ಗ್ರಾಮೀಣರಿಗೆ ತಪಾಸಣಾ ಶಿಬಿರಗಳು ವರದಾನ

Check-up camps are a boon for rural residents.
Check-up camps are a boon for rural residents.
Published on
ಪಾವಗಡ: ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕೆಲಸ ಮಾಡುವ ರೈತಾಪಿ ಜನರಿಗೆ ನಾನಾ ರೀತಿಯ ನೇತ್ರ ನ್ಯೂನತೆಗಳು ಕಂಡು ಬರುತ್ತಿದ್ದು, ಪೋರೈಡ್​ ಯುಕ್ತ ನೀರನ್ನು ಉಪಯೋಗಿಸಿದ ಸಾರ್ವಜನಿಕರಿಗೆ, ಶಿಶುಗಳಿಗೆ, ಮಕ್ಕಳಿಗೆ ದೃಷ್ಟಿ ದೋಷ ಬರುವುದು ಸಹಜವಾಗಿದೆ ಎಂದು ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯ ಜಪಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀ ಶಾರದದೇವಿ ಕಣ್ಣಿನ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಗ್ರಾಮೀಣರಿಗೆ ಉಚಿತ ನೇತ್ರ ತಪಾಸಣಾ ಶಿಬಿರಗಳು ವರದಾನವಾಗಿದೆ ಎಂದರು.
ಖ್ಯಾತ ಮಕ್ಕಳ ನೇತ್ರ ಚಿಕಿತ್ಸಕ ಡಾ.ವಸುಧಾ ನರೇಶ್​ ಅವರು ತಿಂಗಳಿಗೊಮ್ಮೆ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ದೂರದ ಚಳ್ಳಕೆರೆ, ಚಿತ್ರದುರ್ಗ, ಕಲ್ಯಾಣದುರ್ಗ, ಅನಂತಪುರ, ಹಿಂದೂಪುರ, ಮಧುಗಿರಿ ಸೇರಿ ತಾಲೂಕಿನ ಗ್ರಾಮೀಣ ಭಾಗದ ರೋಗಿಗಳು ಭಾಗವಹಿಸಿ ಔಷಧೋಪಚಾರ ಮತ್ತು ಉಚಿತ ಕನ್ನಡಕಗಳನ್ನು ಪಡೆದರು ಎಂದು ಮಾಹಿತಿ ನೀಡಿದರು.
ಶಿಬಿರದಲ್ಲಿ ರೆಟಿನಾ ತಜ್ಞೆ ಡಾ.ಲಾವಣ್ಯ ಅವರು ಸುಮಾರು 40 ರೋಗಿಗಳಿಗೆ ನೇತ್ರ ಪರೀೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net