ಇಲ್ಲಿನ ಪ್ರವಾಸಿ ಮಂದಿರ, ಪುರಸಭೆ ಹಳೇ ಕಾರ್ಯಾಲಯ, ಗುರುವಾರ ಪೇಟೆ, ಚರಮೂರ್ತಿ ಮಠ, ಹೊಸ ಪೇಟಗಲ್ಲಿ, ಝಾರಿ ಗಲ್ಲಿ ಮಾರ್ಗವಾಗಿ ಹಳ್ಳ ಹರಿಯುತ್ತದೆ. ಅಂದಾಜು 50-100 ಅಡಿ ಅಗಲವಿರುವ ಹಳ್ಳದಲ್ಲಿ ತೆರೆದ ಚರಂಡಿ, ಶೌಚಗೃಹದ ನೀರು, ಕಟ್ಟಡದ ತ್ಯಾಜ್ಯದ ರಾಶಿ ಬಿದ್ದ ಪರಿಣಾಮ ನೀರು ಸರಾಗವಾಗಿ ಹರಿಯದೇ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗಿ ಹಳ್ಳದ ದಡದಲ್ಲಿ ವಾಸಿಸುವ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ.