ಕರೊನಾದಿಂದ ಹೃದಯಾಘಾತ ಹೆಚ್ಚಾಯಿತು ಎಂಬ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಆದರೆ, ಕರೊನಾಗೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ. ಹೃದಯಾಘಾತಕ್ಕೆ ಇಂದಿನ ಜೀವನ ಶೈಲಿ ಪ್ರಮುಖ ಕಾರಣವಾಗಿದೆ. ಹಿಂದಿನ ಆಹಾರ ಪದ್ಧತಿ, ಈಗಿನ ಆಹಾರ ಪದ್ಧತಿಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ತಿಂಗಳಿಗೆ 150ರಷ್ಟು ಹೃದಯಾಘಾತ ಪ್ರಕರಣ ಕಂಡುಬರುತ್ತಿದೆ. ಇದಕ್ಕೆ ವಂಶಾವಳಿಯೂ ಕಾರಣ. ಹಾಗೆಯೇ, ಜನರು ಅತಿಯಾಗಿ ಬಳಸುತ್ತಿರುವ ಎಣ್ಣೆ, ಸಕ್ಕರೆ, ಅನ್ನ ಸೇವನೆ ಇವುಗಳಿಂದ ಹೆಚ್ಚಾಗಿ ಹೃದಯಾಘಾತ ಕಂಡುಬರುತ್ತಿದೆ. ಪ್ರಮುಖವಾಗಿ ಒತ್ತಡದ ಬದುಕಿನಿಂದ ಹೃದಯಾಘಾತವಾಗುತ್ತಿದೆ. ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ಇದು ಸಹ ಕಾರಣವಾಗಿದೆ ಎಂದರು.