ಪ್ರಕಾಶ್ ಅವರನ್ನು ಧರ್ಮಸಾಗರ ವಿದ್ಯಾಸಂಸ್ಥೆಯಿಂದ ಸನ್ಮಾನಿಸಲಾಯಿತು.
ವಿದ್ಯಾಸಂಸ್ಥೆಯ ನಿರ್ದೇಶಕರಾದ ಡಿ.ಸಿ ಮನೋಹರ್, ಡಿ.ಎಚ್ ಜಗನ್ನಾಥ್, ಡಿ.ವಿ ಸುರೇಶ್, ಡಿ.ಎಸ್ ಕೃಷ್ಣಪ್ಪ, ಆರ್.ಎಸ್ ವೆಂಕಟಸ್ವಾಮಿ, ಕೆ,ವೇಣುಗೋಪಾಲ್, ಹಿರಿಯ ವಿದ್ಯಾರ್ಥಿಗಳ ಚಾರಿಟಬಲ್ ಟ್ರಸ್ಟ್ನ ಅಧ್ಯ ಎಸ್.ಕೇಶವ್ ಬಾಬಾರೆಡ್ಡಿ ಇದ್ದರು.