ವಿಯಾನ್ಶ್ ದೇಶಪಾಂಡೆಗೆ ಹೊಯ್ಸಳ ಪ್ರಶಸ್ತಿ! Hoysala Award

ವಿಯಾನ್ಶ್ ದೇಶಪಾಂಡೆಗೆ ಹೊಯ್ಸಳ ಪ್ರಶಸ್ತಿ! Hoysala Award
ವಿಯಾನ್ಶ್ ದೇಶಪಾಂಡೆಗೆ ಹೊಯ್ಸಳ ಪ್ರಶಸ್ತಿ! Hoysala Award
Published on

ಪ್ರಮುಖ ಮುಖ್ಯಾಂಶಗಳು

  • ಬಾಲ ಪ್ರತಿಭೆ ವಿಯಾನ್ಶ್ ದೇಶಪಾಂಡೆ ತನ್ನ ಅಸಾಧಾರಣ ಸಾಧನೆಗಾಗಿ ಹೊಯ್ಸಳ ಪ್ರಶಸ್ತಿ ಗೌರವ
  • ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಲಾಗುವ ಪ್ರತಿಷ್ಠಿತ ಹೊಯ್ಸಳ ಪ್ರಶಸ್ತಿ ವಿಯಾನ್ಶ್ ಭಾಜನ
  • ಈ ಪ್ರಶಸ್ತಿಯನ್ನು ವಿಯಾನ್ಶ್ ತನ್ನ ಎರಡು ವಿಶ್ವ ದಾಖಲೆಗಳ ಆಧಾರದ ಮೇಲೆ ಪಡೆದಿದ್ದಾನೆ
ಬೆಂಗಳೂರು: ಬಾಲ ಪ್ರತಿಭೆ ವಿಯಾನ್ಶ್ ದೇಶಪಾಂಡೆ ತನ್ನ ಅಸಾಧಾರಣ ಸಾಧನೆಗಾಗಿ ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಲಾಗುವ ಪ್ರತಿಷ್ಠಿತ ಹೊಯ್ಸಳ ಪ್ರಶಸ್ತಿ ( Hoysala Award  ) ಯನ್ನು ಪಡೆದಿದ್ದಾನೆ. 
ಇತ್ತೀಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅಸಾಧಾರಣ ಸಾಧನೆಗಾಗಿ ಬಾಲಕರಿಗೆ ಹೊಯ್ಸಳ ಪ್ರಶಸ್ತಿ ಹಾಗೂ ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಲಾಗುತ್ತದೆ.
ಈ ಪ್ರಶಸ್ತಿಯನ್ನು ಅವನು ತನ್ನ ಎರಡು ವಿಶ್ವ ದಾಖಲೆಗಳ ಆಧಾರದ ಮೇಲೆ ಪಡೆದಿದ್ದಾನೆ. ಕೇವಲ 1 ನಿಮಿಷದಲ್ಲಿ ಅತಿ ಹೆಚ್ಚು ಶ್ಲೋಕಗಳನ್ನು ಪಠಿಸುವುದು ಹಾಗೂ 1ರಿಂದ 10ರವರೆಗಿನ ಗುಣಾಕಾರ ಪಟ್ಟಿಗಳನ್ನು 2 ನಿಮಿಷ 43 ಸೆಕೆಂಡ್‌ಗಳಲ್ಲಿ ಹೇಳಿದ ಸಾ‘ನೆಯನ್ನು ಅವನು ಕೇವಲ 5 ವರ್ಷ 8 ತಿಂಗಳ ವಯಸ್ಸಿನಲ್ಲಿ ಸಾಧಿಸಿದ್ದಾನೆ.
ಪ್ರಶಸ್ತಿಯಾಗಿ ಪ್ರಮಾಣಪತ್ರ ಹಾಗೂ ರೂ.10,000 ನಗದು ಬಹುಮಾನ ನೀಡಲಾಗಿದೆ. ಪ್ರತಿ ವರ್ಷ ಸುಮಾರು 5ರಿಂದ 18 ವರ್ಷದೊಳಗಿನ ಸುಮಾರು 20 ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಗಾಗಿ ತಂದೆ ಹರ್ಷ ದೇಶಪಾಂಡೆ, ತಾಯಿ ಶೀತಲ್ ದೇಶಪಾಂಡೆ ಸೇರಿದಂತೆ ದೇಶಪಾಂಡೆ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net