ಭಾರತ ಜನಗಣತಿ-2027: ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ಪಾಲಿಕೆ ಅಯುಕ್ತರು ಮನವಿ

ಅವಿನಾಶ್ ಶಿಂಧೆ
ಅವಿನಾಶ್ ಶಿಂಧೆ
Published on
ಕಲಬುರಗಿ: ಭಾರತದ ಜನಗಣತಿ 2027ರ ಭಾಗವಾಗಿ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದೇ ಏಪ್ರಿಲ್ ಒಂದರಿಂದ ಏಪ್ರಿಲ್ 15 ರವರೆಗೆ ಮೊದಲನೇ ಹಂತದ ಡಿಜಿಟಲ್ ಗಣತಿ (ಸ್ವಯಂ ಗಣತಿ) ಕಾರ್ಯವು ನಡೆಯಲಿದ್ದು, ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಪ್ರಧಾನ ಜನಗಣತಿ ಅಧಿಕಾರಿಗಳಾದ ಅವಿನಾಶ್ ಶಿಂಧೆ ಅವರು ಮನವಿ ಮಾಡಿದ್ದಾರೆ.
ಭಾರತದ ಜನಗಣತಿ ಕಾಯ್ದೆ 1948ರ ಪ್ರಕಾರ ಭಾರತದ ಜನಗಣತಿ 2027ರ ಕಾರ್ಯವು ಎರಡು ಹಂತಗಳಲ್ಲಿ ನಡೆಯಲಿದೆ. ಏಪ್ರಿಲ್ ಒಂದರಿಂದ ಏಪ್ರಿಲ್ 15 ರವರೆಗೆ ನಗರವಾಸಿಗಳು ಅಂತರ್ಜಾಲದ ಮೂಲಕ ಸ್ವಯಂ ನೊಂದಣಿಗೆ ಅವಕಾಶ ಕಲ್ಪಿಸಿದೆ. ಸರಳವಾದ ಹಂತಗಳನ್ನು ಅನುಸರಿಸುವ ಮೂಲಕ 15 ರಿಂದ 20 ನಿಮಿಷಗಳಲ್ಲಿ ತಮ್ಮ ಮನೆಯ ಸ್ವಂತ ಗಣತಿಯನ್ನು ಮಾಡಿಕೊಂಡು ಸ್ವಯಂ ಗಣತಿಯ ಗುರುತಿನ ಸಂಖ್ಯೆ ಪಡೆದುಕೊಂಡು ಎರಡನೇ ಹಂತದಲ್ಲಿ ಏಪ್ರಿಲ್ 16 ರಿಂದ ಮೇ 15ರವರೆಗೆ ಗಣತಿದಾರರು ಮನೆಗೆ ಭೇಟಿ ನೀಡಿದಾಗ ವಿಶೇಷ ಸಂಖ್ಯೆ ನೀಡಿ ಗಣತಿ ಕಾರ್ಯ ಪೂರ್ಣಗೊಳಿಸಬಹುದಾಗಿದೆ.
ಕಾಯ್ದೆಯ ಪ್ರಕಾರ ಗಣತಿಯಲ್ಲಿ ಸಂಗ್ರಹಿಸುವ ಮಾಹಿತಿ, ಹೆಸರು, ಗುರುತು ಗೌಪ್ಯವಾಗಿ ಇರಿಸಲಾಗುತ್ತದೆ ಹಾಗೂ ಯಾವುದೇ ತೆರಿಗೆ ಅಥವಾ ಪರಿಶೋಧನೆ ಉದ್ದೇಶಕ್ಕೆ ದತ್ತಾಂಶವನ್ನು ಬಳಸಿಕೊಳ್ಳುವುದಿಲ್ಲ ಇದು ಸುರಕ್ಷಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net