ಚಿಂತಾಮಣಿಯಲ್ಲೂ ಚಿಕ್ಕಕೆರೆ ಮಾದರಿ ಪ್ಲಾಂಟ್​ / DEVANAHALLI

ದೇವನಹಳ್ಳಿಯ ಚಿಕ್ಕಕೆರೆ ಬಳಿ ಪುರಸಭೆ ಸಹಯೋಗದಲ್ಲಿ ಬಯೋಮ ಸಂಸ್ಥೆ ನಿರ್ವಹಿಸುತ್ತಿರುವ ನೀರು ಶುದ್ಧೀಕರಣ ಘಟಕ್ಕೆ ಸಚಿವ ಎಂ.ಸಿ ಸುಧಾಕರ್​ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭು ಭೇಟಿ ನೀಡಿ ವೀಕ್ಷಿಸಿದರು. ಯೋಜನಾ ನಿರ್ದೇಶಕ ಮಂಜುನಾಥ್​, ಡಿವಿಡಿಸಿಯ ಮಾಧುರಿ, ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಎ.ಶಿವಮೂರ್ತಿ, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಮಂಜಪ್ಪ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ, ಗೋಪಾಲ್​, ಮುನಿರಾಜು, ಬಯೋಮದ ಅವಿನಾಶ್​ ಇತರರು ಇದ್ದರು.
ದೇವನಹಳ್ಳಿಯ ಚಿಕ್ಕಕೆರೆ ಬಳಿ ಪುರಸಭೆ ಸಹಯೋಗದಲ್ಲಿ ಬಯೋಮ ಸಂಸ್ಥೆ ನಿರ್ವಹಿಸುತ್ತಿರುವ ನೀರು ಶುದ್ಧೀಕರಣ ಘಟಕ್ಕೆ ಸಚಿವ ಎಂ.ಸಿ ಸುಧಾಕರ್​ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭು ಭೇಟಿ ನೀಡಿ ವೀಕ್ಷಿಸಿದರು. ಯೋಜನಾ ನಿರ್ದೇಶಕ ಮಂಜುನಾಥ್​, ಡಿವಿಡಿಸಿಯ ಮಾಧುರಿ, ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಎ.ಶಿವಮೂರ್ತಿ, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಮಂಜಪ್ಪ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ, ಗೋಪಾಲ್​, ಮುನಿರಾಜು, ಬಯೋಮದ ಅವಿನಾಶ್​ ಇತರರು ಇದ್ದರು.
Published on
ದೇವನಹಳ್ಳಿ : ಪಟ್ಟಣದ ಕೋಟೆ ಬಳಿಯ ಚಿಕ್ಕಕೆರೆ ಪರಿಸರದಲ್ಲಿ ಬಯೋಮ ಸಂಸ್ಥೆ ಸಹಯೋಗದಲ್ಲಿ ನಿರ್ಮಿಸಿದ ನೀರಿನ ಶುದ್ಧೀಕರಣ ಘಟಕವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್​ ವೀಸಿದರು.
ಇದೇ ಮಾದರಿಯಲ್ಲಿ ಚಿಂತಾಮಣಿಯಲ್ಲಿ ಶುದ್ಧೀಕರಣ ಘಟಕ ಸ್ಥಾಪಿಸುವ ಉದ್ದೇಶದಿಂದ ಸಚಿವರು, ಜಿಲ್ಲಾಧಿಕಾರಿ ಪ್ರಭು ಜತೆ ವೀಕ್ಷಿಸಿ, ಬಯೋಮ ಸಂಸ್ಥೆಯ ಘಟಕ ಸ್ಥಾಪಕ ಅವಿನಾಶ್​ ಅವರಿಂದ ಮಾಹಿತಿ ಪಡೆದುಕೊಂಡರು.
ಸಚಿವರಿಗೆ ಮಾಹಿತಿ ಒದಗಿಸಿ ಬಳಿಕ ಮಾತನಾಡಿದ ಅವಿನಾಶ್​, ಬೆಂಗಳೂರಿನ ಎಚ್​.ಎನ್​.ವ್ಯಾಲಿಯ ಸಂಸ್ಕರಿಸಿದ ತ್ಯಾಜ್ಯ ನೀರು ಚಿಕ್ಕ ಕೆರೆಗೆ ಬರುತ್ತದೆ. ಈ ನೀರು ಇಂಗಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಹಾಗೂ ಕೆರೆ ಅಚ್ಚುಕಟ್ಟು ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗಲಿದೆ. ಆದ್ದರಿಂದ ಪಟ್ಟಣದಲ್ಲಿ ಬೇಸಿಗೆಯಲ್ಲೂ ಕೆರೆಯಲ್ಲಿ ಸದಾ ನೀರು ಇರುವುದರಿಂದ ಜನರಿಗೆ ನೀರಿನ ಕೊರತೆ ಉಂಟಾಗದು ಎಂದರು.
