ಅಂದಹಾಗೆ, ಒಂದಷ್ಟು ನೈಜ ಘಟನೆಯನ್ನು ಆಧರಿಸಿ, ಕಾಲ್ಪನಿಕ ಕಥೆಯನ್ನು ಜೋಡಿಸಿ, ನೋಡುಗರಿಗೆ ಉತ್ತಮ ದೃಶ್ಯಗಳನ್ನು ಕಟ್ಟಿಕೊಟ್ಟಿರುವ 'ಧುರಂಧರ್', ಬರೋಬ್ಬರಿ 3 ಗಂಟೆ 49 ನಿಮಿಷಗಳ ದೀರ್ಘ ರನ್ಟೈಮ್ ಹೊಂದಿದೆ. ಮೊದಲ ಭಾಗಕ್ಕೆ ಹೋಲಿಸಿದರೆ, ಇದಕ್ಕೆ ಹೆಚ್ಚಿನ ಸಮಯ ನೀಡಲಾಗಿದೆ. ಈಗಾಗಲೇ ಸಿನಿಮಾ ನೋಡಿರುವ ಪ್ರೇಕ್ಷಕರು ಚಿತ್ರತಂಡದ ಶ್ರಮಕ್ಕೆ, ತೋರಿಸುವ ರೀತಿಗೆ ಮೆಚ್ಚುಗೆ, ಪ್ರಶಂಸೆ ಮತ್ತು ಉತ್ತಮ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಮತ್ತೊಂದೆಡೆ, ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಆದಿತ್ಯ ಧರ್ ಚಿತ್ರ 500 ಕೋಟಿ ರೂ. ಕ್ಲಬ್ಗೆ ಸನ್ನಿಹಿತವಾಗಿದೆ, (ಏಜೆನ್ಸೀಸ್).