ಚಿಕ್ಕಹುಲಿಕುಂಟೆ ವಿಎಸ್​ಎಸ್​ಎನ್​ಗೆ ಆಯ್ಕೆ

Chikkahulikunte selected for VSSN
Chikkahulikunte selected for VSSN
Published on
ಬರಗೂರು: ಬರಗೂರು ಸಮೀಪದ ಚಿಕ್ಕಹುಲಿಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗಿರೀಶ್​ ನಿಡಗಟ್ಟೆ ಹಾಗೂ ಉಪಾಧ್ಯಕ್ಷರಾಗಿ ದೊಡ್ಡ ಹುಲಿಕುಂಟೆ ಲಲಿತಮ್ಮಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ ಗಿರೀಶ್​ ನಿಡಗಟ್ಟೆ ಮಾತನಾಡಿ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಜನಸ್ನೇಹಿ ಆಡಳಿತ ನೀಡುವುದೇ ನನ್ನ ಗುರಿ. ಸಾಲ ಸೌಲಭ್ಯ ಸೇರಿದಂತೆ ಇತರ ಮಾಹಿತಿ ಪಡೆಯಲು ಸಂಘಕ್ಕೆ ಬರುವ ರೈತರಿಗೆ ಪ್ರೀತಿ ವಿಶ್ವಾಸದಿಂದ ಸೇವೆ ನೀಡಿ ಗೌರವಿಸಿದಾಗ ಸಂಘಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಡಿಸಿಸಿ ಬ್ಯಾಂಕ್​ ಮೇಲ್ವಿಚಾರಕ ಎನ್​.ಸಿ.ವಿಠಲ್​ ಮಾತನಾಡಿ, ಅನ್ನದಾತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಸಾಲ ಸೌಲಭ್ಯ ಕಲ್ಪಿಸುವುದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜವಾಬ್ದಾರಿಯಾಗಿದ್ದು, ರೈತರೊಂದಿಗೆ ಸ್ನೇಹ ಸಂಬಂಧವನ್ನು ಉತ್ತಮವಾಗಿ ಇಟ್ಟುಕೊಂಡು ಸಂಘ ಮುನ್ನಡೆಸಿದಾಗ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಸಹಕಾರ ಅಭಿವೃದ್ಧಿ ಅಧಿಕಾರಿ ಟಿ.ಶ್ರೀನಿವಾಸಪ್ಪ, ಸಮಾಜ ಸೇವಕ ಕಿರಣ್​ಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ದನ ಗೌಡ, ಡಾ.ನಾಗರಾಜು, ಎನ್​.ಸಿ ಚಿನ್ನಪ್ಪ, ತಿಪ್ಪೇಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net