ರಾಜ್ಯದೊಂದಿಗೆ ಹೆಗಲುಕೊಟ್ಟ ಕಾರ್ಯನಿರ್ವಹಿಸಲು ಕೇಂದ್ರ ಸಿದ್ಧ-Shivraj Singh Chauhan

ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್
Published on
ಬೆಂಗಳೂರು: ಕರ್ನಾಟಕದಲ್ಲಿ ಕೃಷಿ ಬಲವರ್ಧನೆಗೆ ಕೇಂದ್ರ ಸರ್ಕಾರ, ಯಾವುದೇ ಬೇಧ ಭಾವ ಮಾಡದೆ ರಾಜ್ಯ ಸರ್ಕಾರದೊಂಗೆ ಹೆಗಲು ಕೊಟ್ಟು ಕೆಲಸ ನಿರ್ವಹಿಸಲು ಸಿದ್ಧ ಇದ್ದೇವೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಪಾದಿಸಿದ್ದಾರೆ.
ಕೃಷಿ ಇಲಾಖೆ ವತಿಯಿಂದ ಅರಮನೆ ಅವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ವಾಣಿಜ್ಯ ಮೇಳದ’ ಸಮಾರೋಪದಲ್ಲಿ ಅವರು ಮಾತನಾಡಿದರು.
ರೈತರೆಂದರೆ ರಾಜಕೀಯ ಮೀರಿ ಉನ್ನತ ಸ್ಥಾನದಲ್ಲಿರುವವರು. ರೈತರ ಆದಾಯ ಹೆಚ್ಚಿಸಲು, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಚಟುವಟಿಕೆಗಳ ವಿಸ್ತರಿಸಲು ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ಅನ್ನದಾತರಿಗೆ ಅರ್ಥಪೂರ್ಣ ಕೆಲಸ, ನ್ಯಾಯಸಮ್ಮತ ಬೆಲೆ ಮತ್ತು ಸಮಯೋಚಿತ ನೆರವು ಸಿಗಬೇಕು. ಯಾವ ಪಕ್ಷ ಅಧಿಕಾರದಲ್ಲಿದ್ದರೂ, ರೈತರಿಗೆ ಸೇವೆ ಸಲ್ಲಿಸುವುದು ಕೇಂದ್ರ ಮತ್ತು ರಾಜ್ಯಗಳ ಜವಾಬ್ದಾರಿಯಾಗಿದೆಯಾಗಿದೆ ಎಂದರು.
ಕರ್ನಾಟಕದ ಮಣ್ಣು ಅತ್ಯುತ್ತಮವಾಗಿದ್ದು, ಅನ್ನ ಮತ್ತು ಸಿರಿಧಾನ್ಯಗಳ ಪ್ರಚಾರ ಕರ್ನಾಟಕದಲ್ಲೇ ಆರಂಭವಾಗಿ ಇಂದು ವಿಶ್ವಮಟ್ಟದಲ್ಲಿ ವಿಸ್ತರಣೆಗೊಂಡಿದೆ. ಸಿರಿಧಾನ್ಯ ಬೆಳೆಗಾರರಿಗೆ ಬೆಂಬಲ ಮುಂದುವರಿಯಲಿದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ಯೋಜನೆಗಳನ್ನು ತರಲಾಗುವುದು. ಮೌಲ್ಯವರ್ಧನೆ, ಸಂಸ್ಕರಣೆ ಮತ್ತು ಮಾರುಕಟ್ಟೆ ವಿಸ್ತರಣೆಯಿಂದ ರೈತರಿಗೆ ಲಾಭದಾಯಕ ಬೆಲೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ಪ್ರಸ್ತುತ ಆಯೋಜಿಸಿರುವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಮಯೋಚಿತವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಕಂದಾಯ ಸಚಿವ ಕೃಷ್ಣಬೈರೇಗೌಡ, ಕೃಷಿಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಆಯುಕ್ತ ವೈ.ಎಸ್. ಪಾಟೀಲ್, ನಿರ್ದೇಶಕ ಡಾ. ಜಿ.ಟಿ. ಪುತ್ರ ಮತ್ತಿತರಿದ್ದರು.
ಪಲ್ಸ್ ಮಿಷನ್ ಅಡಿ ಬೆಂಬಲ:
ತೊಗರಿ ಮತ್ತು ತೊಗರಿ ಬೇಳೆ ಉತ್ಪಾದನೆಯಲ್ಲಿ ಕರ್ನಾಟಕವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ, ಪ್ರತಿ ಹೆಕ್ಟೇರ್ ಉತ್ಪಾದನೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದ್ದು, ಅದನ್ನು ಹೆಚ್ಚಿಸುವ ಅಗತ್ಯವಿದೆ. ಇದಕ್ಕಾಗಿ ಪಲ್ಸ್ ಮಿಷನ್ ಅಡಿಯಲ್ಲಿ ಉತ್ಪಾದಕತೆ ಹೆಚ್ಚಿಸಲು ಕೇಂದ್ರದಿಂದ ಸಂಪೂರ್ಣ ವೈಜ್ಞಾನಿಕ ಮತ್ತು ತಾಂತ್ರಿಕ ಬೆಂಬಲ ನೀಡಲಾಗುವುದು ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು. ಬೆಳೆ ಮಿಷನ್ ಮತ್ತು ಗ್ರಾಮೀಣ ಮಿಷನ್ ಅಡಿಯಲ್ಲಿ ಕರ್ನಾಟಕಕ್ಕೆ 191.67 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ. ಅನುಮೋದನಾ ಪತ್ರವನ್ನು ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುತ್ತದೆ. ರಾಷ್ಟ್ರೀಯ ಕೃಷಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬಾಕಿ ಇರುವ 154 ಕೋಟಿ ರೂಪಾಯಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು.
