ಹೊಸ ವರ್ಷಕ್ಕೆ ಮಳೆ ಬೀಳುವ ಸಾಧ್ಯತೆ-Rain

 ಮಳೆ
ಮಳೆ
Published on
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ ನಡುವೆಯೂ ಹೊಸ ವರ್ಷಕ್ಕೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರದಲ್ಲಿ ಜ.1ರಿಂದ 2 ದಿನ ಸಾಧಾರಣ ಮಳೆಯಾಗಲಿದೆ.
ಕನಿಷ್ಠ ತಾಪಮಾನದಲ್ಲಿ ಹಾಸನ 8.1 ಡಿ.ಸೆ., ವಿಜಯಪುರ 9.5, ಬೀದರ್ 10, ಬೆಳಗಾವಿ 10.2, ಧಾರವಾಡ 10.5 ಮತ್ತು ಮೂಡಗೆರೆ 11.7 ಡಿ.ಸೆ. ಉಷ್ಣಾಂಶ ಶುಕ್ರವಾರ ದಾಖಲಾಗಿದೆ. ಈ ಜಿಲ್ಲೆಗಳಲ್ಲಿ ವಾಡಿಕೆಗಿಂತ 4ರಿಂದ 6 ಡಿ.ಸೆ.ಉಷ್ಣಾಂಶ ಇಳಿಮುಖವಾಗಿದೆ.
ಬೆಂಗಳೂರು ನಗರ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಆಗಾಗ್ಗೆ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಉತ್ತರ ಕರ್ನಾಟಕ ಸೇರಿ ಕೆಲ ಜಿಲ್ಲೆಗಳಲ್ಲಿ ರಾತ್ರಿ ಥಂಡಿ ವಾತಾವರಣದ ಜತೆಗೆ ಶೀತಗಾಳಿ ಬೀಸುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net