ಅಲ್ಲದೇ, ನೀರನ್ನು ಶುದ್ಧೀಕರಿಸಿ ಸರಬರಾಜಿಗೆ ಮುಂದಾಗಿ ಪುರಸಭೆಯ ಸಹಕಾರದಿಂದ ಈ ಯೋಜನೆ ರೂಪಿಸಿದ್ದೇವೆ. ಕೆರೆ ಪಕ್ಕದಲ್ಲಿದ್ದ ಬಾವಿ ಸ್ವಚ್ಛಗೊಳಿಸಿ ಕೆರೆ ವ್ಯಾಪ್ತಿಯಲ್ಲಿ ಹಾಕಿರುವ ಕೊಳವೆ ಬಾವಿ ಮೂಲಕ ನೀರು ಹಾಯಿಸಲಾಗುವುದು. ಜತೆಗೆ ಬಾವಿಯಲ್ಲಿಯೂ ನೀರಿನ ಪ್ರಮಾಣ ವೃದ್ಧಿಯಾಗುತ್ತಿದೆ. ಇದನ್ನು ವಿವಿಧ ರೀತಿಯಲ್ಲಿ ಮತ್ತೆ ಯಂತ್ರಗಳ ಮೂಲಕ ರಾಸಾಯನಿಕ ಮಿಶ್ರಣ ಬಳಸಿ ಶುದ್ಧೀಕರಿಸಿ ಪುರಸಭೆಯ ಪಂಪ್​ ಹೌಸ್​ ನೀರು ಸಂಗ್ರಹಾಗಾರಕ್ಕೆ ಹರಿಸುತ್ತೇವೆ. ಅಲ್ಲಿಂದ ಪಟ್ಟಣದ ಜನತೆಗೆ ನಲ್ಲಿಗಳ ಮೂಲಕ ಉತ್ತಮ ನೀರು ಸರಬರಾಜು ಆಗಲಿದೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವುದಿಲ್ಲ ಎಂದು ವಿವರಿಸಿದರು.
ಪುರಸಭೆ ಮಾದರಿ : ಮಾಹಿತಿ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್​, ಇದೊಂದು ಉತ್ತಮ ಯೋಜನೆಯಾಗಿದ್ದು, ಇದರಿಂದ ಬಳಕೆಯಾಗಿ ಅನಗತ್ಯ ಪೋಲಾಗುವ ನೀರನ್ನು ಮತ್ತೆ ಶುದ್ಧೀಕರಿಸಿ ಮರುಬಳಕೆ ಮಾಡುವುದರಿಂದ ನೀರಿನ ಕೊರತೆ ನೀಗಲಿದೆ. ಜತೆಗೆ ಹಲವೆಡೆ ನೀರಿನ ಸಮಸ್ಯೆ ಇದೆ. ಹಾಗಾಗಿ ಆರಂಭಿಕವಾಗಿ ಮೊದಲು ಚಿಂತಾಮಣಿಯಲ್ಲಿ ಮಾಡುವ ಉದ್ದೇಶವಿದೆ, ಅದಕ್ಕಾಗಿ ಇಲ್ಲಿ ಪರಿಶೀಲಿಸಿ ನಂತರ ಹಂತಹಂತವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಭಾಗದಲ್ಲಿಯೂ ಇದೇ ಮಾದರಿ ಮಾಡಲಾಗುವುದು ಎಂದರು.
ದೇವನಹಳ್ಳಿ ಜನ ಇದನ್ನು ಒಪ್ಪಿಕೊಂಡಿರುವುದು ನಮಗೂ ಮಾದರಿಯಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳು ಇರುವುದರಿಂದ ನೀರಿನ ಅಗತ್ಯವಿದೆ. ಎಚ್​.ಎನ್​. ವ್ಯಾಲಿ, ಕೆಸಿ ವ್ಯಾಲಿ ಎರಡೂ ಕಡೆಯಿಂದ ನಮ್ಮ ಭಾಗದ ಕೆರೆಗಳಿಗೆ ನೀರು ಹರಿದು ಬರುವುದರಿಂದ ನಾವು ಇಂತಹ ಯೋಜನೆ ರೂಪಿಸಿದರೆ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಇದಕ್ಕೆ ದೇವನಹಳ್ಳಿ ಪುರಸಭೆ ಮಾದರಿಯಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net