ಪ್ರತಿ ದಾಲ್‌ಮಿಲ್‌ಗೆ ಕೇಂದ್ರದಿಂದ 25 ಲಕ್ಷ
ಸಂಸ್ಕರಣಾ ಮೂಲಸೌಕರ್ಯದ ಅಗತ್ಯವನ್ನು ಉಲ್ಲೇಖಿಸಿದ ಅವರು, ಕರ್ನಾಟಕದಲ್ಲಿ 35 ದಾಲ್ ಮಿಲ್‌ಗಳ ಸ್ಥಾಪನೆಗೆ ಬೆಂಬಲ ಘೋಷಿಸಿದರು. ಪ್ರತಿಯೊಂದು ಮಿಲ್‌ಗೆ ಕೇಂದ್ರದಿಂದ 25 ಲಕ್ಷ ರೂ.ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ತೆಂಗು ಬೆಳೆಯಲ್ಲಿ ಕರ್ನಾಟಕಕ್ಕೆ ವಿಶಿಷ್ಟ ಸ್ಥಾನವಿದ್ದರೂ ರಾಜ್ಯದಲ್ಲಿ ಇತ್ತೀಚೆಗೆ ಹಳೆಯ ತೋಟಗಳು ಮತ್ತು ರೋಗಗಳಿಂದ ಉತ್ಪಾದನೆ ಕುಂಠಿತಗೊಂಡಿದೆ. ಹೀಗಾಗಿ, ಹೊಸ ತಳಿಗಳನ್ನು ನೆಡುವ ಮೂಲಕ ಹಳೆಯ ತೋಟಗಳನ್ನು ಬದಲಿಸಲು ತೆಂಗು ಅಭಿವೃದ್ಧಿ ಯೋಜನೆ ಜಾರಿಗೊಳ್ಳಲಿದೆ. ರೋಗ ನಿಯಂತ್ರಣಕ್ಕಾಗಿ ವೈಜ್ಞಾನಿಕ ತಂಡಗಳನ್ನು ರಚಿಸಲಾಗಿದೆ. ರಾಜ್ಯ ಸರ್ಕಾರ ಸಕಾಲದಲ್ಲಿ ಪ್ರಸ್ತಾವನೆ ಕಳುಹಿಸಿ ಯೋಜನೆಯ ಪ್ರಯೋಜನ ಪಡೆಯುವಂತಾಗಲಿ ಎಂದು ಅಶಿಸಿದರು.
ಕೇಂದ್ರ ಕೃಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಿ ಹೊರಹೊಮ್ಮಿದ್ದು, ಕೃಷಿ ಕ್ಷೇತ್ರದಲ್ಲಿ ರ್ತು ಮತ್ತು ಮೂಲಸೌಕರ್ಯ ವಿಸ್ತರಿಸಲು ಕೇಂದ್ರ ಸರ್ಕಾರದ ಹೆಚ್ಚಿನ ಬೆಂಬಲ ಅಗತ್ಯವಿದೆ. ರೈತರನ್ನು ಕೃಷಿ ಉದ್ಯಮಿಗಳಾಗಿ ರೂಪಿಸಲು ಹಾಗೂ ದೇಶದ ಕೃಷಿ ಆರ್ಥಿಕತೆಯನ್ನು ಬಲಪಡಿಸುವುದಕ್ಕೂ ಕೇಂದ್ರ-ರಾಜ್ಯಗಳ ಸಮನ್ವಯತೆ ಅತ್ಯಂತ ಅಗತ್ಯ. ಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳ ಅಧಿಕೃತೀಕರಣ ಯೋಜನೆ ಸೇರಿ ಕೇಂದ್ರ ಯೋಜನೆಗಳಡಿ ಕರ್ನಾಟಕವು ಗಮನಾರ್ಹ ಸಾಧನೆ ಮಾಡಿದೆ. ಮುಂದಿನ ಹಂತದ ಅಭಿವೃದ್ಧಿಗೆ ುಡ್ ಪಾರ್ಕ್‌ಗಳು, ಕೋಲ್ಡ್ ಸ್ಟೋರೇಜ್, ಸಾರಿಗೆ ವ್ಯವಸ್ಥೆ, ಬ್ರಾಂಡಿಂಗ್ ಮತ್ತು ರ್ತು ಕ್ಷೇತ್ರಗಳಲ್ಲಿ ಕೇಂದ್ರದ ನೆರವು ಅಗತ್ಯವಿದೆ.
ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net