ಅನ್ನಹಾಕಿ ಹರಸುತ್ತಿದ್ದ ಚೆನ್ನಮ್ಮ / DEVANAHALLI

ದೇವನಹಳ್ಳಿ ಜೆಡಿಎಸ್​ ಕಚೇರಿಯಲ್ಲಿ ಚೆನ್ನಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್​ ಜಿಲ್ಲಾಧ್ಯಕ್ಷ ಕೆ.ವಿ.ಮಂಜುನಾಥ್​, ತಾಲೂಕು ಮಹಿಳಾ ಅಧ್ಯೆ ಮೀನಾ ಮುನಿಕೃಷ್ಣಪ್ಪ, ಅಧ್ಯಕ್ಷ ಎಸ್​.ಮಹೇಶ್​, ಕಾರ್ಯಾಧ್ಯಕ್ಷ ಜಿ.ಎ.ರವೀಂದ್ರ, ಪ್ರಧಾನ ಕಾರ್ಯದರ್ಶಿ ಮನೊಹರ್​ ಇದ್ದರು.

Published on
ದೇವನಹಳ್ಳಿ : ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಅವರ ಪತ್ನಿ ಚೆನ್ನಮ್ಮ ಅವರು ಮಾತೃಸ್ವರೂಪಿ.
ಮನೆಗೆ ಯಾರೇ ಹೋದರೂ ಮೊದಲು ಅನ್ನಹಾಕಿ ಹರಸುತ್ತಿದ್ದರು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸ್ಮರಿಸಿದರು.
ಪಟ್ಟಣದ ಜೆಡಿಎಸ್​ ಕಚೇರಿಯಲ್ಲಿ ಚೆನ್ನಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಮಾಜಿ ಶಾಸಕರು, ನನಗೆ ಸ್ಪರ್ಧಿಸಲು ಬಿ.ಫಾಮ್​ರ್ ನೀಡಿರಲಿಲ್ಲ. ನಾನು ದೇವೇಗೌಡರ ಬಳಿ ಹೋಗಿ ಪಟ್ಟು ಹಿಡಿದು ಸಿ. ಾಮ್​ರ್ ಪಡೆದು, ಚೆನ್ನಮ್ಮ ಅವರಿಗೆ ನಮಸ್ಕರಿಸಿದಾಗ, ನೀನು ಗೆಲ್ಲುತ್ತೀಯ ಹೋಗು ಎಂದು ಆಶೀರ್ವದಿಸಿದ್ದರು ಎಂದು ನೆನೆದರು.
ಜು.30ರಂದು ವೈಕುಂಠ ಸಮಾರಾಧನೆ ಇದ್ದು, ಕಾರ್ಯಕರ್ತರಿಗೆ ದೇವನಹಳ್ಳಿಯಿಂದ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಬರುವರು ಮುಂಚಿತವಾಗಿಯೇ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
ತಾಲೂಕು ಎಸ್ಸಿ ಟಕದ ಅಧ್ಯಕ್ಷ ರಾಮಣ್ಣ, ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷರಾದ ಸಂಪಂಗಪ್ಪ, ನಾರಾಯಣಸ್ವಾಮಿ, ಪಟಾಲಪ್ಪ, ಎಸ್​.ಎಲ್​.ಎನ್​.ಮುನಿರಾಜು, ಶೈಲಜಾ, ವಕ್ತಾರ ಗಂಗಾಧರ್​, ಟೌನ್​ ಅಧ್ಯಕ್ಷ ಮುನಿನಂಜಪ್ಪ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಸ್​.ನಾಗೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net