ಸರಣಿ ಕಾರ್ಯಕ್ರಮಗಳು: ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ‘ಗ್ರಾಮೀಣ ಯೋಗ’, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ‘ವಿಜ್ಞಾನ ಯೋಗ’, ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ‘ಕಾರ್ಸಿನೋ ಯೋಗ’, ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ‘ಕಾರ್ಡಿಯೋ ಯೋಗ’, ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಲ್ಲಿ ‘ರಾಷ್ಟ್ರೀಯ ಯೋಗ’ ಮತ್ತು ‘ವಿದ್ಯಾರ್ಥಿ ಯೋಗ’ ಕಾರ್ಯಕ್ರಮಗಳು ನಡೆಯಲಿವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.