ವರ್ಷದೊಳಗೆ ಛತ್ರಪತಿ ಶಿವಾಜಿ ಪುತ್ಥಳಿ ನಿರ್ಮಾಣ Sankranthi
ಹೊಸಕೋಟೆಯ Sankranthi ಚನ್ನಬೈರೆಗೌಡ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಸಿನಿಮಾ ನಟರಾದ ನಾಯಕ ನಟ ಶಾನಿಲ್ ಗುರು ಹಾಗೂ ನಿರ್ದೇಶಕ ಜೆ.ಪಿ.ತುಮಿನಾಡ್ ಅಶೋಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹೊಸಕೋಟೆ: ಮುಂದಿನ ಸಂಕ್ರಾಂತಿ ಒಳಗಾಗಿ ನಗರದಲ್ಲಿ ಛತ್ರಪತಿ ಶಿವಾಜಿ ಪುತ್ಥಳಿ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಬಿಎಂಆರ್ಡಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್ ಕೋರಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮದಲ್ಲಿ ಚಲನಚಿತ್ರ ನಟರನ್ನು ಸನ್ಮಾನಿಸಿ Sankranthi ಮಾತನಾಡಿದ ಅವರು, ನಗರದಲ್ಲಿ ಚಲನಚಿತ್ರ ನಟರಲ್ಲಿ ಬಹಳಷ್ಟು ಜನ ಸಮಸ್ಯೆ ಎದುರಿಸುತಿದ್ದಾರೆ. ಅದರಲ್ಲಿ ಬೆಂಗಳೂರಿನಲ್ಲಿರುವ ಖ್ಯಾತ ಚಲನಚಿತ್ರ ನಟಿ ಲಕ್ಷಿ$್ಮದೇವಿ ಹಾಗೂ ಮಂಜುಳಾ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವೈಯಕ್ತಿಕವಾಗಿ ತಲಾ 50 ಸಾವಿರ ಧನಸಹಾಯ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಿವಾಜಿ ಪುತ್ಥಳಿ ನಿರ್ಮಾಣಕ್ಕೆ 1 ಲಕ್ಷ ರೂ. ದೇಣಿಗೆಯನ್ನು ಮರಾಠ ಸಮಾಜದ ಸಂದ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಶಾಸಕ ಶರತ್ ಬಚ್ಚೇಗೌಡ ಹಾಗೂ ಸೂ ಪ್ರಮ್ ಸೋ ಚಿತ್ರದ ನಾಯಕನಟ ಶಾನಿಲ್ ಗುರು ಹಾಗೂ ನಿರ್ದೇಶಕ ಜೆ.ಪಿ.ತುಮಿನಾಡ್ ಅಶೋಕ್ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಅವರಿಂದ ನಾಯಕತ್ವ ಗುಣ ಕಲಿತಿದ್ದು, ಅವರ ಸಹಕಾರದಿಂದ ಸಂಕ್ರಾಂತಿ ಕಾರ್ಯಕ್ರಮವನ್ನು 30 ವರ್ಷಗಳಿಂದ ಮಾಡಿಕೊಂಡು ಬರುತಿದ್ದೇನೆ. ಈಗ ಶಾಸಕ ಶರತ್ ಬಚ್ಚೇಗೌಡ ಸಹಕಾರ ನೀಡುತಿದ್ದು, ಮುಂದಿನ ದಿನಗಳಲ್ಲಿಯೂ ಈ ಕಾರ್ಯಕ್ರಮದ ಜತೆ ಸಮಾಜ ಸೇವೆ ಮುಂದುವರಿಯಲಿದೆ.