ಚೇತನ್​ ಅಹಿಂಸಾ ಗಡಿಪಾರಿಗೆ ಪಟ್ಟು / DODABALLAPUR

ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಇನ್​ಸ್ಪೆಕ್ಟರ್​ ಅಮರೇಶ್​ ಗೌಡ ಅವರಿಗೆ ಚೇತನ್​ ವಿರುದ್ಧ ಕ್ರಮ ಹಾಗೂ ಗಡಿಪಾರು ಮಾಡುವಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ದೂರು ನೀಡಿದರು. ಡಾ.ರಾಜ್​ ಕುಮಾರ್​ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಸು.ನರಸಿಂಹಮೂರ್ತಿ, ಕನ್ನಡಪರ ಸಂಘಟನೆಗಳ ಮುಖಂಡರಾದ ತ.ನ.ಪ್ರಭುದೇವ, ರಾಜಘಟ್ಟರವಿ, ಡಿ.ಪಿ.ಆಂಜನೇಯ, ಪ್ರಮೀಳಾ ಮಹದೇವ್​, ಪರಮೇಶ್​, ಚೌಡರಾಜ್​, ರಮೇಶ್​, ಜನಪರ ಮಂಜು, ಗುರು, ನವೀನ್​, ಸೂರಿ, ಮಂಜು, ಮನು, ನಾಗಣ್ಣ ಮತ್ತಿತರರಿದ್ದರು.

Published on
ದೊಡ್ಡಬಳ್ಳಾಪುರ : ವರನಟ ಡಾ.ರಾಜಕುಮಾರ್​ ವಿರುದ್ಧ ನಟ ಚೇತನ್​ ಅಹಿಂಸಾ ನೀಡಿರುವ ಹೇಳಿಕೆ ಖಂಡಿಸಿ ನಗರದ ಡಿ.ಕ್ರಾಸ್​ ವೃತ್ತದಲ್ಲಿ ತಾಲೂಕಿನ ರಾಜಕುಮಾರ್​ ಸಂಘಟನೆ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದವು. ಅಲ್ಲದೆ ಪೊಲೀಸ್​ ಠಾಣೆಗೆ ದೂರು ನೀಡಿ ಗಡಿಪಾರಿಗೆ ಒತ್ತಾಯ ಮಾಡಿದವು.
ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್​ ಮಾತನಾಡಿ, ಕನ್ನಡ ಚಿತ್ರರಂಗ ಹಾಗೂ ಭಾಷೆಗೆ ಡಾ.ರಾಜಕುಮಾರ್​ ಕೊಡುಗೆ ಅಪಾರ. ಆದರೆ, ರಾಜ್​ಕುಮಾರ್​ ಅವರ ಇತಿಹಾಸ ತಿಳಿಯದೆ ಅವರ ಸ್ಮಾರಕ ನಿಮಾರ್ಣಕ್ಕೆ ಏಕೆ 2.5 ಎಕರೆ ಜಾಗ ನೀಡಬೇಕು ಎಂದು ನಟ ಚೇತನ್​ ಹೇಳಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಡು, ನುಡಿ, ಜಲದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ರಾಜಕುಮಾರ್​ ಅಂದು ಗೋಕಾಕ್​ ಚಳವಳಿಯಲ್ಲಿ ಭಾಗವಹಿಸದೆ ಇದ್ದರೆ ಇಂದು ಕರ್ನಾಟಕ ಹೊರ ರಾಜ್ಯದ ಪಾಲಾಗುತ್ತಿತ್ತು. ಅಂದು ಪರ ರಾಜ್ಯಗಳ ಚಿತ್ರಗಳು ವಿಜೃಂಭಿಸುತ್ತಿದ್ದವು. ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರಲಿಲ್ಲ. ರಾಜಕುಮಾರ್​ ಹೋರಾಟದ ಫಲವಾಗಿ ಅವಕಾಶ ಲಭಿಸಿತು. ಚೇತನ್​ ಅಹಿಂಸಾ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಈತನ ಗಡಿಪಾರು ಮಾಡುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net